ಮೂರನೇ ಅಲೆ ನಿಯಂತ್ರಣ, ಸಲಹೆ ವಿಶ್ಲೇಷಣೆ: ಡಾ ದೇವಿ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ಉನ್ನತ ಸಮಿತಿ

ಬೆಂಗಳೂರು‌, ಮೇ.26- ಮೂರನೇ ಹಂತದ ಕೋವಿಡ್ -19 ನಿಯಂತ್ರಣ, ಸಲಹೆ ಮತ್ತು ವಿಶ್ಲೇಷಣೆಗೆ ಪೂರಕವಾಗಿ ಖ್ಯಾತ ವೈದ್ಯ ಡಾ. ದೇವಿ ಪ್ರಸಾದ್ ಶೆಟ್ಟಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉನ್ನತ ಮಟ್ಟದ ವೈದ್ಯರ ಸಮಿತಿ‌ ರಚಿಸಿದೆ.

ಸದಸ್ಯರಾಗಿ ನಿಮಾನ್ಸ್ ನಿರ್ದೇಶಕ ಡಾ. ಸತೀಶ್ ಗಿರಿಮಾಜಿ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಯ ಅಧೀಕ್ಷಕ ಹಾಗು ಮಕ್ಕಳ ತಜ್ಞ ಡಾ. ಬಸವರಾಜ ಜಿ.ವಿ.ಬೆಂಗಳೂರಿನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ಟೀಮ್ ಲೀಡರ್ ಡಾ.ಆಶಿಶ್ ಸತ್ಯಪತಿ ಸೇರಿದಂತೆ 13 ಮಂದಿಯ ಉನ್ನತ ಸಮಿತಿ ರಚಿಸಲಾಗಿದೆ.

ಉಳಿದಂತೆ ಸದಸ್ಯರಾಗಿ ಎಚ್ ಸಿಜಿ ಆಸ್ಪತ್ರೆಯ ತಜ್ಞ ಡಾ. ಅಜಯ್ ಕುಮಾರ್,ಕ್ಲೌಡ್ ನೈನ್ ನ ಮಕ್ಕಳ ತಜ್ಞ ಡಾ. ಅರವಿಂದ ಶಣೈ, ಸಾಗರ್ ಆಸ್ಪತ್ರೆ ಮಕ್ಕಳ ತಜ್ಞ ಡಾ.ರಘುನಾಥ ‌ಯು, ಮಣಿಪಾಲ್ ಆಸ್ಪತ್ರೆ ‌ಮಕ್ಕಳ‌‌ ತಜ್ಞ ಡಾ. ಜಗದೀಶ್ ಚಿನ್ನಪ್ಪ , ಬಳ್ಳಾರಿ ಯ ಮಕ್ಕಳ ತಜ್ಞ ಡಾ. ಯೋಗಾನಂದ ರೆಡ್ಡಿ,ಆಯ್ ಅಯ್ ಸ್ಟರ್ ಆಸ್ಪತ್ರೆ ತಜ್ಞ ಡಾ. ಶ್ರೀಕಾಂತ್ ಜೆಟಿ, ಹುಬ್ಬಳ್ಳಿಯ ‌ಕಿಮ್ಸ್ ನ ಪ್ರಾದ್ಯಾಪಕ ಡಾ. ವಿನೋದ್ ರಟಗೇರಿ , ಸೇಂಟ್ ಜಾನ್ ಆಸ್ಪತ್ರೆಯ ತಜ್ಞ ವೈದ್ಯ ಡಾ.‌ಪ್ರೇಮ್ ಕೆ ಮೂನಿ, ಹಾಗು ಸದಸ್ಯ ಕಾರ್ಯದರ್ಶಿ ಯಾಗಿ ವೈದ್ಯಕೀಯ ಇಲಾಖೆ ಕಾರ್ಯದರ್ಶಿ ಡಾ.ಪಿ.ಜಿ ಗಿರೀಶ್ ಅವರನ್ನು ಸರ್ಕಾರ ನೇಮಕ ಮಾಡಿದೆ.

ಮೂರನೇ ಹಂತದ ಕೊರೊನಾ ಸೋಂಕು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎನ್ನುವ ಹಿನ್ನೆಲೆಯಲ್ಲಿ ಅದರ ಸಾಧಕ-ಬಾಧಕಗಳ ಕುರಿತು ಅಧ್ಯಯನ ಮಾಡಿ ಅದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರಕ್ಕೆ ಉನ್ನತಮಟ್ಟದ ಸಮಿತಿ ಸಲಹೆ ಸಹಕಾರ ನೀಡಲು ಸೂಚಿಸಲಾಗಿದೆ