ಮೂರನೇ ಅಲೆ ಮತ್ತಷ್ಟು ಅಪಾಯಕಾರಿ :ಕೇಂದ್ರ ಎಚ್ಚರಿಕೆ

ನವದೆಹಲಿ, ಜೂ.4- ದೇಶದಲ್ಲಿ ಕಾಣಿಸಿಕೊಂಡಿರುವ ಎರಡನೇ ಹಂತದ ಕೊರೊನಾ ಅಲೆಗಿಂತ ಮೂರನೇ ಅಲೆ ಅತ್ಯಂತ ಅಪಾಯಕಾರಿಯಾಗಿದೆ. ಹೀಗಾಗಿ ಜನರು ಕೋವಿಡ್ ಸೂಕ್ತ ವರ್ತನೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಜನರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ದೇಶದಲ್ಲಿ ಮತ್ತೊಮ್ಮೆ ಕೊರೊನಾ ಸೋಂಕು ಗರಿಷ್ಠ ಮಟ್ಟ ತಲುಪಲಿದೆ. ಹೀಗಾಗಿ ಎಚ್ಚರಿಕೆ ವಹಿಸುವುದು ಅನಿವಾರ್ಯ ಎಂದು ತಿಳಿಸಿದೆ.

ತಜ್ಞರು ನೀಡಿರುವ ಮಾಹಿತಿಯ ಆಧಾರದ ಹಿನ್ನೆಲೆಯಲ್ಲಿ ಮೂರನೆಯ ಅಲೆ ಅತಿ ವೇಗವಾಗಿ ಹರಡಲಿದೆ ಹೀಗಾಗಿ ಜನರು ಮುನ್ನೆಚ್ಚರಿಕೆ ಮತ್ತು ಮುನ್ಸೂಚನೆಯನ್ನು ಕೈಗೊಳ್ಳುವುದು ತುರ್ತು ಅಗತ್ಯವಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿಕೆ ಪಾಲ್ ತಿಳಿಸಿದ್ದಾರೆ.

ಡಿಸೆಂಬರ್ ಇಲ್ಲವೆ ಜನವರಿ ವೇಳೆಗೆ ಮೂರನೇ ಅಲೆ ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ ಹೀಗಾಗಿ ಅತ್ಯಂತ ಎಚ್ಚರಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಮುಂದಿನ ಹಂತದ ಸೋಂಕು ಕಾಣಿಸಿಕೊಂಡರೆ ಶೀಘ್ರಗತಿಯಲ್ಲಿ ಹರಡಲಿದೆ ಹೀಗಾಗಿ ಜನರು ನಿರ್ಲಕ್ಷ ಮಾಡದೆ ಸೂಕ್ತ ನಿಯಮಗಳನ್ನು ಪಾಲಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ

ಶೇ.68 ರಷ್ಟು ಕಡಿತ

ದೇಶದಲ್ಲಿ ಕೊರೊನಾ ಸೋಂಕು ಸಂಖ್ಯೆ ಗರಿಷ್ಠ ಮಟ್ಟ ತಲುಪಿ ಇದೀಗ ಕಳೆದ ಕೆಲವು ವಾರಗಳಿಂದ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.ಅದರ ಮಾಹಿತಿ ಪ್ರಕಾರ ಎರಡನೇ ಹಂತದಲ್ಲಿ ಶೇ.68ರಷ್ಟು ಸೋಂಕು ಕಡಿಮೆಯಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ ಪಾಲ್ ತಿಳಿಸಿದ್ದಾರೆ.

ದೇಶದ 377 ಜಿಲ್ಲೆಗಳಲ್ಲಿ ಶೇಕಡ ಅದಕ್ಕೂ ಕಡಿಮೆ ಸೋಂಕು ಪ್ರಕರಣಗಳಿವೆ. 257 ಜಿಲ್ಲೆಗಳಲ್ಲಿ ಶೇಕಡ ಅದಕ್ಕಿಂತ ಹೆಚ್ಚಿನ ಪ್ರಕರಣಗಳು ಇವೆ ಎಂದು ಅವರು ತಿಳಿಸಿದ್ದಾರೆ

ಮಕ್ಕಳಿಗೆ ಫೈಜರ್ ಲಸಿಕೆ: ನಷ್ಟ ಪಾವತಿ

ದೇಶದಲ್ಲಿ ಮಕ್ಕಳ ಮೇಲೆ ಫೈಜರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪ್ರಯೋಗ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಅನಿಸಿಕೆಯನ್ನು ನೀಡಲು ಆರಂಭಿಸಿದ ಮೇಲೆ ಸಂಸ್ಥೆಗೆ ಆಗುವ ನಷ್ಟ ಪರಿಹಾರ ಕಟ್ಟಿಕೊಡಲು ಕೂಡ ಮುಂದಾಗಿದೆ.

12ರಿಂದ 15 ವರ್ಷ ವಯೋಮಾನದ ಮಕ್ಕಳಿಗೆ ಇಂಗ್ಲೆಂಡ್ನಲ್ಲಿ ಲಸಿಕೆ ಹಾಕಲಾಗಿದೆ ಅದರ ಆಧಾರದ ಮೇಲೆ ದೇಶದಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ಫೈಜರ್ ಸಂಸ್ಥೆಯ ಲಸಿಕೆಗೆ ಅವಕಾಶ ಮಾಡಿಕೊಡಲಿದೆ ಸಂಸ್ಥೆಯ ಆಗುವ ನಷ್ಟವನ್ನು ಕಟ್ಟಿಕೊಡಲು ಸರ್ಕಾರ ಎಂದು ಎಂದು ಅವರು ಮಾಹಿತಿ ನೀಡಿದ್ದಾರೆ.

ಪುಣೆಯ ಅತಿದೊಡ್ಡ ಔಷಧ ತಯಾರಿಕಾ ಸಂಸ್ಥೆಯಾದ ಭಾರತೀಯ ಸೆರಂ ಸಂಸ್ಥೆ ಉತ್ಪಾದಿಸುವ ಕೋವಿಶೀಲ್ಡ್ ಮಸೀದಿಗೂ ನಷ್ಟಪರಿಹಾರ ಕಟ್ಟಿಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ

14 ಕೋಟಿ ಮಕ್ಕಳಿಗೆ ಲಸಿಕೆ ಗುರಿ

ದೇಶದಲ್ಲಿ ಸರಿ ಸುಮಾರು 14 ಕೋಟಿ ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿಕೆ ಪಾಲ್ ತಿಳಿಸಿದ್ದಾರೆ.

ಇದಕ್ಕಾಗಿ ಸರಿಸುಮಾರು 28 ಕೋಟಿ ಲಸಿಕೆ ಆಗುತ್ತಿರುವ ಈ ನಿಟ್ಟಿನಲ್ಲಿ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಲಸಿಕೆಯ ಸಂಗ್ರಹ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ