ಮೂಕಹಳ್ಳಿ ಗ್ರಾಮಕ್ಕೆ ವಿವಿಧ ಮಠಗಳ ಸ್ವಾಮೀಜಿಗಳು ಭೇಟಿ

ಚಾಮರಾಜನಗರ, ಜೂ.05- ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಮಹದೇವಪ್ಪ ಹಾಗು ಹೆಂಡತಿ ಮತ್ತು ಇಬ್ಬರ ಮಕ್ಕಳು ನಿಜವಾಗಲೂ ಸಮಾಜದ ತಲೆ ತಗ್ಗಿಸುವ ಘೋರ ಘಟನೆ ಎಂದು ವೀರಶೈವ-ಲಿಂಗಾಯತ ಸ್ವಾಮೀಜಿಗಳು ವಿಷಾದ ವ್ಯಕ್ತಪಡಿಸಿದರು.
ಇತ್ತೀಚೆತೆ ತಾಲ್ಲೂಕಿನ ಎಚ್.ಮೂಕಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೃತರ ಮನೆಗೆ ವೀರಶೈವ-ಲಿಂಗಾಯತ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು ಭೇಟಿ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಹಿರಿಯ ಮಗಳು ಮತ್ತು ಸಂಬಂಧಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಿದರು. ನಿಮ್ಮ ಜೊತೆಗೆ ನಾವಿದ್ದೀವಿ ಎಂದು ಭರವಸೆ ಕೊಟ್ಟರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ ಜಿಲ್ಲಾ ಅಧ್ಯಕ್ಷ ಮೂಡ್ಲುಪುರ ನಂದೀಶ್ ಈ ಹೆಣ್ಣು ಮಗಳಿಗೆ ಎಲ್ಲಾ ರೀತಿಯ ಸಹಾಯಕ್ಕೂ ಮುಂದೆ ನಾವು ಇರುತ್ತೆವೆ ಜೊತೆಗೆ ನಮ್ಮ ಸಮಾಜ ಇರುತ್ತದೆ, ಇವರಿಗೆ ಸೇರಬೇಕಾದ ಎಲ್ಲಾ ಸರ್ಕಾರ ಸವಲತ್ತುಗಳನ್ನು ಸಿಗುವಂತೆ ಮಾಡಲು ಪ್ರಯತ್ನ ಮಾಡುತ್ತೆವೆ, ಹಾಗೂ ಇವರು ಆರ್ಥಿಕವಾಗಿ ಬರುವ ಸಲುವಾಗಿ ಇವರಿಗೆ ಯಾವುದಾದರು ಉದ್ಯೋಗವನ್ನು ಕೊಡಿಸುವ ನಿಟ್ಟಿನಲ್ಲಿ ಹೊರಡುತ್ತೆವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಲ್ಲರು ಸೇರಿ ಆರ್ಥಿಕ ಸಹಾಯಮಾಡಿ ಮುಂದೆಯೂ ಇಂತಹ ಹೇಯ ಘಟನೆಗಳು ಆ ಗ್ರಾಮದಲ್ಲಾಗಲಿ ಎಲ್ಲಿಯೂ ನಡೆಯಬಾರದು ಎಂದು ಗ್ರಾಮದಲ್ಲಿ ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಸ್ವಾಮಿಜೀಗಳಾದ ಗೌಡಹಳ್ಳಿ ಮಠದ ಶ್ರೀ ಮರಿತೊಂಟದಾರ್ಯ ಸ್ವಾಮಿಜೀಗಳು, ಮರಿಯಾಲ ಮಠದ ಶ್ರೀ ಮುರುಘರಾಜೇಂದ್ರ ಶ್ರಿಗಳು, ಚಾಮರಾಜನಗರದ ಶ್ರೀ ಸಿದ್ದಮಲ್ಲೇಶ್ವರ ವಿರಕ್ತ ಮಠದ ಶ್ರೀ ಚನ್ನಬಸವಸ್ವಾಮಿಜೀಗಳು, ಜೆಎಸ್‍ಎಸ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆರ್.ಎಂ. ಸೋಮಣ್ಣ, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಪಿ.ಎನ್.ದಯಾನಿಧಿ, ಪೆÇೀಲಿಸ್ ಇಲಾಖೆಯ ಯೋಗೆಶ್ ಸೇರಿದಂತೆ ಹಲವಾರು ಯುವಕರು, ಮುಖಂಡರು ಹಾಜರಿದ್ದರು.