ಮೂರನೇ ಭಾರಿ ಅಧಿಕಾರ ಖಚಿತ: ಮೋದಿ ವಿಶ್ವಾಶ

ನವದೆಹಲಿ.ಏ.೬- ದೇಶದಲ್ಲಿ ಮೂರನೇ ಅವಧಿಗೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮೋದಿ ಅವರ ಪುನರಾವರ್ತಿತ ಘೋಷಣೆಗಳನ್ನು ಗಮನದಲ್ಲಿಟ್ಟುಕೊಂಡು, ಉನ್ನತ ಮಟ್ಟದ ಅಧಿಕಾರಿಗಳು ಹೊಸ ಸರ್ಕಾರದ ಆಡಳಿತಕ್ಕಾಗಿ ಕ್ರಿಯಾಯೋಜನೆ ಸಿದ್ಧಪಡಿಸುವ ನಿಟ್ಟಿನಲ್ಲಿ ಮಗ್ನರಾಗಿದ್ದಾರೆ.
ಮುಂದಿನ ಆರು ವರ್ಷಗಳಲ್ಲಿ ಶೇಕಡಾ ೨೦ ರಿಂದ ೧೫೦ಕ್ಕೆ ಸಾಗರೋತ್ತರ ಭಾರತೀಯ ರಾಯಭಾರಿಗಳ ಕಚೇರಿ ಸಂಖ್ಯೆ ಹೆಚ್ಚಿಸುವುದು, ಮೂಲಸೌಕರ್ಯದಲ್ಲಿ ಹೆಚ್ಚಿನ ಖಾಸಗಿ ಹೂಡಿಕೆ ಮತ್ತು ಆಧ್ಯತೆಯ ಯೋಜನೆಗಳಿಗೆ ಸುಗಮ ಭೂಸ್ವಾಧೀನಕ್ಕೆ ಕಾರ್ಯವಿಧಾನ ಸೇರಿದಂತೆ ಹಲವು ವಿಷಯಗಳಲ್ಲಿ ಅಧಿಕಾಗಳ ತಂಡ ಹೊಸ ಸರ್ಕಾರ ರಚನೆಗೂ ಮುನ್ನ ಕಾರ್ಯಯೋಜನೆ ಸಿದ್ಧ ಪಡಿಸುವ ಕೆಲಸ ಮಾಡುತ್ತಿದ್ದಾರೆ,
ಕೇಂದ್ರ ಸಂಪುಟ ಕಾರ್ಯದರ್ಶಿ ಕರೆದ ಸಭೆಗಳಲ್ಲಿ ಚರ್ಚಿಸಲಿರುವ ಕರಡು ಪತ್ರದಲ್ಲಿ ೨೦೩೦ರ ವೇಳೆಗೆ ಪಿಂಚಣಿ ಪ್ರಯೋಜನಗಳೊಂದಿಗೆ ಹಿರಿಯ ನಾಗರಿಕರ ಪಾಲನ್ನು ಶೇಕಡಾ ೨೨ ರಿಂದ ೫೦ ಕ್ಕೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದೆ. ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಸಂಖ್ಯೆಯನ್ನು ಶೇಕಡಾ ೩೭ ರಿಂದ ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ
ಇ-ವಾಹನಗಳ ಮೇಲಿನ ಒತ್ತಡ, ವಾಹನ ಮಾರಾಟದಲ್ಲಿ ತಮ್ಮ ಪಾಲನ್ನು ಶೇಕಡಾ ೭ ರಿಂದ ೩೦ಕ್ಕೆ ಹೆಚ್ಚಿಸುವ ಗುರಿ ನಿಗಧಿ ಪಡಿಸಲಾಗಿದೆ. ೨೦೩೦ ರ ವೇಳೆಗೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ಬಾಕಿಯನ್ನು ೫ ಕೋಟಿಯಿಂದ ೧ ಕೋಟಿಗಿಂತ ಇಳಿಕೆ ಮಾಡುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕೆಳಹಂತದ ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ೨,೧೮೪ ದಿನಗಳಿಂದ ೧,೦೦೦ ದಿನಗಳವರೆಗೆ ಕಡಿತಗೊಳಿಸುವ ಗುರಿ ಬಗ್ಗೆ ಚರ್ಚಿಸಲಾಗುತ್ತಿದೆ ಉನ್ನತ ನ್ಯಾಯಾಲಯಗಳ ಸಂದರ್ಭದಲ್ಲಿ, ೨೦೩೦ ರ ವೇಳೆಗೆ ಟರ್ನ್‌ಅರೌಂಡ್ ಸಮಯವನ್ನು ಪ್ರಸ್ತುತ ೧,೧೨೮ ದಿನಗಳಿಂದ ೫೦೦ ದಿನಗಳಿಗಿಂತ ಕಡಿಮೆ ಮಾಡಲು ಉದ್ದೇಶಿಸಲಾಗಿದೆ.
ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳ ನೀತಿ ನಿರೂಪಕರಿಗೆ ಈ ವಿಷಯಗಲ ಮೇಲೆ ಕೇಂದ್ರೀಕರಿಸಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ೨೦೩೦ ಕ್ಕೆ ಮಧ್ಯಮ-ಅವಧಿ ಗುರಿ ಮತ್ತು ೨೦೪೭ ಕ್ಕೆ ದೀರ್ಘಾವಧಿಯ ಗುರಿಗಳನ್ನು ನಿಗದಿಪಡಿಸುವುದರ ಮೇಲೆ ಗಮನ ಕೇಂದ್ರೀಕರಿಸಲಾಗಿದೆ ಉನ್ನತ ಮೂಲಗಳು ತಿಳಿಸಿವೆ.