ಮೂಕನ ವೇದನೆ ಅನಾವರಣ

ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಮೂಕನ ಮಕ್ಕಳು’ ಕೃತಿ ಅದೇ ಹೆಸರಿನಲ್ಲಿ ಚಿತ್ರ ಸಿದ್ದಗೊಂಡಿದೆ.
ಪಾಲಹಳ್ಳಿ, ಶ್ರೀರಂಗಪಟ್ಟಣ, ಘಾಟಿಸುಬ್ರಮಣ್ಯ ಸುತ್ತಮುತ್ತ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಮೈಸೂರುಮಂಜು ಆ್ಯಕ್ಷನ್ ಕಟ್ ಹೇಳಿದ್ದಾರೆ.
ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಕಥೆಯಲ್ಲಿ ಮೂಕನ ಭಾವನೆಗಳು ಏನೆಂಬುದನ್ನು ದೃಶ್ಯರೂಪದಲ್ಲಿ ಬಿಂಬಿಸಿದ್ದಾರೆ. ಅನಾಥ ಮೂಕ ಗೌಡನ ಮನೆಯ ನಂಬಿಕಸ್ತ ಆಳು.ಗೆಳೆಯರು ಮದುವೆಯಾಗುವುದನ್ನು ಕಂಡು ತನಗೂ ಜೊತೆ ಬೇಕೆಂದು ಬಯಸುತ್ತಾನೆ. ಈತನ ನ್ಯೂನತೆಯಿಂದ ಯಾರು ಹೆಣ್ಣು ಕೊಡುವುದಿಲ್ಲ. ಇದರಿಂದ ಖಿನ್ನತೆಗೆ ಒಳಗಾಗುತ್ತಾನೆ.
ಸ್ವಾಮೀಜಿಯೊಬ್ಬರು ವರ ಕೊಡುತ್ತಾರೆ. ಅದು ಏನು? ಅದರಿಂದ ಮುಂದೆ ಏನಾಗುತ್ತದೆ ಎನ್ನುವುದು ಕುತೂಹಲ.
ಮೂಕನಾಗಿ ಮಂಜುಕ್ರಿಷ್ ಗೌರಿಬಿದನೂರು ನಾಯಕ ಜೊತೆಗೆ ಸಿನಿಮಾಕ್ಕೆ ಚಿತ್ರಕಥೆ,ಸಂಭಾಷಣೆ,ಸಾಹಿತ್ಯ ಮತ್ತು ಸಹ ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿದ್ದಾರೆ. ನಾಯಕಿ ವಿದ್ಯಾಶ್ರೀ ಟಿ.ಎನ್.ಶ್ರೀನಿವಾಸಮೂರ್ತಿ, ಮೈಸೂರು ರಂಗಾಯಣದ ನೂರ್ ಅಹಮದ್‍ಶೇಕ್, ವಿನಾಯಕ್‍ಭಟ್ ಮತ್ತಿತರಿದ್ದಾರೆ.
ಪವಿತ್ರಕ್ರಿಷ್ ಗೌರಿಬಿದನೂರು ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ಕೊಲ್ಕತ್ತಾ ಠಾಗೋರ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅತ್ಯುತ್ತಮ ಪೋಷಕ ನಟ, ಉತ್ತಮ ಪರಿಸರ ಚಿತ್ರ ಪ್ರಶಸ್ತಿ ಪಡೆದಿದೆ.
ಇಂಗ್ಲೆಂಡ್ ಅಂತರರಾಷ್ಟ್ರೀಯ ಚಿತ್ರೋತ್ಸವ ಜೊತೆಗೆ ರಾಷ್ಟ್ರ,ರಾಜ್ಯ ಪ್ರಶಸ್ತಿ ಮತ್ತು ಪನೋರಮ ಕಡೆಗಳಿಗೆ ಚಿತ್ರ ವೀಕ್ಷಣೆಗಾಗಿ ಕಳುಹಿಸಲಾಗಿದೆ. ಅಂದುಕೊಂಡಂತೆ ಆದರೆ ಸಿನಿಮಾ ಫೆಬ್ರವರಿಯಲ್ಲಿ ತೆರೆಕಾಣುವ ಸಾದ್ಯತೆ ಇದೆ.
ರಾಜ್ಯ ಪ್ರಶಸ್ತಿ ವಿಜೇತ ಗಣೇಶ್‍ಭಟ್ ಸಂಗೀತ, ಛಾಯಾಗ್ರಹಣ ನಾಗರಾಜಶೆಟ್ಟಿಮಳಗಿ ಛಾಯಾಗ್ರಹಣವಿದೆ.