ಮೂತ್ರ ನೆಕ್ಕಿಸಿದ ಪ್ರಕರಣ ಅಮಾನವೀಯಃ ಜೀತೇಂದ್ರ ಕಾಂಬಳೆ

ವಿಜಯಪುರ, ಜೂ.5-ದಲಿತ ಯುವ ಪುನೀತ್‍ಗೆ ಮಾನವ ಮೂತ್ರ ನೆಕ್ಕಿಸಿದ ಪ್ರಕರಣ ಅಮಾನವೀಯವಾಗಿದ್ದು, ಸಮಾಜ ತಲೆ ತಗ್ಗಿಸುವಂತಾಗಿದೆ. ಪ್ರಕರಣ ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಆಚಾತುರ್ಯಕ್ಕೆ ಕಾರಣಕರ್ತರಾಗಿರುವ ಗೋಣಿಬೀಡಿನ ಪಿ.ಎಸ್.ಐ. ಅರ್ಜುನ್ ಅವರನ್ನು ಸೇವೆಯಿಂದ ವಜಾ ಮಾಡಬೇಕು. ವಿಜಯಪುರದ ಬಸವನಬಾಗೇವಾಡಿಯ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟ ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೀತೇಂದ್ರ ಕಾಂಬಳೆ ಮಾತನಾಡಿ, ಕೊರೋನ ರೋಗದ ಪರಿಣಾಮದಿಂದಾಗಿ ಇಡೀ ಮಾನವ ಸಮುದಾಯ ತತ್ತರಿಸಿ ಹೋಗಿದೆ. ಜನಸಾಮಾನ್ಯರ ಬದುಕಿನ ಅಸ್ತಿತ್ವವನ್ನೇ ಅಲುಗಾಡಿಸಿಬಿಟ್ಟಿದೆ. ಅಸಂಖ್ಯಾತ ಸಾವು, ನೋವುಗಳು ಎಲ್ಲರಲ್ಲಿ ಅಳಿಸಲಾಗದ ಆತಂಕವನ್ನೇ ನಿರ್ಮಿಸಿದೆ ಎಂದರು.
ಕೊರೋನ ರೋಗ ನಿಯಂತ್ರಣಕ್ಕಾಗಿ ಮಾಡಲಾಗಿರುವ ಲಾಕ್‍ಡೌನ್‍ನಿಂದಾಗಿ ರೈತರು, ದಲಿತರು, ಪೌರಕಾರ್ಮಿಕರು, ಅಲೆಮಾರಿ, ಆದಿವಾಸಿ, ಬುಡಕಟ್ಟು ಸಮುದಾಯಗಳು, ಕೂಲಿ ಕಾರ್ಮಿಕರು, ಕಟ್ಟಡ ಕೆಲಸಗಾರರು. ಬೀದಿ ಬದಿಯ ವ್ಯಾಪಾರಗಾರರು ಮುಂತಾದವರ ಬದುಕು ಬೀದಿಪಾಲಾಗಿದೆ. ಮೂಲಭೂತ ಸೌಕರ್ಯಗಳಾದ ಮೂರೊತ್ತಿನ ಊಟ, ವೈದ್ಯಕೀಯ ಸೌಲಭ್ಯಗಳು ದುಸ್ಥರವೆನಿಸಿ ಜನರು ಕಂಗಾಲಾಗಿದ್ದಾರೆ ಎಂದು ಹೇಳಿದರು.
ಕೊರೋನ ರೋಗದಿಂದಾಗಿ ಆಗುತ್ತಿರುವ ಸಾವುಗಳು ಒಂದು ಕಡೆಯಾದರೆ, ಮೂಲಭೂತ ವೈದ್ಯಕೀಯ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗದೆ ಹಾಗೂ ಕೊರೋನದ ಭಯದಿಂದಾಗಿ ಸಂಭವಿಸುತ್ತಿರುವ ಸಾವು ನೋವುಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗೆ ಹೋದರೆ ಮರಳಿ ಜೀವಂತವಾಗಿ ಬರಲಾರವೆಂಬ ಆತಂಕ ಎಲ್ಲರಲ್ಲಿ ಮನೆ ಮಾಡಿದ್ದು, ಬಡವರಿಗೆ ವೈದ್ಯಕೀಯ ಖರ್ಚು ವೆಚ್ಚಗಳನ್ನು ಭರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.
ಎಂಬತ್ತರ ದಶಕದಲ್ಲಿ ಘಟಿಸಿದ ಬೆಂಡಿಗೇರಿಯ ದಲಿತರಿಗೆ ಮಲ ತಿನ್ನಿಸಿದ ಪ್ರಕರಣವು ಕರ್ನಾಟಕದ ಚರಿತ್ರೆಯಲ್ಲಿ ಜಾತಿ ಕೌರ್ಯದ ಪರಾಕಾಷ್ಠೆಯ ಕರಾಳ ಅಧ್ಯಾಯವೆಂಬಂತೆ ದಾಖಲಾಗಿರುವುದು ಈಗ ಇತಿಹಾಸ. ಈ ಅಮಾನವೀಯ ಇತಿಹಾಸ ಮತ್ತೆ ಪುನರಾವರ್ತನೆಯಾಗುತ್ತಿದೆಯೇನೋ ಎಂಬಂತೆ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಗೋಣಿಬೀಡು ರಾಣಾ ವ್ಯಾಪ್ತಿಯ ಕಿರುಗುಂದ ಗ್ರಾಮದ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ವರದಿಯಾಗಿರುವುದು ಆಘಾತಕಾರಿ ಸಂಗತಿ ಎಂದರು.
ಈ ಸಂದರ್ಭದಲ್ಲಿ ಸಂಜು ವೈ. ಕಂಬಾಗಿ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿ/ವರ್ಗದೆ. ಎಸ್.ಸಿ.ಪಿ./ಟಿ.ಎಸ್.ಪಿ. ಆನುದಾನದಿಂದ ಹಾಗೂ ಎಲ್ಲಾ ಸಮುದಾಯದ ದುಡಿಯುವ ಬಡಜನರ ಪ್ರತಿ ಕುಟುಂಬಗಳಿಗೂ ಸರ್ಕಾರ ಮಾಸಿಕ ಕನಿಷ್ಟ 15 ಸಾವಿರ ರೂ, ಆರ್ಥಿಕ ನೆರವು ನೀಡಬೇಕು. (ಏಪ್ರಿಲ್-2021 ರಿಂದ ಪೂರ್ವಾನ್ವಯವಾಗುವಂತೆ). 6. ಎಸ್.ಸಿ,ಪಿ./ಟಿ.ಎಸ್.ಪಿ. ಹಣದ ಮರ್ಬಳಕೆ, ಅವ್ಯವಹಾರ ಹಾಗೂ ಸದ್ಬಳಕೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. 7. ಕೊರೋನಾ ಮತ್ತು ಪಂಗಸ್‍ಗೆ ಒಳಗಾಗಿರುವ ಎಲ್ಲರಿಗೂ ಉಚಿತವಾಗಿ ಲಸಿಕೆ, ಔಷದೋಪಚಾರ, ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಕಲ್ಪಿಸಬೇಕು, ಬಡವರಿಗೆ ಕೊರೋನಾ ರೋಗಿಗಳಿಂದ ಹಣ ಸುಲಿಗೆ ಮಾಡುತ್ತಿರುವ ಕೆಲವು ವೈದ್ಯರು, ಖಾಸಗಿ/ಸರ್ಕಾರಿ ಆಸ್ಪತ್ರೆಗಳ ಅತಿರೇಕದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಕೊರೋನಾ ವಾರಿಯಸ್ ಹಗಲಿರುಳು ಅವಿಶ್ರಾಂತವಾಗಿ ದುಡಿಯುತ್ತಿರುವ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು, ಆಂಬುಲೆನ್ಸ್ ಡ್ರೈವರ್, ಆಸ್ಪತ್ರೆಯ ‘ಡಿ’ ದರ್ಜೆ ನೌಕರರು, ಪೌರಕಾರ್ಮಿಕರು ಹಾಗೂ ಚಿತಾಗಾರಗಳಲ್ಲಿ ಕೆಲಸ ಮಾಡುತ್ತಿರುವವರ ಸಂಬಳವನ್ನು ಹೆಚ್ಚಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಕೃಷಿ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ ಪಡೆದುಕೊಳ್ಳಬೇಕು. 11, ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಡತನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಮಾಸಿಕ ನಿರುದ್ಯೋಗ ಭತ್ಯೆಯನ್ನು ನೀಡಬೇಕು. ಬಾಕಿ ಇರುವ ವಿದ್ಯಾರ್ಥಿಗಳ ಸ್ಕಾಲರ್‍ಶಿಪ್ ಅನ್ನು ತಕ್ಷಣ ಮಂಜೂರು ಮಾಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು, 12. ಪಡಿತರ ಚೀಟಿಯ ಮೂಲಕ ಗ್ರಾಮೀಣ ಪ್ರದೇಶದ ಬಡವರಿಗೆ ಕೊಡುವ ಆಹಾರ ಪದಾರ್ಥ ಹಾಗೂ ದವಸಧಾನ್ಯಗಳನ್ನು ಪ್ರಮಾಣವನ್ನು ಹೆಚ್ಚಿಸಿ, ಉಚಿತವಾಗಿ ಕಲ್ಪಿಸಬೇಕು. ಮುಂಬರಲಿರುವ ಕೊರೋನಾದ ಮೂರನೆಯ ಅಲೆಯನ್ನು ಎದುರಿಸುವ ಸಲುವಾಗಿ, ನಗರ, ಪಟ್ಟಣಗಳಲ್ಲಿರುವ ಲಾಡ್ಜ್ಗಳು, ಭವನಗಳು ಮತ್ತು ಕಲ್ಯಾಣ ಮಂಟಪ ಕಟ್ಟಡಗಳನ್ನು ವಶಪಡಿಸಿಕೊಂಡು ಅವುಗಳನ್ನು ಸುಸಜ್ಜಿತವಾದ ಕೊರೋನಾ ಚಿಕಿತ್ಸಾ ಸೆಂಟರ್‍ಗಳನ್ನಾಗಿ ಪರಿವರ್ತಿಸಬೇಕು. 14, ರಾಜ್ಯದಾದ್ಯಂತ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ ಕುರಿತು ಚರ್ಚಿಸಲು ದಲಿತ ಸಂಘಟನೆಗಳ ಮುಖಂಡರನ್ನು ಸರ್ಕಾರ ಕೂಡಲೇ ಆನ್‍ಲೈನ್ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎಸ್ಸಿ ಎಸ್ಟಿ ನೌಕರರ ಪ್ರಧಾನ ಸಂಚಾಲಕರಾದ, ಗೋವಿಂದ ದೊಡಮನಿ, ನಗರ ಸಂಚಾಲಕರಾದ ಶಂಕರ ಚಲವಾದಿ, ಬಬಲೇಶ್ವರ ತಾಲೂಕಾ ಪ್ರಧಾನ ಸಂಚಾಲಕರಾದ ವಿಶ್ವಾಸ ಕಾಂಬಳೆ, ಸೋಮು ರಣದೇವಿ, ಮಲ್ಲು ಮಡ್ಡಿಮನಿ, ಸಚೀನ ಮೂರಮಾನ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.