ಮೂರನೇ ಅಲೆ ತಡೆಗೆ ಲಸಿಕೆಯೊಂದೆ ಮಾರ್ಗ : ಐಎಂಎ ಎಚ್ಚರಿಕೆ

ನವದೆಹಲಿ, ಮೇ 19-ದೇಶದಲ್ಲಿ ಕಾಣಿಸಿಕೊಂಡಿ ರುವ ಕೊರೊನಾ‌ ಸೋಂಕಿನ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಎಂದು ಎಚ್ಚರಿಸಿರುವ ಭಾರತೀಯ ವೈದ್ಯಕೀಯ ಸಂಘ, ಇದನ್ನು ನಿಯಂತ್ರಿಸಲು ಲಸಿಕೆಯೊಂದೆ ಮಾರ್ಗ ಎಂದು‌ ಹೇಳಿದೆ.
ಮೂರನೇ ಅಲೆ ಅಪಾಯ ಎದುರಾಗುವ ಭೀತಿ ಇದೆ. ಇದಕ್ಕೆ ಸಾಮೂಹಿಕ ಲಸಿಕೆ ನೀಡುವುದು ಉತ್ತಮ ಎಂದು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಜಯ್ ಲಾಲ್ ಸಲಹೆ ಮಾಡಿದ್ದಾರೆ.
ಒಂದು ವೇಳೆ ಬೃಹತ್ ಪ್ರಮಾಣದಲ್ಲಿ ಲಸಿಕೆ ನೀಡಲು ಮುಂದಾಗದಿದ್ದರೆ ಮೂರನೇ ಅಲೆ ಎದುರಿಸುವುದು ಕಷ್ಷ ಮತ್ತು ಸುರಕ್ಷಿತವೂ ಅಲ್ಲ ಎಂದು ಅವರು ಹೇಳಿದ್ದಾರೆ.
ದೇಶಾದ್ಯಂತ ಲಸಿಕೆ ವಿತರಣೆಯನ್ನು ತೀವ್ರಗೊಳಿಸಬೇಕು. ಕೇಂದ್ರ ಸರ್ಕಾರ ಗರಿಷ್ಠ ಲಸಿಕೆಯನ್ನು ವಿತರಿಸಬೇಕು ಮತ್ತು ಮನೆ, ಮನೆಗೆ ಲಸಿಕೆ ನೀಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ಮಾಡಿದ್ದಾರೆ.
ಭಾರತ ಕೋವಿಡ್ 19 ಲಸಿಕೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಮತ್ತು ಕೆಲವೇ ತಿಂಗಳುಗಳಲ್ಲಿ 60-70ರಷ್ಟು ಲಸಿಕೆ ನೀಡಿಕೆಯ ಗುರಿಯನ್ನು ಪೂರ್ಣಗೊಳಿಸಬೇಕು ಎಂದು ವರದಿಗಳು ತಿಳಿಸಿವೆ.