ಮುಸ್ಲೀಮ ಸಮಾಜದ ಮೀಸಲಾತಿ ರದ್ದು: ಪಟ್ಟೇದಾರ ಖಂಡನೆ

ಚಿಂಚೋಳಿ,ಮಾ.26- ದೇಶದ ಎಲ್ಲಾ ಸಮಾಜಗಳಿಗೆ ಸಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಮೀಸಲಾತಿ ನೀಡಿರುವ ಸರ್ಕಾರವೇ ಮುಸ್ಲಿಂ ಸಮೂದಾಯದ ಶೇ. 4 ರಷ್ಟು ಇದ್ದ ಮೀಸಲಾತಿಯನ್ನು ರದ್ದುಪಡಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ತಾಲ್ಲೂಕಾ ಮುಸ್ಲಿಂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಸ್ತಾನ ಅಲಿ ಪಟ್ಟೇದಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯದವರು ಆರ್ಥಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಹಿಂದುಳಿದವರೆಂದು ವರದಿಗಳು ಹೇಳಿವೆ, ಹಿಗಾಗಿ ಈ ಸಮುದಾಯಕ್ಕೆ ಶೇ 4ಇದ್ದ ಮೀಸಲಾತಿಯಿಂದ ಶೇ. 7ಕ್ಕೆ ಹೆಚ್ಚಿಸುವಂತೆ ಸರ್ಕಾರಗಳಿಗೆ ಅನೇಕ ಮನವಿಗಳು ಸಲ್ಲಿಸಿದ್ದರೂ ಸರ್ಕಾರ ಮಾತ್ರ ಅಲ್ಪಸಂಖ್ಯಾತರ ಮೀಸಲಾತಿಯೇ ಕಸಿದುಕೊಂಡಿರುವುದು ನೋವಿನ ಸಂಗತಿಯಾಗಿದೆ.
ಕಳೆದ ನಾಲ್ಕು ವರ್ಷದಿಂದ ಬಿಜೆಪಿ ಪಕ್ಷದ ಸರ್ಕಾರವು ಮುಸ್ಲಿಂ ಸಮಾಜದವರನ್ನು ಕಡೆಗಣಿಸುತ್ತಾ ಬಂದು ಅನೇಕ ಕಷ್ಟಗಳು ನೀಡಿದೆ ಆದರೆ ನಾವು ಧ್ವನಿ ಎತ್ತಿಲ್ಲಾ ಆದರೆ ಏಕಾಏಕಿ 1994ರಿಂದ ಸಂವಿಧಾನ ಬದ್ದವಾಗಿ 4ಪ್ರತಿಶತಃ ಮೀಸಲಾತಿ ಪಡೆಯುತ್ತಿದ್ದ ಸಮಾಜಕ್ಕೆ ಮೀಸಲಾತಿ ರದ್ದು ಮಾಡಿದ್ದು ಅಕ್ಷರಶಃ ತಪ್ಪು, ಮುಸ್ಲಿಂ ಸಮೂದಾಯಕ್ಕೆ ಬಿಜೆಪಿ ಸರ್ಕಾರ ಅನೇಕ ಯೋಜನೆಗಳು, ಜಯಂತಿಗಳು ರದ್ದುಪಡಿಸಿದರು ನಾವು ವೀರೋಧ ಮಾಡಿಲ್ಲ ಆದರೆ ಮುಸ್ಲಿಂ ಸಮಾಜಕ್ಕೆ ಶೇ.4ಮೀಸಲಾತಿ ರದ್ದುಪಡಿಸಿ ಚುನಾವಣೆಯಲ್ಲಿ ಇತರರ ಸಮಾಜದ ಮತಗಳು ಪಡೆಯಲು ಚುನಾವಣೆ ಗಿಮಿಕ್ ಮಾಡಲಾಗುತ್ತಿದೆ ಎಂದರು.
ಪುರಸಭೆ ಸದಸ್ಯ ಅಬ್ದುಲ್ ಬಾಷೀದ್ ಮಾತನಾಡಿ ಮುಸ್ಲಿಂ ಸಮಾಜವು ಉದ್ಯೋಗದಲ್ಲಿ, ರಾಜಕೀಯದಲ್ಲಿ, ಶಿಕ್ಷಣದಲ್ಲಿ, ಯಾವ ಮೀಸಲಾತಿ ಸಿಗಬೇಕು, ಆದರೆ ಈ ಸಮಾಜವನ್ನು ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿ ಸೇರಿಸಲು ಮುಂದಾಗಿರುವುದು ಖಂಡನೀಯ, ಇಲ್ಲಿಯೂ ಮೀಸಲಾತಿ ನೀಡಿದ್ದೇವೆಂದು ಸುಳ್ಳು ಹೇಳುತ್ತಿದೆ.
ಬಿಜೆಪಿ ಸರ್ಕಾರ ಓಟಿನ ರಾಜಕಾರಣ ಮಾಡಿ ಜಾತಿ ಜಾತಿಗಳ ಮದ್ಯೆ ಜಗಳ ನಡೆಸಿ ಆರ್ಥಿಕವಾಗಿ,ಶೈಕ್ಷಣಿಕವಾಗಿ, ಉದ್ಯೋಗದಲ್ಲಿ, ರಾಜಕೀಯದಲ್ಲಿ ಸಮಾಜಕ್ಕೆ ತುಳಿಯುವ ಕೆಲಸ ಮಾಡುತ್ತಿದೆ.
ರಾಜ್ಯದ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿ ರಾಜ್ಯದ್ಯಂತ ಹೋರಾಟ ಮಾಡಲು ಸಿದ್ದರಾಗಿದ್ದೇವೆ ಹಾಗೂ ನ್ಯಾಯಾಲಯ ಮೊರೆ ಸಹ ಹೋಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸೈಯದ ಶಬ್ಬೀರ್, ಮಹೇಮೂದ ಪಟೇಲ, ಮಸೂದ್ ಸೌಧಾಗಾರ, ಖಲೀಲ್ Àಟೇಲ,ಮಹ್ಮುದ್ ಹಾದಿಸಾಬ,ಅನ್ವರ್ ಖತೀಬ್,ಹಫೀಜ್ ಅಬ್ದುಲ್ ಹಮೀದ್,ಮತೀನ್ ಸೌಧಾಗಾರ,ಹಸೇನ್ ಹಾಶಮಿ,ಮಹ್ಮುದ್ ಪಟೇಲ,ಎಸ್ಕೆ ಮೋಖ್ತಾರ,ಮೋಯೀನ್ ಮೋಮೀನ್, ಮುಜಾಮೀಲ್, ಶೇಖ್ ಫರೀದ್, ಅಸ್ಲಾಂ ಸೌಧಾಗಾರ, ಜೀಯಾಉರ್ ರಹೇಮಾನ್,ಮುಜ್ಜು,ಅನೇಕರಿದ್ದರು.