
ಬೆಂಗಳೂರು,ಆ.೫- ಚಂದ್ರಯಾನ-೩ ನೌಕೆ ಇಲ್ಲಿಯ ತನಕ ಭೂಮಿ ಮತ್ತು ಚಂದ್ರನ ನಡುವಿನ ಅಂತರದ ೩ನೇ ಎರಡು ಭಾಗ ಕ್ರಮಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಹಿತಿ ಹಂಚಿಕೊಂಡಿದೆ.
ಕಳೆದ ತಿಂಗಳ ೧೪ ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್‌ಎಲ್‌ವಿ ಮಾರ್ಕ್ ೩ ಉಡಾವಣಾ ವಾಹನದಲ್ಲಿ ಯಶಸ್ವಿಯಾಗಿ ಉಡಾವಣೆಯಾದ ಚಂದ್ರಯಾನ-೩ ಬಾಹ್ಯಾಕಾಶ ನೌಕೆ ಸುಮಾರು ಮೂರನೇ ಎರಡರಷ್ಟು ದೂರವನ್ನು ಕ್ರಮಿಸಿದೆ ಎಂದು ಸಂತಸ ಹಂಚಿಕೊಂಡಿದೆ.
ಚಂದ್ರಯಾನ-೩, ಭಾರತದ ಮೂರನೇ ಚಂದ್ರನ ಪರಿಶೋಧನೆ ಮಿಷನ್. ಚಂದ್ರನ ಮೇಲೆಯಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಇಳಿಸಿ ದೇಶದ ಸಾಮಥ್ರ್ಯ ಪ್ರದರ್ಶಿಸಲು ಸಜ್ಜಾಗಿದೆ ಈ ಮೂಲಕ ಅಮೆರಿಕ, ಚೀನಾ ಮತ್ತು ರಷ್ಯಾದ ನಂತರ ಭಾರತ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ.
ಚಂದ್ರನ ಕಕ್ಷೆಯನ್ನು ತಲುಪುವ ಉದ್ದೇಶದಿಂದ ಬಾಹ್ಯಾಕಾಶ ನೌಕೆಯು ಪ್ರಸ್ತುತ ಕಕ್ಷೆಯ ಕುಶಲತೆಯ ಸರಣಿ ನಡೆಸುತ್ತಿದೆ.
ಇಸ್ರೋ ನೀಡಿದ ಮಾಹಿತಿ ಪ್ರಕಾರ ’ಲೂನಾರ್ ಟ್ರಾನ್ಸ್‌ಫರ್ ಟ್ರಾಜೆಕ್ಟರಿ ಪಥದಲ್ಲಿ ಚಂದ್ರಯಾನ-೩ ನೌಕೆ ಸಾಗುತ್ತಿದೆ. ಕಳೆದ ಸೋಮವಾರ ಮಧ್ಯ ರಾತ್ರಿ ಭೂ ಕಕ್ಷೆಯಿಂದ ಬೇರ್ಪಟ್ಟಿದ್ದ ನೌಕೆ ಚಂದ್ರನ ಕಡೆ ತೆರಳುತ್ತಿದೆ ಎಂದು ಹೇಳಿದೆ.
ಚಂದ್ರಯಾನ-೩ ಚಂದ್ರನ ಕಕ್ಷೆಯನ್ನು ತಲುಪಲು ಉಡಾವಣೆ ದಿನಾಂಕದಿಂದ ಸುಮಾರು ೩೩ ದಿನಗಳನ್ನು ತೆಗೆದುಕೊಳ್ಳುತ್ತದೆ. ಇಳಿದ ನಂತರ ಇದು ಒಂದು ಚಂದ್ರನ ದಿನಕ್ಕೆ ಕಾರ್ಯ ನಿರ್ವಹಿಸುತ್ತದೆ.ಸರಿಸುಮಾರು ೧೪ ಭೂಮಿಯ ದಿನಗಳು. ಚಂದ್ರನ ಮೇಲಿನ ಒಂದು ದಿನ ಭೂಮಿಯ ಮೇಲಿನ ೧೪ ದಿನಗಳಿಗೆ ಸಮಾನವಾಗಿರುತ್ತದೆ ಎಂದು ಹೇಳಿದೆ.
ಚಂದ್ರಯಾನ-೩ ಘಟಕಗಳು ನ್ಯಾವಿಗೇಷನ್ ಸೆನ್ಸರ್‌ಗಳು, ಪೋರಪಲ್ಟನ್ ಸಿಸ್ಟಮ್‌ಗಳು, ಮಾರ್ಗದರ್ಶನ ಮತ್ತು ನಿಯಂತ್ರಣದ ಸುರಕ್ಷಿತ ಲ್ಯಾಂಡಿಂಗ್ ಖಚಿತಪಡಿಸಿಕೊಳ್ಳಲು ಉದ್ದೇಶಿಸಿರುವ ವಿವಿಧ ಎಲೆಕ್ಟ್ರಾನಿಕ್ ಮತ್ತು ಯಾಂತ್ರಿಕ ಉಪವ್ಯವಸ್ಥೆಗಳನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ರೋವರ್, ದ್ವಿಮುಖ ಸಂವಹನ – ಸಂಬಂಧಿತ ಆಂಟೆನಾಗಳು ಮತ್ತು ಇತರ ಆನ್‌ಬೋರ್ಡ್ ಎಲೆಕ್ಟ್ರಾನಿಕ್ಸ್‌ಗಳ ಬಿಡುಗಡೆಗೆ ಕಾರ್ಯ ವಿಧಾನಗಳಿವೆ ಎಂದು ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.