ಮೂಡುಬಿದಿರೆ: ಉಚಿತ ಆರೋಗ್ಯ ಸೇವಾ ಕೇಂದ್ರ ಉದ್ಘಾಟನೆ

ಮೂಡುಬಿದಿರೆ , ಎ.೨೯- ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಆಳ್ವಾಸ್ ಸಂಸ್ಥೆಯ ವತಿಯಿಂದ ಮೂಡುಬಿದಿತೆ ತಾಲೂಕು ಹಗೂ ಆಸುಪಾಸಿನ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ಮತ್ತು ಉಚಿತ ಆರೋಗ್ಯ ಸೇವಾ ಕೇಂದ್ರವನ್ನು ಸ್ಕೌಟ್ ಗೈಡ್ಸ್ ಕನ್ನಡಭವನದಲ್ಲಿ ಬುಧವಾರ ಪ್ರಾರಂಭಿಸಲಾಯಿತು.
ಆರೋಗ್ಯ ತಪಾಸಣೆಗೆ ಮೊದಲಾಗಿ ಭಾಗವಹಿಸಿದ ಪದ್ಮಾವತಿ ಎಂಬವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್,
ಮುಖ್ಯಾಧಿಕಾರಿ ಇಂದು ಎಂ., ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದರು.
ಆಳ್ವಾಸ್ ಆಯುರ್ವೇದ, ಹೋಮಿಯೋಪಥಿ, ನ್ಯಾಚುರೋಪಥಿಯ ತಜ್ಞ ವೈದ್ಯರು ಸಹಿತ ೬೦ ಮಂದಿ ಸಿಬಂದಿಗಳು ಈ ಕೇಂದ್ರದಲ್ಲಿ ಸೇವೆ ನೀಡುತ್ತಿದ್ದಾರೆ.