ಮೂಡನಂಬಿಕೆಗಳಿಗೆ ಬಲಿಯಾಗದಿರಲು ಕರೆ

ಸಂಡೂರು :ಜ:11 ಹಲವಾರು ವರ್ಷಗಳಿಂದ ಬೆಳೆದು ಹೆಮ್ಮರವಾದಂಥಹ ಜಾತಿ, ಕಂದಾಚಾರ, ಮೂಡನಂಬಿಕೆಗಳ, ಮೌಢ್ಯತನದ ಸಂಪ್ರದಾಯವನ್ನು ಇಂದಿಗೂ ಅನುಸರಿಸುತ್ತಿರುವುದು ಶೂಚನೀಯ ಸಂಗತಿ. ದೇಶದಲ್ಲಿ ವಿಜ್ಞಾನ ಅವಿಷ್ಕಾರಗಳು ನಡೆಯುತ್ತಲೇ ಇದೆ. ಆದರೂ ಶೇ 100ರಲ್ಲಿ 80% ಮೂಡನಂಬಿಕೆಗಳಿಗೆ ಬಲಿ ಯಾಗುತ್ತಿರುವ ಪ್ರಮಾಣ ಹೆಚ್ಚಳವಾಗಿದೆ ಎಂದು ವಿಠಲಾಪುರ ಪ್ರೌಢಶಾಲೆಯ ಶಿಕ್ಷಕ ಸಂತೋಷ್ ಕುಮಾರ್ ತಿಳಿಸಿದರು.
ಅವರು ತಾಲ್ಲೂಕಿನ ವಿಠಲಾಪುರ ಗ್ರಾಮದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ನಿತ್ಯ ಬದುಕಿನಲ್ಲಿಯ ಅವೈಜ್ಞಾನಿಕ ಶಕುನ ಕುರಿತು ಮಾತನಾಡಿದರು. ಇಂದಿನ ದಿನ ಮಾನದಲ್ಲಿ ವೈಜ್ಞಾನಿಕ ಸತ್ಯಾ ಅಸತ್ಯತೆಯನ್ನ ತಿಳಿಯಬೇಕಾಗಿದೆ. ಅದಕ್ಕೆ ಬೇಕಾದ ಎಲ್ಲಾ ಮೂಲ ಅಂಶಗಳನ್ನು ವಿಜ್ಞಾನ ನಮಗೆ ನೀಡುತ್ತದೆ. ಪ್ರತಿವೋರ್ವ ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ವೈಜ್ಞಾನಿಕ ಚಿಂತನೆಗಳನ್ನ ರೂಢಿಸಿಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಂದಿನ ಸಂದರ್ಭದಲ್ಲಿ 9 ಸೌರ್ಯವ್ಯೂಹ ಗ್ರಹಗಳ ದೈನಂದಿನ ವಾರ್ಷಿಕ ಚಲನಗಳ ಬಗ್ಗೆ ವಿದ್ಯಾರ್ಥಿಗಳ ಮೂಲಕವೇ ಪ್ರತ್ಯಕ್ಷಕ ನಡೆಯಿತು.