
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.25: ರಾಜ್ಯದ 224 ಕ್ಷೇತ್ರದ ಪೈಕಿ ಮುಸ್ಲಿಂರಿಗೆ ಒಬ್ಬರಿಗೂ ಟಿಕೆಟ್ ನೀಡದಿರುವುದನ್ನು ಕೇಂದ್ರ ಸಚಿವ ಕೃಷ್ಣನ್ ಪಾಲ್ ಗುರ್ಜರ್ ಸಮರ್ಥನೆ ಮಾಡಿಕೊಂಡು ಇದು ಪಕ್ಷದ ನಿರ್ಣಯ ಎಂದಿದ್ದಾರೆ.
ಅವರು ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಿದ್ದರು. ಜಾತಿ ಸಮೀಕರಣದ ಮೂಲಕ ಎಲ್ಲಾ ಜಾತಿ ಜನಾಂಗದ ಜನರಿಗೆ ಬಿಜೆಪಿ ನ್ಯಾಯ ನೀಡಿದೆಂದರು.
2014ರಲ್ಲಿ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ದೇಶದಲ್ಲಿ ಆಡಳಿತಕ್ಕೆ ಬಂದ ಬಳಿಕ ದೇಶದ ಬಹುತೇಕ ಭಾಗ ಸಾಕಷ್ಟು ಅಭಿವೃದ್ಧಿಯಾಗಿದೆಂದರು.
ಸಿದ್ದು ಸರ್ಕಾರ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕ ದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಬೊಮ್ಮಾಯಿ ಮತ್ತು ಯಡಿಯೂರಪ್ಪ ಅವರ ಕಾಲದಲ್ಲಿ ಕರ್ನಾಟಕ ರಾಜ್ಯ ಅಭಿವೃದ್ಧಿಯತ್ತ ಸಾಗಿದೆಂದರು.
ಪಿಎಫ್ಐ ನಿಷೇಧ, ಗೋಹತ್ಯೆ ನಿಷೇಧ ಕಾನೂನು ತರಲಾಗಿದೆ. ಉಚಿತ ಯೋಜನೆ ನೀಡ್ತೇನೆ ಎನ್ನುವ ಕಾಂಗ್ರೆಸ್ ರಾಜಸ್ಥಾನದಲ್ಲಿ, ಹಿಮಾಚಲ ಪ್ರದೇಶದಲ್ಲಿ ಯಾವುದೇ ಯೋಜನೆ ಜಾರಿಗೆ ತಂದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ. ನಡೆಸಿ ಚುನಾವಣೆ ಹಿನ್ನೆಲೆ ಉಚಿತ ಯೋಜನೆ ಘೋಷಣೆ ಮಾಡ್ತಾರೆ ಆದ್ರೇ ಹಣ ಎಲ್ಲಿಂದ ತರುತ್ತಾರೆಂದರು.
ಕಾಂಗ್ರೆಸ್ ಗೆ ಎಟಿಎಂ ಬೇಕು. ಎಂಪಿ ಚುನಾವಣೆಗೆ ಹಣ ಬೇಕೆಂದು ಕರ್ನಾಟಕದಲ್ಲಿ ಕಾಂಗ್ರೆಸ್ ತರಲು ಮುಂದಾಗ್ತಿದ್ದಾರೆ. ಭ್ರಷ್ಟಾಚಾರ ದಲ್ಲಿ ಮುಳುಗಿ ಜೈಲಿಗೆ ಹೋಗಿ ಬಂದಿರೋ ನಾಯಕರೇ ಕಾಂಗ್ರೆಸ್ ನಲ್ಲಿದ್ದಾರೆಂದರು.
ಕೇಂದ್ರದ ಮಂತ್ರಿಯ ಮೇಲೆ ಭ್ರಷ್ಟಾಚಾರದ ಆರೋಪವಿಲ್ಲ. ಆಧಾರ ರಹಿತ ಆರೋಪ ಉತ್ತರಿಸಲಾಗಲ್ಲವೆಂದರು.
ರಾಹುಲ್ ಗಾಂಧಿ ಆಧಾರ ರಹಿತ ಆರೋಪ ಮಾಡ್ತಾರೆ ಸಾಕ್ಷಿ ಇಲ್ಲದ ಪ್ರಶ್ನೆಗೆ ಹೇಗೆ ಉತ್ತರ ಕೊಡೋದು. ಕಾಂಗ್ರೆಸ್ ಅವಧಿಯಲ್ಲಿ ದಿನಕ್ಕೊಬ್ಬ ಸಂಸದರು ಕೇಂದ್ರ ಸಚಿವರು ಜೈಲಿಗೆ ಹೋಗುತ್ತಿದ್ದರೆಂದರು.
ಮೀಸಲಾತಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ನ್ಯಾಯಲಯದ ಮೇಲೆ ವಿಶ್ವಾಸವಿದೆ..
ಸದ್ಯ ತಡೆಯಜ್ಞೆ ನೀಡಿದೆ. ಆದ್ರೇ ಇದು ತೀರ್ಪು ಅಲ್ಲ. ಸುಪ್ರೀಂ ಕೋರ್ಟ್ ನ ನಿರ್ಧಾರ ಬಂದಾಗ ಎಲ್ಲರೂ ಒಪ್ಪುತ್ತಾರೆಂದರು.
ನಾವು ಕಾಂಗ್ರೆಸ್ ನವರಂತೆ ಅಲ್ಲ ನ್ಯಾಯಲಯದ ನಿರ್ಧಾರ ಒಪ್ಪುತ್ತೇವೆ. ಅವರಂತೆ ನಾವು ನ್ಯಾಯಂಗದ ಮೇಲೆ ಆರೋಪ ಮಾಡಲ್ಲ. ಸಂವಿಧಾನಿಕ ಸಂಸ್ಥೆಗಳ ಮೇಲೆ ನಮಗೆ ನಂಬಿಕೆ ಇದೆ ಎಂದರು