ಮೂರುಸಾವಿರ ಕೋಟಿ ಕಾಮಗಾರಿ ಕೇಂದ್ರ ಗೃಹ ಸಚಿವರಿಂದ ಉದ್ಘಾಟನೆ

ಮಾನ್ವಿ,ಮಾ.೨೬- ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ೩೧೦೦ ಸಾವಿರ ಕೋಟಿಯಷ್ಟು ಕಾಮಗಾರಿಯನ್ನು ಉದ್ಘಾಟನೆ ಮಾಡುವುದಕ್ಕೆ ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಆಗಮಿಸುತ್ತಿದ್ದಾರೆ. ಆದರಿಂದ ನಮ್ಮ ಮಾನವಿ ತಾಲೂಕಿನಿಂದ ೫೦ ಸಾವಿರ ಕ್ಕೂ ಹೆಚ್ಚಿನ ಜನಸಂಖ್ಯೆ ಸೇರುವಂತೆ ಮಾಜಿ ಶಾಸಕ ಗಂಗಾಧರ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು ಸುಮಾರು ೩೧೦೦ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡ ಈ ಜಿಲ್ಲೆಯ ಇತರೆ ಸಮಸ್ಯೆಗಳನ್ನು ಆಲಿಸಿ ಅದಕ್ಕೂ ಪರಿಹಾರ ನೀಡುವ ನಿಟ್ಟಿನಲ್ಲಿ ಆಗಮಿಸಲಿದ್ದು ನಮ್ಮ ಕ್ಷೇತ್ರ ಸೇರಿದಂತೆ ರಾಯಚೂರು ಜಿಲ್ಲೆಯಿಂದ ಒಟ್ಟು ಮೂರು ಲಕ್ಷಕ್ಕೂ ಅಧಿಕ ಜನರು ಕಾರ್ಯಕರ್ತರು ಆಗಮಿಸುತ್ತರೆ ಎಂದು ನಮ್ಮ ಪಕ್ಷದ ಎಲ್ಲಾ ಮಂಡಳದ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಜನರನ್ನು ಸೇರಿಸುವಂತೆ ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರದ ಗೃಹ ಮಂತ್ರಿ ಅಮೀತ್ ಶಾ ಅವರ ನಮ್ಮ ಭಾಗದ ಚಿಕಲಪರ್ವಿ ಬ್ರಿಜ್ ಮತ್ತು ನೀರಾವರಿ ಸಂಬಂದಿಸಿದ ನವಲಿ ಜಲಾಶಯ, ಹಾಗೂ ರಿಮ್ಸ್ ಆಸ್ಪತ್ರೆ ಸೇರಿದಂತೆ ಇನ್ನೂ ಮುಂತಾದವು ಅಭಿವೃದ್ಧಿಯ ಕಾಮಗಾರಿ ಪ್ರಸ್ತಾಪ ಅಗುವ ಸಾದ್ಯತೆಗಳಿವೆ ಎಂದರು. ಅದ್ದರಿಂದ ನಮ್ಮ ಮಾನವಿ ತಾಲೂಕನಿಂದ ಐವತ್ತು ಸಾವಿರ ಕಿಂತ ಹೆಚ್ಚಿನ ಜನರು ಸೇರುವಂತೆ ತಿಳಿಸಿದರು.
ಈ ಸಂಧರ್ಭದಲ್ಲಿ ಪಕ್ಷದ ಪದಾಧಿಕಾರಿಗಳಾದ ರಾಮನಗೌಡ ಗವಿಗಟ್ಟು, ಶ್ರೀ ಕಾಂತಗೂಳಿ, ವೆಂಕಟೇಶ ಕೆ .ಚಂದ್ರಶೇಖರ, ಜಗದೀಶ್ ಕುರ್ಡಿ, ಸೈಯದ್ ಉಸ್ಮಾನ್,ಶರಣು ಗುತ್ತೇದಾರು ಇನ್ನಿತರರು ಇದ್ದರು.