ಮೂಡುಬಿದಿರೆ ತಾಲೂಕು ನಲಿಕೆಯವರ ಸಂಘದ ವತಿಯಿಂದ ದೈವಾರಾಧನೆ ಕಲಾವಿದರ ಸಮೀಕ್ಷೆ ಸರ್ಕಾರಕ್ಕೆ ಸಲ್ಲಿಕೆ

ಮೂಡುಬಿದಿರೆ, ಜ.೯- ವಿವಿಧ  ಜಾನಪದ  ಕ್ಷೇತ್ರದಲ್ಲಿ  ಸೇವೆ  ಸಲ್ಲಿಸಿದ  ಕರಾವಳಿಯ  ನಲಿಕೆ , ಪರವ ಸಮುದಾಯಗಳ ಕಲಾವಿದರ ಸಮೀಕ್ಷೆಯನ್ನು ಮೂಡುಬಿದಿರೆ ತಾಲೂಕು ನಲಿಕೆಯವರ ಸಂಘದ ವತಿಯಿಂದ ನಡೆಸಲಾಗಿದೆ.

ಇನ್ನೂರು ಮಂದಿ  ದೈವಾರಾಧನೆ  ಕಲಾವಿದರ ಪಟ್ಟಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ ಕತ್ತಲ್ಸಾರ್ ಅವರ ಮುಖಾಂತರ ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ನಲಿಕೆಯವರ ಸಂಘದ ಅಧ್ಯಕ್ಷ ಎನ್. ಕೆ. ಸಾಲ್ಯಾನ್  ಮಾರೂರು, ತಾಲೂಕು ಯುವ ಘಟಕದ ಕೋಶಾಧಿಕಾರಿ ದಿನೇಶ್. ಪಿ ಇರುವೈಲು ಪದವು, ಮೂಡಬಿದಿರೆ ತಾಲೂಕು ಸಂಘದ ಪ್ರಮುಖರಾದ ಚೆನ್ನ ವಾಲ್ಪಾಡಿ, ಪದ್ಮನಾಭ ವಾಲ್ಪಾಡಿ ಉಪಸ್ಥಿತರಿದ್ದರು.