ಮೂಡುಬಿದಿರೆ : ಮೆಸ್ಕಾಂ ಸಿಬಂದಿಗಳಿಗೆ ಉಚಿತ ವ್ಯಾಕ್ಸಿನ್

ಮೂಡುಬಿದಿರೆ, ಮೇ ೨೭- ಫ್ರಂಟ್‌ಲೈನ್ ವಾರಿಯರ‍್ಸ್‌ಗಳಾಗಿರುವ ಇಲ್ಲಿನ ಮೆಸ್ಕಾಂನ ಎಲ್ಲಾ ಸಿಬಂದಿಗಳಿಗೆ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ಬುಧವಾರ ಉಚಿತ ವ್ಯಾಕ್ಸಿನ್‌ನ್ನು ನೀಡಲಾಯಿತು.
ಶಾಸಕ ಉಮಾನಾಥ ಕೋಟ್ಯಾನ್ ಚಾಲನೆಯನ್ನು ನೀಡಿ ಮಾತನಾಡಿ ಜನರ ಮಧ್ಯೆ ಕೆಲಸ ಮಾಡುತ್ತಿರುವ ಮೆಸ್ಕಾಂ ಸಿಬಂದಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಬಾರದೆನ್ನುವ ದೃಷ್ಠಿಯಿಂದ ನೀಡಲಾಗುತ್ತಿದೆ. ಸರಕಾರದನ್ನೇ ಕಾಯುವುದಲ್ಲ ಅದಕ್ಕಾಗಿ ಖಾಸಗಿಯಾಗಿ ಲಸಿಕೆ ಬೇಕೆನ್ನುವವರಿಗೆ ಶುಕ್ರವಾರದಿಂದ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಸಂಸ್ಥೆಯಲ್ಲಿ ನೀಡಲಾಗುತ್ತಿದೆ ಹಾಗೂ ವಿಕಲಚೇತನರಿಗಾಗಿ ಶನಿವಾರದಂದು ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಲಸಿಕೆ ನೀಡಲಾಗುವುದು ಎಂದು ಹೇಳಿದರು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ , ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮೂಡುಬಿದಿರೆ
ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.