ಮೂಢನಂಬಿಕೆ, ಕಂದಚಾರಗಳಿಂದ ಜನರು ಹೊರಬರಬೇಕು

ಹಗರಿಬೊಮ್ಮನಹಳ್ಳಿ:ಜ.11 ಅಲೆ ಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಜನರು ಮೂಢನಂಬಿಕೆಗಳು ಹಾಗೂ ಕಂದಚಾರಗಳಿಂದ ಹೊರಬರಬೇಕು. ಜಾಗೃತರಾಗಬೇಕು ಎಂದು ಗೊಲ್ಲರ ಸಮುದಾಯದ ತಾಲೂಕು ಅಧ್ಯಕ್ಷ ಹಾಗೂ ಪುರಸಭೆಯ ಸದಸ್ಯ ಕನಕಪ್ಪ ಕರೆ ನೀಡಿದರು.
ತಾಲೂಕಿನ ಆನೆಕಲ್ಲು ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಯಕ್ಕೆ ಜನಜಾಗೃತಿ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾಲ ಎಷ್ಟೇ ಬದಲಾದರೂ ನಮ್ಮ ಸಮುದಾಯಗಳು ಮಾತ್ರ ಬದಲಾಗುತ್ತಿಲ್ಲ. ಇನ್ನೂ ಮೂಢನಂಬಿಕೆಗಳನ್ನು ನಂಬುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕೆಲ ಪದ್ಧತಿಗಳನ್ನು ಕೈಬಿಟ್ಟು, ಯುವಪಿಳಿಗೆ ಅದರಲ್ಲೂ ಯುವತಿಯರಿಗೆ ಮೂಢನಂಬಿಕೆಯೊಳ್ಳ ಯಾವುದೇ ಪದ್ಧತಿಗಳನ್ನು ಬಲವಂತವಾಗಿ ನಂಬಿಸಬಾರದು, ಅವರಿಗೆ ಸಮಾಜದ, ತಾಂತ್ರಿಕ ಬದುಕಿನ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರದ ಸೌಲಭ್ಯಗಳು ಸಾಕಷ್ಟು ಜಾರಿಯಲ್ಲಿವೆ ಆದರೆ, ಅವುಗಳ ಸದುಪಯೋಗಮಾತ್ರ ನಮ್ಮವರಿಗೆ ತಿಳಿಯುತ್ತಿಲ್ಲ ಎಂದರು. ಇನ್ನು ಮುಂದಾದರೂ ಸರ್ಕಾರಗಳಿಂದ ಬರುವಸಂತ ಸೌಲಭ್ಯಗಳನ್ನು ಪಡೆದು ಬದಲಾವಣೆಯಾಗಬೇಕಿದೆ ಎಂದರು.
ನಂತರ ಮುಖಂಡ ಲಿಂಗರಾಜ್ ಮಾತನಾಡಿ, ಆರೋಗ್ಯ ಇಲಾಖೆಯ ಉಪಯುಕ್ತ ಮಾಹಿತಿಗಳನ್ನು ಪ್ರತಿಯೊಬ್ಬರು ಅರಿಯುವ ಮೂಲಕ ಜಾಗೃತರಾಗಬೇಕು. ಯುವತಿಯರು, ಗರ್ಭೀಣಿಯರು ಧೈರ್ಯದಿಂದ ಜೀವನ ಸಾಗಿಸಲು ಮನೆಯಲ್ಲಿನ ಪಾಲಕರು ಪ್ರೋತ್ಸಹ ನೀಡಬೇಕು. ಕೆಲ ಕಂದಚಾರಗಳಿಂದ ಹೊರಬೇಕು ಎಂದರು.
ಈ ವೇಳೆ ಗಂ.ಭೀ.ಸರ್ಕಾರಿ ಪ.ಪೂ.ಕಾಲೇಜ್‍ನ ಉಪನ್ಯಾಸಕ ಗೂಳೆಪ್ಪ ಹಾಗೂ ಆರೋಗ್ಯ ಇಲಾಖೆ ಕಿರಿಯ ಸಹಾಯಕಿ ಸುಧಾ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ವಿ.ವೀರೇಶ, ಗ್ರಾ.ಪಂ.ಸದಸ್ಯರಾದ ಕಿನ್ನೂರಿ ಬಸವರಾಜ್, ಪೂಜಾರ್ ಮಲ್ಲಪ್ಪ, ಅಲೆಮಾರಿ ಸಮುದಾಯದ ತಾಲೂಕು ಅಧ್ಯಕ್ಷ ಕರ್ಜಿಗಿ ಮಂಜುನಾಥ, ಮುಖಂಡರಾದ ಶಾಮಪ್ಪ, ಜಿ.ಡಿ.ಲಿಂಗಪ್ಪ, ಜಿ.ಅಂಜಿನಪ್ಪ, ಮಹೇಶ್, ದಾಸರ ಮಹೇಶ್, ದುರುಗಪ್ಪ, ಹನುಮಂತಪ್ಪ ಮತ್ತಿತರರು ಇದ್ದರು.
ನಿಲಯಗಳ ಮೇಲ್ವಿಚಾರಕರಾದ ಅಂಗೂರು ಗಂಗಪ್ಪ, ಪ್ರಕಾಶ್ ಕೊರ್ಜಿ, ದೇವೇಂದ್ರನಾಯ್ಕ ಹಾಗೂ ಇಲಾಖೆಯ ಮಹಾಂತೇಶ್ ಕಾರ್ಯಕ್ರಮ ನಿರ್ವಹಿಸಿದರು.