ಮೂರನೇ ಅಲೆಯ ಬಗ್ಗೆ ಎಚ್ಚರ ವಹಿಸಲು ಕರೆ

ಹೊನ್ನಾಳಿ.ಡಿ.೧ : ನಾವು ಹುಟ್ಟಿದ್ದಕ್ಕೂ, ಬದುಕಿದ್ದಕ್ಕೂ ಸಾರ್ಥಕತೆ ಸಿಗಬೇಕೆಂದರೆ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ನೇತ್ರದಾನ ಮಾಡುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು..ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಠಡಿಗಳ ಕೊರತೆ ಇದ್ದ ಹಿನ್ನೆಲೆ, ವಿದ್ಯಾರ್ಥಿಗಳ ಮನವಿ ಮೇರೆಗೆ ನೂತನ ಕೊಠಡಿಗಳಿಗೆ  ಸಾಂಕೇತಿಕವಾಗಿ ಚಾಲನೆ ನೀಡಿ, ಒಂದು ಸಾವಿರ ವಿದ್ಯಾರ್ಥಿಗಳಿಗೆ ನೇತ್ರದಾನದ ಅರ್ಜಿಗಳನ್ನು ವಿತರಿಸಿ ಅವರು ಮಾತನಾಡಿದರು. ದಾನಗಳಲ್ಲಿ ಶ್ರೇಷ್ಟವಾದ ದಾನ ಎಂದರೆ ಅದು ನೇತ್ರದಾನ, ನೇತ್ರದಾನ ಮಾಡುವುದರಿಂದ ಅಂಧ ಮಕ್ಕಳ ಬಾಳಲ್ಲಿ ಬೆಳಕು ಮೂಡಲಿದ್ದು, ವಿದ್ಯಾರ್ಥಿಗಳು ಕೂಡ ನೇತ್ರದಾನ ಮಾಡಲು ಮುಂದೆ ಬರಬೇಕೆಂದು ಕರೆ ನೀಡಿದರು.ಪುನೀತ್ ರಾಜ್‌ಕುಮಾರ್ ಅವರ ಪ್ರೇರಣೆಯಿಂದ ನಾನು ಸೇರಿದಂತೆ ನನ್ನ ಕುಟುಂಬದ ಸರ್ವ ಸದಸ್ಯರು ನೇತ್ರದಾನಕ್ಕೆ ನೊಂದಾವಣಿ ಮಾಡಿಸಿದ್ದು, ಅವಳಿ ತಾಲೂಕಿನಾಧ್ಯಂತ ಐದು ಸಾವಿರಕ್ಕೂ ಹೆಚ್ಚು ಜನರಿಂದ ನೇತ್ರದಾನಕ್ಕೆ ನೊಂದಾವಣಿ ಮಾಡಿಸುವ ಗುರಿಯೊಂದಲಾಗಿದೆ ಎಂದರು.ಶಿಕ್ಷಣ ಮನುಷ್ಯನ ಜೀವನದಲ್ಲಿ ಅತ್ಯತ ಮುಖ್ಯವಾದದ್ದು, ಶಿಕ್ಷಣ ಎಂಬ ಮೂರಕ್ಷರ ಇಲ್ಲದಿದ್ದರೇ ಮನುಷ್ಯನ ಜೀವನ ಅಂದಕಾರದಲ್ಲಿ ಮುಳುಗಿ ಹೋಗಲಿದ್ದು ಪ್ರತಿಯೊಬ್ಬರೂ ಕೂಡ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡ ಬೇಕೆಂದು ರೇಣುಕಾಚಾರ್ಯ ಕರೆ ನೀಡಿದರು.ಪೋಷಕರು ತಮ್ಮ ಕಷ್ಟಗಳನ್ನು ಮರೆ ಮಾಚಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದು ಅವರಿಗೆ ಒಳ್ಳೆಯ ಹೆಸರು ತರುವ ಕೆಲಸವನ್ನು ಮಕ್ಕಳ ಮಾಡ ಬೇಕೆಂದರು.ಮೂರನೇ ಅಲೆಯ ಬಗ್ಗೆ ಎಚ್ಚರದಿಂದಿರಿ :ಕೊರೊನಾ ಮೂರನೇ ಅಲೆ ಬರಬಹುದೆಂದು ಹೇಳಲಾಗುತ್ತಿದ್ದು ಪ್ರತಿಯೊಬ್ಬರೂ ಜಾಗರೂಕತೆ ಇರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು, ಒಮಿಕ್ರಾನ್ ಎಂಬ ವೈರಸ್ ಅತ್ಯಂತ ವೇಗವಾಗಿ ಹರಡುತ್ತಿದ್ದು ಯಾರೂ ಕೂಡ ಮೈರೆಯದೇ ಎಚ್ಚರಿಕೆಯಿಂದ ಇರುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕರೆ ನೀಡಿದರು.ಕೊರೊನಾ ಎರಡನೇ ಅಲೆ ಸೇರಿದಂತೆ, ಅತಿವೃಷ್ಟಿಯಿಂದಾಗಿ ಸರ್ಕಾರ ಆರ್ಥಿಕ ಸಂಷ್ಟವನ್ನು ಎದುರಿಸುತ್ತಿದ್ದು, ಒಮಿಕ್ರಾನ್ ಬಂದರೆ ಇನ್ನು ಸಾಕಷ್ಟು ತೊಂದರೆ ಅನುಭವಿಸ ಬೇಕಾಗುತ್ತದೆ ಎಂದ ರೇಣುಕಾಚಾರ್ಯ ಪ್ರತಿಯೊಬ್ಬರೂ ಲಸಿಕೆ ಪಡೆಯುವ ಮೂಲಕ ವೈರಸ್ ನಿಂದ ದೂರ ಉಳಿಯುಂತೆ ಕರೆ ನೀಡಿದರು..