ಮೂಕಪ್ರಾಣಿಗಳ ರೋಧನವನ್ನು ಕೇಳುವವರು… ಇಲ್ಲದಂತ ದುರಂತ ಕಥೆ…

ಕೋಲಾರ,ಮಾ,೧೩- ಕೋಲಾರ ನಗರದ ಪಶು ವೈದ್ಯಕೀಯ ಆಸ್ಪತ್ರೆ ಹಾಗೂ ಪಶು ಸಂಗೋಪನ ಇಲಾಖೆಯು ಜನಪ್ರತಿನಿಧಿಗಳ ನಿರ್ಲಕಕ್ಕೆ ಒಳಗಾಗಿದ್ದು ಹೇಳುವವರು… ಕೇಳುವವರು ಇಲ್ಲದಂತಾಗಿದೆ.
ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿಯೇ ಸುಮಾರು ನಿಗಧಿತ ಪ್ರಮಾಣ ಹುದ್ದೆಗಳಿಗಿಂತ ೧೨೦ ಹುದ್ದೆಗಳು ಖಾಲಿ ಇದ್ದರೆ. ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ನಿಗಧಿ ಪಡೆಸಿರುವ ೫ ವೈದ್ಯರ ಹುದ್ದೆಗಳು ಖಾಲಿ ಇದ್ದು ಮೂಕ ಪ್ರಾಣಿಗಳ ಗೋಳಿನ ರೋಧನವನ್ನು ಕೇಳುವವರು ಇಲ್ಲದಂತಾಗಿರುವುದು ಜನಪ್ರತಿನಿಧಿಗಳ ಅಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಜಿಲ್ಲಾ ಕೇಂದ್ರದಲ್ಲಿನ ಪಶು ಆಸ್ಪತ್ರೆಯಲ್ಲಿ ಹಲವಾರು ತಿಂಗಳುಗಳಿಂದ ಇರುವಂತ ವೈದ್ಯರ ಹುದ್ದೆಯು ಖಾಲಿ ಇದ್ದರೂ ಜನಪ್ರತಿನಿಧಿಗಳಾಗಲಿ, ಜಿಲ್ಲಾ ಆಡಳಿತದ ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ನಿರ್ಲಕ್ಷತೆ ತೋರುತ್ತಿರುವುದು ಮೂಕ ಪ್ರಾಣಿಗಳ ಕುರಿತು ಕರುಣೆ ಎಂಬುವುದು ಇಲ್ಲದಂತ ಕಠಿಣ – ಕಟುಕರ ಹೃದಯವಿರುವಂತ ಅನಾಗರಿಕತೆಯ ಪರಮಾವಧಿ ಎನ್ನಬಹುದಾಗಿದೆ.
ಆಡಳಿತ ರೊಢ ಸರ್ಕಾರವು ಗೋ ಹತ್ಯೆ ನಿಷೇಧ ಎಂದು ಬಾಯಿ ಮಾತಿನಲ್ಲಿ ಘೋಷಿಸುತ್ತಿದ್ದರು ಗೋವುಗಳಿಗೆ ಪೂರಕವಾದ ಅರೋಗ್ಯದ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಗೋ ಶಾಲೆಗಳು ತೆರಯುವಲ್ಲಿ ವಿಫಲವಾಗಿದೆ, ಗೋ ಹತ್ಯೆಗಳ ನಿರಂತರವಾಗಿ ಬಹಿರಂಗವಾಗಿಯೇ ನಡೆಯುತ್ತಿದೆ. ಗೋ ಸಾಗಣೆಗೆ ಯಾವೂದೇ ಅಡತಡೆಗಳು ಇಲ್ಲದಂತಾಗಿದೆ.
ಜಿಲ್ಲೆಯಲ್ಲಿ ಬಹುತೇಕ ರೈತರಿಗೆ ಬರಗಾಲದಲ್ಲಿ ಕೈ ಹಿಡಿದಿರುವುದು ಹೈನುಗಾರಿಕೆ ಎಂಬುವುದು ಜನಜನಿತವಾಗಿದೆ.ರಾಜ್ಯದಲ್ಲಿ ಅತಿಹೆಚ್ಚು ಹಾಲು ನೀಡುವ ಜಿಲ್ಲೆಯಾಗಿ ಎರಡನೇ ಸ್ಥಾನ ಪಡೆದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾವಿರಾರು ಹಾಲಿನ ಸಂಘಗಳಿಂದ ಲಕ್ಷಾಂತರ ಕುಟುಂಬಗಳ ಜೀವನಾಡಿಯಾಗಿದೆ. ಹೈನೂಧ್ಯಮವು ರೈತರ ಕೈ ಹಿಡಿಯದಿದ್ದರೆ ಸಾವಿರಾರು ಮಂದಿ ಇಂದು ಆತ್ಮಹತ್ಯೆಗೆ ಶರಣಾಗುತ್ತಿದ್ದರು ಎಂಬ ಮಾತು ಸುಳ್ಳಲ್ಲ ಎಂದರು.
ಮಾನವನಿಗೆ ಕೋವಿಡ್‌ನಂತಹ ಹೊಸ ಹೊಸ ರೋಗಗಳು ಬಂದಾಗ ಇಡೀ ವಿಶ್ವವೇ ಅದರ ಚರ್ಚೆಯಲ್ಲಿ ಸಂಶೋಧನೆ, ಚಿಕಿತ್ಸೆ ಯ ವಿಷಯಗಳಲ್ಲಿ ಮುಳುಗುತ್ತೇವೆ. ಅದರೆ ಜಾನುವಾರುಗಳಿಗೆ ಹಲವು ರೀತಿ ವಿಚಿತ್ರವಾದ ಕಾಯಿಲೆಗಳು ಬರುತ್ತಿದ್ದರೂ ಸಹ ಅದಕ್ಕೆ ಅಗತ್ಯವಾದ ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ರಾಸುಗಳಿಗೆ ಗಂಟು ರೋಗ, ಕಾಲು ಬಾಯಿ ಜ್ವರ, ಅಂತ್ರಾಕ್ಸ್, ರೇಬಿಸ್ ರೋಗ, ಗಂಟಲು ಬೇನೆ, ಚಪ್ಪೆರೋಗ, ರೇಬಿಸ್ ರೋಗ, ಸೇರಿದಂತೆ ಅನೇಕ ಸಾಂಕ್ರಾಮಿಕ ರೋಗಗಳು ಕಾಡುತ್ತಿರುತ್ತವೆ,
ಮನುಷ್ಯನಿಗೆ ಅದರೆ ಏನೆ ನೋವುಗಳಿಗೆ ಹೇಳಿ ಕೊಳ್ಳಲು ಬಾಯಿ ಇದೆ. ಅದರೆ ಮೂಕ ಪ್ರಾಣಿಗಳು ಯಾರ ಬಳಿ ಅದರ ಗೋಳು ಹೇಳಿ ಕೊಳ್ಳಲು ಸಾಧ್ಯ, ಮನುಷ್ಯನಿಗೆ ಅದರೆ ಸರ್ಕಾರಿ ಅಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಸಿಗದಿದ್ದರೆ ಖಾಸಗಿಯಾಗಿ ಪಡೆಯುತ್ತಾರೆ, ಸರ್ಕಾರ ವಿವಿಧ ಯೋಜನೆಗಳು ರೂಪಿಸಿದೆ. ಅವುಗಳು ಸಿಗದಿದ್ದರೆ ಪ್ರತಿಭಟನೆ, ದೂರು, ದೊಮ್ಮನಗಳಿಂದ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳುತ್ತಾರೆ
ಅದರೆ ಪ್ರಾಣಿಗಳಿಗೆ ಸರ್ಕಾರದ ಯೋಜನೆಗಳು ತಲುಪದಿದ್ದಾಗ ಪ್ರತಿಭಟಿಸುವವರು ಯಾರು? ಅರೋಪಿಸುವವರು ಯಾರು ಅದರ ಸಮಸ್ಯೆಗಳನ್ನು ಕೇಳುವವರು ಯಾರು ಎಂಬ ಚಿಂತನೆಯ ಪರಿಜ್ಞಾನದ ಇಲ್ಲದ ಆಡಳಿತ ವರ್ಗ ಹಾಗೂ ಜನಪ್ರತಿನಿಧಿಗಳು ಕಳೆದ ೬ ತಿಂಗಳಿಂದ ಪಶು ಇಲಾಖೆಗಳಲಿ ೫ ವೈದ್ಯರ ಹುದ್ದೆಗಳು ಖಾಲಿ ಇದ್ದರೂ ಚಕಾರ ಎತ್ತುತ್ತಿಲ್ಲ ಎಂದರೆ ಇವರ ಆಡಳಿತದಲ್ಲಿನ ನಿರ್ಲಕ್ಷತೆಯ ಪರವಾವಧಿಯಾಗಿದೆ.
ಆಸ್ಪತ್ರೆಗಳಲ್ಲಿ ಸರ್ಕಾರವು ಎಷ್ಟೆ ಅನುದಾನ ಬಿಡುಗಡೆ ಮಾಡಿ ಏನೇ ಔಷಧಿಗಳು, ಮಾತ್ರೆಗಳು, ಲಸಿಕೆಗಳು ನೀಡಿದರೂ ಯಾವೂದು ಸಿಗುತ್ತಿಲ್ಲ, ಇಲ್ಲಿನ ಆಸ್ಪತ್ರೆಯಲ್ಲಿ ಕಾಂಪೌಂಡರ್‌ಗಳೆ ವೈದ್ಯರುಗಳು ಅಗಿದ್ದಾರೆ. ಅವರು ಎಲ್ಲವನ್ನು ಖಾಸಗಿ ಪಶು ಔಷಧದ ಅಂಗಡಿಗಳಿಗೆ ಬರೆದು ಕೊಡುತ್ತಾರೆ.ಮೂಕ ಪ್ರಾಣಿಗಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಯಾವೂದು ತಲುಪುತ್ತಿಲ್ಲ ಎಂಬುವುದು ಸಾಕಾಣಿಕೆದಾರರ ಅರೋಪವಾಗಿದೆ.
ಅದರೆ ಸರ್ಕಾರದಿಂದ ಪಶು ವೈದ್ಯಕೀಯ ಅಸ್ಪತ್ರೆಗೆ ಏನೂಂದು ಸೌಲಭ್ಯಗಳು ಕಲ್ಪಿಸುತ್ತಿಲ್ಲವೇ? ಈ ಬಗ್ಗೆ ಜಿಲ್ಲಾ ಪಂಚಾಯಿತಿಯಲ್ಲಿ ವರ್ಷಕ್ಕೊಮ್ಮೆ, ೬ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆಗಳ ಸಭೆಗಳು ಕೆಲವೊಂದು ಇಲಾಖೆಗಳ ಚರ್ಚೆಗೆ ಮಾತ್ರ ಸೀಮಿತವಾಗಿದ್ದು ಪಶು ಇಲಾಖೆಯ ಬಗ್ಗೆ ಪ್ರಶ್ನಿಸುವವರೇ ಇಲ್ಲದಂತಾಗಿರುವುದು ದುರಂತವಾಗಿದೆ. ಇನ್ನಾದರೂ ಮಾನವೀಯತೆ ಇರುವಂತ ಜನಪ್ರತಿನಿಧಿಗಳು ಸಂಘ ಸಂಸ್ಥೆಗಳು ಇತ್ತ ಗಮನ ಹರಿಸಿ ಮೂಕ ಪ್ರಾಣಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ನ್ಯಾಯಾ ದೊರಕಿಸುವರೇ ಎಂದು ಕಾದು ನೋಡೋಣಾವೇ ?