ಮೂರನೇ ದಿನಕ್ಕೆ ಸಾರಿಗೆ ನೌಕರರ ಹೋರಾಟ : ನಿಲ್ಲದ ಪರದಾಟ

ಲಿಂಗಸುಗೂರು : ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದೆ ಆದರೆ ಪ್ರಯಾಣಿಕರ ಪರದಾಟ ನಿಲ್ಲದಾಗಿದೆ.
ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗುವ ಮೂಲಕ ಹೋರಾಟ ನಡೆಸುತ್ತಿದ್ದಾರೆ ಇದರಿಂದ ಸಾರಿಗೆ ಘಟಕದಿಂದ ಬಸ್‌ಗಳು ಹೊರಬರದೇ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಶುಕ್ರವಾರವೂ ಕೂಡಾ ನಾಲ್ಕು ಜನ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಮುದಗಲ್ ಹಾಗೂ ಹಿರೇಜಾವೂರು ಮಾರ್ಗಗಳಿಗೆ ಬಸ್‌ಗಳು ಓಡಿಸಲಾಗುತ್ತಿದೆ. ಸಾರಿಗೆ ನೌಕರರ ಹೋರಾಟದ ಲಾಭವನ್ನು ಖಾಸಗಿ ವಾಹನಗಳು ಪಡೆಯುತ್ತಿವೆ. ನಿಗದಿತ ಪ್ರಯಾಣದರಕ್ಕಿಂತ ೧೦-೩೦ ರೂಪಾಯಿ ವರಿಗೆ ಹೆಚ್ಚಿಗೆ ದರ ಪಡೆದು ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡುತ್ತಿವೆ. ನಾ ಮುಂದು ತಾ ಮುಂದು ಎಂದು ಖಾಸಗಿ ವಾಹನಗಳು ಪ್ರಯಾಣಿಕರನ್ನು ಹೊತ್ತು ದೂರದೂರುಗಳಿಗೆ ಸಾಗುತ್ತಿವೆ.