ಮುಸ್ಲೀಮರ ಪ್ರವರ್ಗ 2ಬಿ ರದ್ದು ಖಂಡಿಸಿ ಜೆಡಿಎಸ್ ಪ್ರತಿಭಟನೆ

ಚಿಂಚೋಳಿ,ಮಾ.29- ರಾಜ್ಯದ ಬಿಜೆಪಿ ಸರ್ಕಾರ ದಿನನಿತ್ಯ ಜಾತಿ ಜಾತಿಗಳ ಮಧ್ಯ ಸಂಘರ್ಷಗಳು ಸೃಷ್ಟಿಸುವ ಕೆಲಸದಲ್ಲಿ ತೊಡಗಿದೆ, ಪಂಚಮಸಾಲಿ, ಪರಿಶಿಷ್ಟ ಜಾತಿಯವರ ಹಾಗೂ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸುವ ನೆಪದಲ್ಲಿ ಮುಸ್ಲಿಂ ಸಮುದಾಯದವರಿಗೆ ನಿಗದಿಪಡಿಸಲಾಗಿದ್ದ 2ಬಿ ಪ್ರವರ್ಗದ ಶೇ. 4% ಮೀಸಲಾತಿ ಸಂಪೂರ್ಣವಾಗಿ ರದ್ದುಗೊಳಿಸಿರುವ ರಾಜ್ಯ ಸರ್ಕಾರ ಸಂವಿಧಾನ ವಿರೋಧಿ ದೋತಣೆಯನ್ನು ಖಂಡಿಸಿ ಚಿಂಚೋಳಿ ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ ಆರ್ ಯಾಕಾಪೂರ, ರವರ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಯಿತು.
ಪಟ್ಟಣದ ತಹಶಿಲ್ ಕಚೇರಿ ಎದರು ಪ್ರತಿಭಟನೆ ನಡೆಸಲಾಯಿತು, ಮುಸ್ಲಿಂರ ಮೀಸಲಾತಿಯ ಹಕ್ಕುನ್ನು ಸರ್ಕಾರ ಕಸಿದುಕೊಂಡಿದೆ ಇದು ಬಿಜೆಪಿಯ ಸಾಮಾಜಿಕ ನ್ಯಾಯವೇ? ಜೆಡಿಎಸ್ ಪಕ್ಷದ ವರಿಷ್ಠರಾದ ಹೆ. ಡಿ.ದೇವೇಗೌಡರು ಪ್ರಧಾನಮಂತ್ರಿ ಯಾಗಿದ್ದ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದ ಮುಸ್ಲಿಂ ಸಮುದಾಯದರನ್ನು ಸಮಾಜಿಕ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಹಾಗೂ ಅವರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಪ್ರವರ್ಗ 2ಬಿ ಯಲ್ಲಿ ಶೇ.4% ಪ್ರತಿಶತ ಮೀಸಲಾತಿ ಕಲ್ಪಿಸಿ ಕೊಟ್ಟಿದರ
ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ರವರ ಘೋಷವಾಕ್ಯ ಸಭ್ ಕಾ ಸಾಥ್ ಸಬ್ಕ ವೀಕಾಸ ಅನ್ನುವವರು ಘೋಷಣೆಯ ವಿರುದ್ದವಾಗಿದೆ. ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ ಎಂದು ಮತದಾರರು ಗಮನಿಸುತ್ತಿದ್ದಾರೆ.
ಈ ದೇಶದ ಎಲ್ಲಾ ಸಮುದಾಯದ ಜನತೆಗೆ ಸಮಾನ ಅವಕಾಶ ಕಲ್ಪಿಸುವ ಭಾರತ ಸಂವಿಧಾನದ ಆಶೇಯ ಮುಳುವಾಗುವ ಕಾಲ ಬಿಜೆಪಿ ತಂದೊಡಿತಿದೆ..ಹೀಗಾಗಿ ಸಮಾಜದಲ್ಲಿಯ ಪ್ರಜ್ಞಾವಂತರು ಅವರ ಈ ಧೋರಣೆ ಕಂಡಿಸುತ್ತಿದಾರೆ ಈಗ ಪ್ರವಾರ್ಗ 2ಬಿ ರಲ್ಲಿ ಇರುವ ಮುಸ್ಲಿಂ ಸಮುದಾಯವರ ಮೀಸಲಾತಿ 4% ಪ್ರತಿಶತ ರದ್ದುಪಡಿಸಿರುವುದನು ರಾಜ್ಯ ಸರ್ಕಾರ ಹಿಂಪಡೆದು ಈ ಮುಸ್ಲಿಂ ಸಮುದಾಯದವರಿಗೆ ಮುಂದುವರೆಸಬೇಕು ಅಲದಲದೇ ಇದೇ ಪ್ರವರ್ಗ 2ಬಿಯಲ್ಲಿನ ಮಿಸಲಾತಿಯನ್ನು ಶೇ 7% ಪ್ರತಿಶತಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಬೇಕು ಇಂತಹ ಗೊಂದಲಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಆಗ್ರಹಿಸಿದರು.
ಈ ಸಂಧರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ವಿಷ್ಣುಕಾಂತ ಮೂಲಗಿ, ರವಿಶಂಕರ್ ರೆಡ್ಡಿ, ರಾಹುಲ್ ಸಂಜೀವನ ಯಾಕಾಪೂರ,ಹಣಮಂತ ರೆಡ್ಡಿ,ಸೈಯದ್ ,ನಿಯಾಝ್ ಅಲಿ, ಉಲ್ಲಾಸ್ ಕುಮಾರ್, ಬಸವರಾಜ ರಾಠೋಡ್,ಪವನ್, ಯೂನಸ್,ಮಕ್ಟಂ, ಅಜಂ, ಅಮೀರ್ ಶೈಖ್,ಜಗನ್,ಮಲ್ಲಿಕಾರ್ಜುನ್ ಪೂಜಾರಿ,ರಾಘವೇಂದ್ರ, ಮೊಹಮ್ಮದ್ ಅಲಿ, ತಮ್ಮ ರೆಡಿ,ಖಾನ್,ರಮೇಶ್ ಚಿಂಚೋಳಿ, ರಮಚಂದ್ರ, ಮಂಜುನಾಥ್ ಜಮಾದಾರ್, ಪವನ್ ಯಾಳಗಿ,ಮಹೇಶ್ ಗಮ್ಮಿ,ಯಶ್ವಂತ್,ದಯಾನಂದ್,ಬಸವರಾಜ ಸಿರಸಿ,ರವಿ ಗಾರಂಪಳ್ಳಿ,ಅರುಣ್ ಅಣ್ವರ್,ಆಸಿಫ್,ವಿಜಯ ಕುಮಾರ್,ಜರಣು,ಅಂಜಪ್ಪ ಪೂಜಾರಿ,ಬಾಳಪ್ಪ,ಪ್ರಶಾಂತ್ ಕಂಟ್ಲೀ,ಮಲ್ಲಿಕಾರ್ಜುನ್ ಕುದರಿ,ಅಜೀಂ ಪಾಷಾ,ಅಕ್ರಂ ಪಾಟೀಲ್,ಶಬ್ಬೀರ್ ಅಲಿ,ನಾಸಿರಿದ್ದಿನ್, ಇಸ್ಮಾಯಿಲ್,ಚಾಂದ್ ಪಾಷಾ,ವೈಜನಾಥ್, ನೀಲಕಂಠ,ಬಸಯ್ಯ ಸ್ವಾಮಿ,ಅಕ್ಷಯ್,ಆನಂದ್,ಅನಿಲ್ ಪರೀಟ್. ಮತ್ತು ಅನೇಕ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.