ಮೂರನೇ ಅಲೆಗೆ ಸಕಲ ಸಿದ್ಧತೆ – ಲಕ್ಷಣ ಸವದಿ

ಕೊರೊನಾ ಸೋಂಕು ತಡೆಗೆ ಆಕ್ಸಿಜನ್ ಬಸ್ – ಡಿಸಿಎಂ ಉದ್ಘಾಟನೆ
ರಾಯಚೂರು.ಜೂ.೦೩- ಸಾರಿಗೆ ಇಲಾಖೆಯಿಂದ ಹಳೆ ಬಸ್‌ಗಳನ್ನು ಬಳಸಿಕೊಂಡು ಸಂಚಾರಿ ಐಸಿಯು ಬಸ್‌ಗಳನ್ನು ಹಳ್ಳಿ ಹಳ್ಳಿಗೆ ಕಳುಹಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳದ ಲಕ್ಷ್ಮಣ ಸವದಿ ಅವರು ಚಾಲನೆ ನೀಡಿದರು.
ಅವರಿಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮೂರು ಆಕ್ಸಿಜನ್ ಹಾಗೂ ಐಸಿಯು ಬಸ್‌ಗಳನ್ನು ಚಾಲನೆ ನೀಡಿ ಮಾತನಾಡಿದ ಅವರು,
ಕೊರೊನಾ ಮೊದಲನೇ ಅಲೆ ಮತ್ತು ಎರಡನೇ ಅಲೆಗೆ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಬೇರೆ ಜಿಲ್ಲಾಡಳಿತಕ್ಕೆ ಹೋಲಿಸಿದರೆ ನಮ್ಮ ರಾಯಚೂರು ಜಿಲ್ಲಾಡಳಿತ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದೆ.
ಎರಡನೇ ಅಲೆ ಸಾಕಷ್ಟು ಇಳಿಮುಖವಾಗಿದ್ದು, ಜೂ.೭ ರ ವರೆಗೆ ಲಾಕ್ ಡೌನ್ ಇದ್ದು, ನಂತರ ರಾಜ್ಯದಲ್ಲಿ ಮತ್ತೇ ಬದಲಾವಣೆ ಮಾಡಲಾಗುತ್ತದೆ. ಕೊರೊನಾ ಮೂರನೇ ಅಲೆ ಬರುವ ಸಾಧ್ಯತೆ ಇದ್ದು, ನಾವು ಮೈಮರಿಯ ಬಾರದು. ಜಾಗೃತವಾಗಿ, ಸುರಕ್ಷಿತವಾಗಿ ಇರಬೇಕು. ರಾಜ್ಯದಲ್ಲಿ ವೈದ್ಯರ ಕೊರತೆ ಇದ್ದು, ಈಗಾಗಲೇ ಸರ್ಕಾರ ಆದೇಶವನ್ನು ಮಾಡಿದ್ದು, ನೇಮಕಾಂತಿ ಪ್ರಕ್ರಿಯೆ ಮಾಡಲಾಗಿದೆ. ಮೂರನೇ ಅಲೆ ಬಂದರೆ ಯಾವುದೇ ತೊಂದರೆ ಆಗಬಾರದು ಎಂದು ರಾಜ್ಯದಲ್ಲಿ ಪೂರ್ವ ಸಿದ್ಧತೆಯನ್ನು ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ್, ಕರಡಿ ಸಂಗಣ್ಣ, ಶಾಸಕರಾದ ಡಾ.ಶಿವರಾಜ ಪಾಟೀಲ್, ವೆಂಕಟರಾವ್ ನಾಡಗೌಡ, ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.