ಮುಸ್ಲಿಮರಿಗೆ ದೇಶದ ಆರ್ಥಿಕತೆಯಲ್ಲಿ ವಿಶೇಷ ಹಕ್ಕು:ಸಿಎಂ ಹೇಳಿಕೆಗೆ ಈಶ್ವರ್ ಸಿಂಗ್ ಠಾಕೂರ್ ಖಂಡನೆ

ಬೀದರ,ಡಿ.9:ದೇಶದ ಆರ್ಥಿಕತೆಯಲ್ಲಿ ಮುಸ್ಲಿಮರಿಗೆ ವಿಶೇಷ ಸ್ಥಾನ ಇದೆ ಎಂದು ಸಿಎಂ ಹೇಳಿಕೆಯಲ್ಲಿ ದೇಶದ ವಿಭಜನೆಯ ಹುನ್ನಾರ ಅಡಗಿದೆ ಎಂದು ಬಿಜೆಪಿ ಮುಖಂಡ ಈಶ್ವರ್ ಸಿಂಗ್ ಠಾಕೂರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಹಿಂದೆ 1947ರಲ್ಲಿ ಭಾರತದ ಸ್ವಾತಂತ್ರ್ಯದ ಸಮಯದಿಂದ ಹಿಡಿದು ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತಾ ಬಂದಿದೆ. ಡಾ.ಬಿ ಆರ್ ಅಂಬೇಡ್ಕರ್ ಅವರ ವಿರೋಧದ ನಡುವೆಯೂ ಅಖಂಡವಾಗಿದ್ದ ಭಾರತವನ್ನು ಮುಸ್ಲಿಮರ ಓಲೈಕೆಗೆ ದೇಶ ವಿಭಜನೆ ಮಾಡಿದ ಅಪಕೀರ್ತಿ ಕಾಂಗ್ರೆಸ್ ಗೆ ಸಲ್ಲುತ್ತದೆ.ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಮುಸ್ಲಿಂಲೀಗ್ ಸದಸ್ಯನಂತೆ ವರ್ತಿಸುವುದು ನೋಡಿದರೆ ಪ್ರಜಾಪ್ರಭುತ್ವದ ದೇಶದ ಪ್ರಜೆಗಳಾದ ನಮ್ಮ ರಕ್ತ ಕುದಿಯುತ್ತದೆ .
ಮುಸ್ಲಿಂ ಮೂಲಭೂತವಾದಿ ಶಕ್ತಿಗಳು ಘೋಷಿಸಿರುವ 2047 ರ ಭಾರತ ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಗುರಿಗೆ ಕರ್ನಾಟಕದಲ್ಲಿ ಸಿದ್ರಾಮಯ್ಯ ಸರ್ಕಾರ ಕುಮ್ಮಕ್ಕು ನೀಡುತ್ತಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದ್ದಾರೆ.ಮುಸ್ಲಿಮರ ಹಕ್ಕಿಗೆ ಇಲ್ಲಿಯವರೆಗೆ ಯಾವುದೇ ಕೊರತೆಯಾಗಿಲ್ಲ. ಸ್ವಾತಂತ್ರ್ಯದಿಂದ ಇಲ್ಲಿಯವರೆಗೂ ಪ್ರಥಮ ದರ್ಜೆಯ ಪ್ರಜೆಗಳಾಗಿಬಾಳುತ್ತಾ ಇದ್ದಾರೆ. ಇತರೆ ಇಸ್ಲಾಮಿಕ್ ರಾಷ್ಟ್ರಗಳಿಗಿಂತ ನಮ್ಮ ಭಾರತದಲ್ಲೇ ಬಹಳ ಅನುಕೂಲಕರ ವಾತಾವರಣದಲ್ಲಿ ಬದುಕುತ್ತಾ ಇದ್ದಾರೆ.ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಸಿಗುವ ವಿಶೇಷ ಸ್ಥಾನ ಮತ್ತೆ ಬೇರೆ ಯಾವ ದೇಶದಲ್ಲೂ ಸಿಗುವುದಿಲ್ಲ . ಕಾಂಗ್ರೆಸ್‍ನ ತುಷ್ಟೀಕರಣದ ನಿಲುವನ್ನು ಆರಂಭದಲ್ಲಿಯೇ ಚಿವುಟಿ ಹಾಕಬೇಕು ಮತ್ತು ದೇಶದ ಅಖಂಡತೆ ರಕ್ಷಿಸಲು ಸಮಾಜ ಸಂಘಟಿರಾಗಬೇಕು ಎಂದು ಕರೆ ನೀಡಿದರು.