ಮುದ್ದೇಬಿಹಾಳ :ಮಾ.28: ಮುಸ್ಲಿಂ ಸಮಾಜದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ,ಆರ್ಥಿಕವಾಗಿ ಮುಂದುವರೆಯಲು ಚಿನ್ನಪ್ಪ ರೆಡ್ಡಿ ಆಯೋಗ ಶೇಕಡಾ 4% ರಷ್ಟು ಮೀಸಲಾತಿಯನ್ನು ನೀಡಿ ನಮ್ಮ ಸಮುದಾಯದ ಬಲವರ್ದನೆಗೆ ಅನುಕೂಲ ಮಾಡಿತ್ತು. ಮತ್ತು ಸಾಚಾರ್ ವರದಿಯ ಪ್ರಕಾರ ನಮ್ಮಲ್ಲಿ ಇನ್ನೂ ಮುಸ್ಲಿಮ್ ಸಮುದಾಯವನ್ನು ಎಲ್ಲಾ ಜನಾಂಗಕ್ಕಿಂತ ತಳಮಟ್ಟದಲ್ಲಿದೆ ಎಂದು ಹೇಳಲಾಗಿದೆ, ಆದರೆ ರಾಜ್ಯ ಬಿಜೆಪಿ ಸರಕಾರ ಚುನಾವಣೆಯಲ್ಲಿನ ಮತಬ್ಯಾಂಕಗೋಸ್ಕರ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು 2ಬಿ ಮೀಸಲಾತಿಯನ್ನು ರದ್ದು ಮಾಡಿರುವದು ಅಂತ್ಯಂತ ಖಂಡನಿಯ ಎಂದು ಮುಸ್ಲಿಮ್ ಸಮಾಜದ ಮುಖಂಡ ಅಂಜುಮನ್ ಸಲಹಾ ಸಮಿತಿ ಸದಸ್ಯರಾದ ಎಚ್ ಆರ್ ಬಾಗವಾನ ರಾಜ್ಯ ಸರಕಾರ ನೀತಿಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದರಲ್ಲಿ ರವಿವಾರ ಬಾಗವಾನ ಅಲ್ಪಸಂಖ್ಯಾತರ ಕೋ ಆಪರೇಟಿವ್ ಬ್ಯಾಂಕನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಬಿಜೆಪಿ ಸರಕಾರದ ತನ್ನ ಚುನಾವಣೆಯ ಗಿಮಿಕಗಾಗಿ ಮುಸ್ಲಿಮ್ ಸಮುದಾಯವನ್ನು ತುಳಿಯುತ್ತಾ ಬಂದಿದೆ , ಕೂಡಲೇ ರದ್ದು ಮಾಡಿದ 2ಬಿ ಮೀಸಲಾತಿಯನ್ನು ಮರಳಿ ಸಮುದಾಯಕ್ಕೆ ನೀಡದೇ ಇದ್ದರೆ ರಾಜ್ಯಾದ್ಯಂತ ಉಘ್ರ ಹೋರಾಟವನ್ನು ಮಾಡಲಾಗುವದು ಎಂದು ಹೇಳಿದರು.
ನಂತರ ನ್ಯಾಯವಾದಿ ಎಂ ಎಸ್ ಹಳ್ಳಿ , ಎಚ್ ಬಿ ಸಾಲಿಮನಿ ಮಾತನಾಡಿ , ನಮ್ಮ ಸಮುದಾಯದ 2ಬಿ ಮೀಸಲಾತಿಯನ್ನು ಕಸಿದುಕೊಂಡು ಇನ್ನೀತರ ಜಾತಿಗಳಿಗೆ ನೀಡಿರುವದು ನೋಡಿದರೆ , ಒಬ್ಬರ ಅಗಲ್ಲಿನ ಅನ್ನವನ್ನು ಕಸಿದುಕೊಂಡು ಇನ್ನೋಬ್ಬರಿಗೆ ಉಣ್ಣಲು ನೀಡಿದಂತೆ ಇದೆ, ಸರಕಾರ ಮುಸ್ಲಿಮ್ ಸಮುದಾಯದ ಮೇಲೆನ ದ್ವೇಷವನ್ನು ಈಕ್ರಮ ಸಾರಿ ಹೇಳುತ್ತಿದೆ, 2ಬಿಯಲ್ಲಿಯೆ ಇದ್ದ ಇನ್ನೂ ಅನೇಕರನ್ನು ಬಿಟ್ಟು ಮುಸ್ಲಿಮ್ ರನ್ನೇ ಕೈಬಿಟ್ಟಿದ್ದುಖಂಡನಿಯ, ಸರಕಾರದ ಈ ನಿರ್ಧಾರಕ್ಕೆ ಕಾನೂನು ಮನ್ನಣೆ ಇಲ್ಲಾ, ಮರಳಿ ನಮ್ಮ ಸಮುದಾಯಕ್ಕೆ 2ಬಿ ಮೀಸಲಾತಿಯನ್ನು ನೀಡದಎ ಹೋದರೆ ನಾವು ಕಾನೂನು ಸಮರಕ್ಕೆ ಸಿದ್ದರಿದ್ದೇವೆ, ಕಾನೂನುಡಿಯಲ್ಲಿ ಸರಕಾರದ ಈ ನೀತಿ ಬಿದ್ದು ಹೋಗಲಿದೆ ಎಂದರು.
ಪುರಸಭೆ ಸದ್ಯಸ್ಯ ಮಹಿಬೂಬ ಗೋಳಸಂಗಿ, ಸದ್ದಾಂ ಕುಂಟೋಜಿ ಮಾತನಾಡಿ ಮುಸ್ಲಮ್ ಸಮುದಾಯದಲ್ಲಿ ಆರ್ಥಿಕವಾಗಿ ತೀರಾ ಹಿಂದುಳಿದವರು ಇದ್ದಾರೆ ಸಾಚಾರ ವರದಿಯನ್ನು ಸರಕಾರ ಗಮನಿಸಿದರೆ ನಮ್ಮ ಸಮುದಾಯಕ್ಕೆ ಇನ್ನೂ ಹೆಚ್ಚಿನ ಮೀಸಲಾತಿಯನ್ನು ನೀಡಬೇಕಿತ್ತು, ಆದರೆ ಇದ್ದ 4% ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮ್ ಸಮುದಾಯವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ,ಸಾಮಾಜಿಕವಾಗಿ ದುರ್ಬಲ ಮಾಡಲು ಹೋರಟಿದೆ ಈ ನೀತಿಯನ್ನು ಸಮಾಜವದರು ರಾಜ್ಯಾದ್ಯಂತ ಕೂಡಿಕೊಂಡು ಹೋರಾಟ ಮಾಡಲು ಸಜ್ಜಾಗಬೇಕು ಎಂದರು.
ಈ ಸಂಧರ್ಬದಲ್ಲಿ ಮುಖಂಡರಾದ ಹುಸೇನ್ ಮುಲ್ಲಾ, ಎಲ್ ಎನ್ ನಾಯ್ಕೋಡಿ, ಎಂ ಎಂ ಚೌದ್ರಿ,ರಿಯಾಜ ಡವಳಗಿ, ಡಿ ಡಿ ಬಾಗವಾನ, ಸದ್ದಾಂ ನದಾಪ್,ಜಬ್ಬಾರ ಗೋಲಂದಾಜ, ಮಲಿಕಸಾಬ್ ನದಾಪ್, ಸಮೀರ್ ಹುಣಸಗಿ, ಹಬಿಬವುಲ್ಲಾ ನಾಲತವಾಡ,ಬಾಬು ದಿಡ್ಡಿಮನಿ, ಸಮಾಜದ ಮುಖಂಡರು ಇನ್ನೀತರರು ಇದ್ದರು.
ಪಟ್ಟಣದರಲ್ಲಿ ರವಿವಾರ ಬಾಗವಾನ ಅಲ್ಪಸಂಖ್ಯಾತರ ಕೋ ಆಪರೇಟಿವ್ ಬ್ಯಾಂಕನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕರ್ನಾಟಕ ಮುಸ್ಲಮ್ ಯೂನಿಟಿ ರಾಜ್ಯ ಕಾರ್ಯಕಾರಣಿ ಸದಸ್ಯ ಎಲ್ ಎನ್ ನಾಯ್ಕೋಡಿ ಮಾತನಾಡಿ ಸದ್ಯ ರಮಜಾನ್ ಉಪವಾಸ ಪ್ರಾರಂಭವಾಗಿದ್ದು, ರಾಜಕಾರಣಿಗಳು ನಮ್ಮ ಸಮಸ್ಯೆಗೆ ದ್ವನಿಯಾಗದೆ ಕೇವಲ ಮತಕ್ಕಾಗಿ ನಮ್ಮ ಸಮುದಾಯವನ್ನು ಬಳಸಿಕೋಳ್ಳುವದಕ್ಕೆ ಇಪ್ತಿಯಾರ್ ಕೂಟವನ್ನು ಆಯೋಜನೆ ಮಾಡಲಾಗುತ್ತಿದ್ದು, ನಾವು ಖಂಡಿಸಬೇಕಿದೆ, ನಮ್ಮ ಸಂವಿದಾನದ ಹಕ್ಕನ್ನು ಕಸಿದುಕೊಂಡಿರುವ ಸರಕಾರ ನೀತಿಯನ್ನು ಖಂಡಿಸದ ನಾಯಕ ತಮ್ಮ ಹಿತಕ್ಕಾಗಿ ಇಪ್ತಿಯಾರ ಕೂಟ ಮಾಡುವದು ನಾವು ಒಪ್ಪುವದು ಇಲ್ಲಾ, ಆದರಿಂದ ನಮ್ಮ ಸಮುದಾಯದ ಮುಖಂಡರು, ಯುವಕರು ಬಾಗವಹಿಸದಂತೆ ಕರೆ ನೀಡಿದ್ದಾರೆ,