
ನೂರ್‌ಪುರ,ನ.೨- ಜಗತ್ತಿನಲ್ಲಿ ನಿತ್ಯ ಒಂದಲ್ಲಾ ಒಂದು ವಿಚಿತ್ರ ನಡೆಯುತ್ತಲೇ ಇರುತ್ತದೆ. ಆಶ್ಚರ್ಯಕರ ಘಟನೆಗಳು ಜರುಗಿ ಜನರನ್ನು ವಿಸ್ಮಯಗೊಳಿಸುತ್ತವೆ
ಇದೀಗ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ನವೀನ್ ಕುಮಾರ್ ಅವರ ಮನೆಯಲ್ಲಿ ಹಸುವೊಂದು ಮೂರು ಮುದ್ದಾದ ಕರುಗಳಿಗೆ ಜನ್ಮ ನೀಡಿದೆ. ಈ ಘಟನೆ ತುಂಬಾ ಅಪರೂಪ ಎನ್ನಲಾಗಿದೆ. ಹಸು ಮತ್ತು ಕರುಗಳು ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ ನವೀನ್ ಕುಮಾರ್ ಅವರ ಹಸು ಗರ್ಭಿಣಿಯಾಗಿತ್ತು. ಸದ್ಯ ೩ ಕರುಗಳಿಗೆ ಜನ್ಮ ನೀಡಿದೆ. ಹಸು ಮೂರು ಕರುಗಳಿಗೆ ಜನ್ಮ ನೀಡಿದ ಸುದ್ದಿ ಅಕ್ಕಪಕ್ಕದಲ್ಲಿ ಗಾಳಿಯಂತೆ ಹಬ್ಬಿದ ಪರಿಣಾಮ ಹಸು ಹಾಗೂ ಕರುಗಳನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದಾರೆ
ಇದಕ್ಕೆ ಪ್ರತಿಕ್ರಿಯಿಸಿದ ಹಸುವಿನ ಮಾಲೀಕ ನವೀನ್ ಕುಮಾರ್ ಕುಟುಂಬಸ್ಥರು, ಇಂತಹ ಸುದ್ದಿಗಳನ್ನು ಓದಿದ್ದೆವು, ಆದರೆ ಈಗ ನಮ್ಮ ಹಸು ಮೂರು ಮಕ್ಕಳಿಗೆ ಜನ್ಮ ನೀಡಿದ್ದು ಆಶ್ಚರ್ಯ ಹಾಗೂ ಸಂತಸ ತಂದಿದೆ ಎಂದಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಡೆಹ್ರಿಯ
ಪಶು ವೈದ್ಯ ಸುನಿಲ್ ಧಿಮಾನ್ ಹಸು ಮತ್ತು ಕರುಗಳನ್ನು ಪರಿಶೀಲಿಸಿದ್ದಾರೆ.