ಮೂರನೇ ಹಂತದ ಶಾಲಾ ಪೂರ್ವ ಶಿಕ್ಷಣ ತರಬೇತಿ

ರಾಯಚೂರು.ನ.11- ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಜಿಲ್ಲಾ ಪಂಚಾಯತ್ ರಾಯಚೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಯಚೂರು ಹಾಗೂ ಕಲಿಕಾ- ಟಾಟಾ ಟ್ರಸ್ಟ್ಸ್ ಇವರುಗಳು ಸಹಯೋಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೂರನೆ ಹಂತದ ಶಾಲಾಪೂರ್ವ ಶಿಕ್ಷಣ ಬಲವರ್ಧನೆಯ ತರಬೇತಿಯನ್ನು ಲಿಂಗಸಗೂರು ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯ ಹಟ್ಟಿ ವಲಯದ ಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಿನ್ನೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಕ್ರಮವನ್ನು ಲಿಂಗಸಗೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶರಣಮ್ಮ ಅವರು ಉದ್ಘಾಟಿಸಿ ಮಾತನಾಡುತ್ತಾ ಶಾಲಾಪೂರ್ವ ಶಿಕ್ಷಣ ಯೋಜನೆ ನಮ್ಮ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮೂಲ ಉದ್ದೇಶವಾಗಿದ್ದು ಈ ಮೂಲ ಉದ್ದೇಶವನ್ನು ಮಕ್ಕಳ ಹಂತಕ್ಕೆ ತಲುಪಿಸುವ ಮುಖಾಂತರ ಮಕ್ಕಳ ಭವಿಷ್ಯವನ್ನು ಅವರ ಶೈಕ್ಷಣಿಕ ಜೀವನಕ್ಕೆ ನಮ್ಮ ಅಂಗನವಾಡಿ ಕೇಂದ್ರದಲ್ಲಿ ಭದ್ರ ಬುನಾದಿಯನ್ನು ನೀಡುವುದರ ಮೂಲಕ ನಮ್ಮ ಈ ಭಾಗದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ನಾವುಗಳು ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ತರಬೇತಿಯಲ್ಲಿ ಅಚ್ಚುಕಟ್ಟಾಗಿ ಭಾಗವಹಿಸಿ ತರಬೇತಿ ಪಡೆದುಕೊಂಡು ಮಕ್ಕಳಿಗೆ ಚಟುವಟಿಕೆಗಳನ್ನು ಮಾಡುವ ಮುಖಾಂತರ ನಮ್ಮ ಅಂಗನವಾಡಿ ಕೇಂದ್ರಗಳ ಶಾಲಾಪೂರ್ವ ಶಿಕ್ಷಣ ಮತ್ತು ಮಕ್ಕಳಿಗೆ ಆಕರ್ಷಣೆಯ ತಾಣವನ್ನಾಗಿ ಮಾಡಬೇಕೆಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಶೈಲ ಡಂಬಳ ಜಿಲ್ಲಾ ವ್ಯವಸ್ಥಾಪಕರು ಶಾ.ಪೂ.ಶಿ ಇವರು ಮಾತನಾಡಿ ಕೆ.ಕೆ.ಆರ್.ಡಿ.ಬಿ.ಮತ್ತು ಕಲಿಕಾ-ಟಾಟಾ ಟ್ರಸ್ಟ್ಸ ವತಿಯಿಂದ ಶಾಲಾಪೂರ್ವ ಶಿಕ್ಷಣ ಬಲವರ್ಧನಾ ಯೋಜನೆಯು ಶೈಕ್ಷಣಿಕವಾಗಿ ಹಿಂದುಳಿದರು ನಮ್ಮ ಈ ಭಾಗದ ಶಿಕ್ಷಣವನ್ನು ಅಭಿವೃದ್ಧಿ ಪಡಿಸುವಲ್ಲಿ ಈ ಯೋಜನೆಯು ಮಹತ್ವಾಕಾಂಕ್ಷಿ ಯೋಜನೆಯಗಿದ್ದು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲಾಪೂರ್ವ ಶಿಕ್ಷಣವು ಭದ್ರಬುನಾದಿಯಾಗಿದೆ.
ಇಂತಹ ಉತ್ತಮ ಕಾರ್ಯದಲ್ಲಿ ತಾವೂಗಳು ನಮ್ಮ ಈ ತರಬೇತಿಯ ಗುರಿ- ಉದ್ದೇಶವನ್ನು ತಿಳಿದುಕೊಂಡು ನಿಮ್ಮ ಕೇಂದ್ರದಲ್ಲಿರುವ ಮಕ್ಕಳಿಗೆ ಸಣ್ಣಸಣ್ಣ ಚಟುವಟಿಕೆಗಳನ್ನು ಮಾಡಿಸುವ ಮುಖಾಂತರ ಗುಣಮಟ್ಟದ ಶಾಲಾಪೂರ್ವ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ನೀಡುವ ಮೂಲಕ ನಮ್ಮ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಶಾಲಾಪೂರ್ವ ಶಿಕ್ಷಣ ಯೋಜನೆಯ ಸಂಗಮೇಶ ಹಿರೇಮಠ ಮಾತನಾಡಿ ಶಾಲಾಪೂರ್ವ ಶಿಕ್ಷಣ ಯೋಜನೆಯನ್ನು ನಮ್ಮ ಅಂಗನವಾಡಿ ಕೇಂದ್ರಗಳಲ್ಲಿ ಸಕ್ರಿಯವಾಗಿ ಅನುಷ್ಠಾನ ಮಾಡಿಕೊಳ್ಳುವ ಮೂಲಕ ಮಕ್ಕಳು ಮತ್ತು ಪಾಲಕರನ್ನು ನಮ್ಮ ನಮ್ಮ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಆಕರ್ಷಿಸುವ ಮೂಲಕ ನಮ್ಮ ಕೇಂದ್ರಗಳನ್ನು ಮಕ್ಕಳ ಸ್ನೇಹಿ ಕೆಂದ್ರಗಳನ್ನಾಗಿ ಪರಿವರ್ತಿಸುವ ಜೊತೆಗೆ ಕೆಂದ್ರಕ್ಕೆ ಬರುವ ಮಕ್ಕಳಿಗೆ ಉತ್ತಮ ಶಾಲಾಪೂರ್ವ ಶಿಕ್ಷಣ ನೀಡುವಂತೆ ತಾವೂಗಳು ಸಂಪನ್ಮೂಲ ಕಾರ್ಯಕರ್ತೆಯರಾಗಿ ಸಿದ್ದಗೊಂಡು ಈ ಯೋಜನೆಯನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಈ ತರಬೇತಿಯಲ್ಲಿ ಹಟ್ಟಿ ವಲಯದ ಮೇಲ್ವಚಾರಕಿಯಾದ ಶ್ರೀಮತಿ ಶಾಂತಾ, ಗುರುಗುಂಟಾ ವಲಯದ ಶ್ರೀಮತಿ ಶಿವಲೀಲಾ ಹಾಗೂ ಹಟ್ಟಿ ವಲಯದ 42 ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.