ಮೂಗು ಸೋರುತ್ತಿದೆಯೇ…

ರಾತ್ರಿ ಮಲಗುವ ಮುನ್ನ ಬಿಸಿ ನೀರಿಗೆ ಅರಿಶಿನ ಪುಡಿ ಹಾಕಿ ಕಲಸಿ ಕುಡಿದರೆ ಮೂಗಿನಿಂದ ನೀರು ಸೋರುತ್ತಿದ್ದರೆ ನಿಲ್ಲುತ್ತದೆ.
-ಹಸಿ ಶುಂಠಿಯನ್ನು ನೀರಲ್ಲಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ. ಕಷಾಯ ಸ್ವಲ್ಪ ಬೆಚ್ಚಗೆ ಇರುವಾಗ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಪ್ರಯೋಜನವಿದೆ.
-ಬೆಳ್ಳುಳ್ಳಿಯನ್ನು ನೀರಲ್ಲಿ ಚೆನ್ನಾಗಿ ಬೇಯಿಸಿ ಸೂಪ್ ಮಾಡಿ. ಅದಕ್ಕೆ ಕಲ್ಲುಸಕ್ಕರೆ ಬೆರೆಸಿ ಕುಡಿದರೂ ಮೂಗು ಸೋರುವುದು ನಿಲ್ಲುತ್ತದೆ.
-ನೀರನ್ನು ಚೆನ್ನಾಗಿ ಕುದಿಸಿ ಅದಕ್ಕೆ ಎರಡು ಹನಿ ನೀಲಗಿರಿ ಎಣ್ಣೆ ಹಾಕಿ ಮುಖಕ್ಕೆ ಹಬೆ ತೆಗೆದುಕೊಂಡರೆ ಪ್ರಯೋಜನವಿದೆ.
-ನೀರಿಗೆ ನಿಂಬೆ ರಸ, ಜೇನುತುಪ್ಪ , ಸೈಂಧವ ಉಪ್ಪು ಸೇರಿಸಿ ದಿನಕ್ಕೆ ಒಂದು ಬಾರಿ ಸೇವಿಸಿದರೆ ಮೂಗು ಸೋರುವ ಸಮಸ್ಯೆ ನಿವಾರಣೆಯಾಗುತ್ತದೆ.
-ಬೆಳಗ್ಗೆ ಖಾಲಿ ಹೊಟ್ಟೆಗೆ ಮತ್ತು ರಾತ್ರಿ ಮಲಗುವ ಮುಂಚೆ ೨ ರಿಂದ ೩ ತುಳಸಿ ಎಲೆಗಳನ್ನು ಅಗಿದು ತಿಂದರೆ ಪ್ರಯೋಜನವಿದೆ.
-ಬೆಟ್ಟದ ನೆಲ್ಲಿಕಾಯಿ ಪುಡಿಗೆ ಜೇನುತುಪ್ಪ ಬೆರೆಸಿ ದಿನಕ್ಕೆ ೨ ಬಾರಿ ಸೇವಿಸಿದರೆ ಮೂಗು ಸೋರುವುದು ನಿಲ್ಲುತ್ತದೆ.
-ಹಸುವಿನ ತುಪ್ಪದಲ್ಲಿ ಏಳ್ಳನ್ನು ಹುರಿದು ಅದಕ್ಕೆ ಬೆಲ್ಲ ಸೇರಿಸಿ ಉಂಡೆ ತಯಾರಿ. ಈ ಉಂಡೆಯನ್ನು ಪ್ರತಿ ದಿನ ಸೇವಿಸಿದರೆ ಮೂಗು ಸೋರುವುದು ನಿಲ್ಲುತ್ತದೆ.