ಮೂಢನಂಬಿಕೆಗಳ ಬಿಟ್ಟರೆ ಜಗತ್ತು ಸ್ವರ್ಗವಾಗುತ್ತದೆ

ದಾವಣಗೆರೆ. ಆ.4; ವಿಶ್ವದ ಮೂಢನಂಬಿಕೆಗಳ ರಾಜಧಾನಿ ಭಾರತದೇಶವಾಗಿದೆ ಹೆಜ್ಜೆಗೂ ಹೆಜ್ಜೆಗೂ ಮೂಢನಂಬಿಕೆಗಳನ್ನು ದೇಶದ ಜನರು ಆಚರಣೆ ಮಾಡುತ್ತಿರುವುದರಿಂದ ದೇಶದ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.ನಗರದ  ವಿರಕ್ತಮಠದಲ್ಲಿ ನಡೆದ ಬಸವಪಂಚಮಿ ಹಾಲು ಕುಡಿಸುವ ಹಬ್ಬ ಸಮಾರಂಭದ ಸಾನಿಧ್ಯವಹಿಸಿಕೊಂಡು ಮಾತನಾಡಿದರು.ಮೂಢನಂಬಿಕೆಗಳನ್ನು ಬಿಟ್ಟರೆ ಜಗತ್ತು ಸ್ವರ್ಗವಾಗುತ್ತದೆ . ಬೆಳಿಗ್ಗೆ ಎಡಗಡೆ ಎದ್ದರೆ ಅಪಶಕುನ , ಬಲಕ್ಕೆ ಎದ್ದರೆ ಶುಭಶಕುನ ಎಂದು ನೋಡುತ್ತಾರೆ ಒಟ್ಟಿನಲ್ಲಿ ಯಾವ ಕಡೆ ಮುಖಮಾಡಿ ಎದ್ದರೂ ಜೀವಂತ ಎದ್ದೀವಿ ಎಂದು ಸಂತೋಷ ಪಡಬೇಕು ಎಷ್ಟೋ ಜನ ಮಲಗಿದ್ದಾಗ ಚಿರನಿದ್ರೆಗೆ ಹೋಗಿದ್ದಾರೆ ಹಾಗಾಗಿ ಇಂತಹ ಮೂಢನಂಬಿಕೆಯಿಂದ ಹೊರಗೆ ಬನ್ನಿ. ಇನ್ನೂ ಕೆಲಸಕ್ಕೆ ಹೊರಗಡೆ  ಹೊರಟರೆ ರಾಹುಕಾಲವಿದೆ ಸ್ವಲ್ಪ ಬಿಟ್ಟು ಹೊರಡಬೇಕು ಇವತ್ತು ಸೋಮವಾರ ಒಳ್ಳೆಯದು ಮಂಗಳವಾರ ಕೆಟ್ಟದ್ದು  ಹೀಗೆ ದಿನ , ವಾರ , ತಿಥಿ , ನಕ್ಷತ್ರ , ಹುಣ್ಣುಮೆ ಅಮವಾಸ್ಯೆ ನೋಡುತ್ತಾ ಬಂದ ಭಾರತೀಯರು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದಾರೆ. ಇಂತಹ ಅಜ್ಞಾನದಿಂದ ನಾವು ಹೊರಗೆ ಬರಬೇಕು .ನಾಗರಪಂಚಮಿಯಂದು ಕಲ್ಲು ನಾಗರಕ್ಕೆ ಹಾಲು ಎರೆದು ಹಾಲು ಚೆಲ್ಲಬೇಡಿ. ಮಕ್ಕಳಿಗೆ , ಬಡವರಿಗೆ , ಹಿರಿಯರಿಗೆ ಹಾಲು ಕುಡಿಯಲು ಕೊಡಿ . ಹಾಲು ಕುಡಿಯುವುದರಿಂದ ಬುದ್ದಿ ಚೆನ್ನಾಗಿ ಚುರುಕಾಗುತ್ತದೆ. ಡಿ ವಿಟಮಿನ್ ಸಿಗುತ್ತದೆ ಇದರಿಂದ ಮೂಳೆಗಳು ಗಟ್ಟಿಯಾಗುತ್ತದೆ . ಮಕ್ಕಳು ಎತ್ತರವಾಗಿ ಬೆಳೆಯುಲು ಹಾಲು ಕುಡಿಯಲು ಕೊಡಿ ದಷ್ಟಪುಷ್ಟವಾಗಿ ಬೆಳೆಯುವರು ಅಷ್ಟೇ ಅಲ್ಲದೇ ಪ್ರತಿರಾತ್ರಿ ಮಲಗುವಾಗ ಒಂದು ಲೋಟ ಬಿಸಿಹಾಲು ಕುಡಿದು ಮಲಗಿದರೆ ಚೆನ್ನಾಗಿ ನಿದ್ರೆ ಬರುತ್ತದೆ ಎಂದು ಸ್ವಾಮೀಜಿ ಹೇಳಿದರು. ಬಿಜೆಪಿ ಮುಖಂಡ ಯಶವಂತರಾವ್ ಜಾದವ್ ಮಾತನಾಡಿ ಬಸವತತ್ವವನ್ನು ಪಾಲಿಸುವ ಮಠ ಅದು ಚಿತ್ರದುರ್ಗ ಮುರುಘಾಮಠವಾಗಿದೆ. ಮುರುಘಾ ಶರಣರ ಮಾರ್ಗದರ್ಶನದಲ್ಲಿ ಬಸವಪ್ರಭು ಸ್ವಾಮೀಜಿ ಅವರು ದಾವಣಗೆರೆಯ ನಗರದಲ್ಲಿ ಬಸವತತ್ವವನ್ನು ಪ್ರಚಾರ ಮಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಯಶಸ್ಸನ್ನು ಕಂಡಿದ್ದಾರೆ . ಸರಳವಾಗಿ ಎಲ್ಲರೊಂದಿಗೆ ಬೆರೆಯುವ ಸ್ವಾಮೀಜಿ ನಮಗೆ ದೊರಕಿದ್ದು ನಮ್ಮೆಲ್ಲರ ಪುಣ್ಯ. ಮೂಢನಂಬಿಕೆಗಳನ್ನು ಆಚರಣೆ ಮಾಡುವುದು ಬೇಡ .ನಂಬಿಕೆ ಇರಲಿ. ಸತ್ಯದ ಆಚರಣೆಗಳನ್ನು ಮಾಡಿ ಹಬ್ಬವನ್ನು ಮಾಡೋಣ ಎಂದು ಹೇಳಿದರು. ವೇದಿಕೆಯಲ್ಲಿ ಡಾ.ನಸೀರ್ ಅಹಮದ್ ,ಕಣಕುಪ್ಪಿ ಮುರುಗೇಶಪ್ಪ , ಲಂಬಿ ಮುರುಗೇಶಪ್ಪ ,ಹಾಸಭಾವಿ ಕರಿಬಸಪ್ಪ ,ಎಸ್.ಓಂಕಾರಪ್ಪ , ಮಹದೇವಮ್ಮ , ಕಂಚಿಕೆರ ಮಹೇಶ್ ಇದ್ದರು.