ಮೂಗಬಸವೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಕಾರ್ಯಕ್ರಮ


ಸಂಜೆವಾಣಿ ವಾರ್ತೆ
ಕೊಟ್ಟೂರು, ಜು.31: ತಾಲೂಕಿನ ಚಿರಿಬಿ ರಸ್ತೆಯಲ್ಲಿರುವ  ಶ್ರೀ ಮೂಗಬಸವೇಶ್ವರ  ದೇವಸ್ಥಾನದಲ್ಲಿ  ಸತತ ಸುಮಾರು 15 ವರ್ಷಗಳ ಕಾಲ ಯಾವುದೇ ಧಾರ್ಮಿಕ, ವಿಧಿ ವಿಧಾನಗಳು, ಪೂಜಾ ಕಾರ್ಯಕ್ರಮಗಳು ನಡೆದಿರಲಿಲ್ಲ, ಎರಡು ಗ್ರಾಮಗಳ ನಡುವೆ ಕ್ಷುಲ್ಲಕ ಕಾರಣಗಳಿಂದಾಗಿ ಶ್ರೀ ಮೂಗಬಸವೇಶ್ವರ ಸ್ವಾಮಿಯ  ದೇವಸ್ಥಾನದಲ್ಲಿ ಯಾವುದೇ ಪೂಜಾ ಕಾರ್ಯಕ್ರಮಗಳು ಧಾರ್ಮಿಕ, ವಿಧಿ, ವಿಧಾನಗಳು ನಡೆದಿರಲಿಲ್ಲ.
ಮುಜರಾಯಿ ಇಲಾಖೆಯು ಶ್ರೀಮೂಗ ಬಸವೇಶ್ವರ ದೇವಸ್ಥಾನವನ್ನು ತಮ್ಮ ವ್ಯಾಪ್ತಿಗೆ ಸಿ ಗ್ರೇಡ್ ಗೆ ತೆಗೆದುಕೊಂಡು ಮುಜರಾಯಿ ಇಲಾಖೆಯಿಂದ ಧಾರ್ಮಿಕ, ವಿಧಿ, ವಿಧಾನಗಳನ್ನು ಆಚರಿಸಲು ಅನುಮತಿಯನ್ನು ನೀಡಿದೆ. ಹೀಗಾಗಲೇ  ಮುಜರಾಯಿ ಇಲಾಖೆ ಶ್ರೀ ಮೂಗಬಸವೇಶ್ವರ ದೇವಸ್ಥಾನಕ್ಕೆ ಬಣ್ಣವನ್ನು ಬಳಿಯಲು ಪ್ರಾರಂಭಿಸಿ ಸ್ವಚ್ಛತೆಯನ್ನು ಮಾಡುತ್ತಿದೆ.
ಆದ ಕಾರಣಕ್ಕಾಗಿ ಮೂಗಬಸವೇಶ್ವರ ದೇವಸ್ಥಾನದಲ್ಲಿ ರುದ್ರಾಭಿಷೇಕ ಕಾರ್ಯಕ್ರಮವು ಶ್ರಾವಣ ಮಾಸದ ಪ್ರಯುಕ್ತ ಜುಲೈ 29ರಂದು ಪ್ರಾರಂಭವಾಗಿದೆ ಈ ರುದ್ರಾಭಿಷೇಕ ಕಾರ್ಯಕ್ರಮವು ಆಗಸ್ಟ್ 28 ರ ವರೆಗೆ ನಡೆಯಲಿದೆ. ಸುತ್ತಮುತ್ತಲಿನ ಜಿಲ್ಲೆ ಹಾಗೂ ಹಳ್ಳಿಗಳಿಂದ  ಭಕ್ತಾಧಿಗಳು ಶ್ರೀ ಮೂಗಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ಸ್ವಾಮಿಗೆ ಪೂಜಾ ವಿಧಿ ವಿಧಾನ ಕಾರ್ಯಕ್ರಮಗಳನ್ನು ಭಕ್ತರು ಮಾಡಿಸಬಹುದು, ರುದ್ರಾಭಿಷೇಕವು ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾಗುತ್ತದೆ ಭಕ್ತಾಧಿಗಳು ರುದ್ರಾಭಿಷೇಕವನ್ನು ಮಾಡಿಸುವುದಾದರೆ 200 ರೂಪಾಯಿಗಳ ರಸೀದಿಯನ್ನು ಪಡೆದು ಮಾಡಿಸಬಹುದೇಂದು ಎಂದು ಸುದ್ದಿಗಾರರೊಂದಿಗೆ  ಅರ್ಚಕರು ತಿಳಿಸಿದರು.
ಈ ಸಂದರ್ಭದಲ್ಲಿ ಚಿರಬಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ದೇವಿರಮ್ಮ ಬೂದಿ ನಾಗರಾಜ್, ಉಪಾಧ್ಯಕ್ಷರಾದ ಚಿನ್ಮಯಾನಂದ ಸ್ವಾಮಿ, ಸದಸ್ಯರಾದ ಪಿ ನಾಗರಾಜ್, ಮುಖಂಡರಾದ ಕುಮಾರಪ್ಪ, ನಾಗರಾಜ್, ಹನುಮನಹಳ್ಳಿ ಕೆಂಚಪ್ಪ ಹಾಗೂ ಅರ್ಚಕರಾದ ಸಿದ್ದೇಶ್ ಉಪಸ್ಥಿತರಿದ್ದರು.