ಮುಸ್ಲಿಂ 2 ಬಿ ಮೀಸಲಾತಿ ರದ್ದು ನಿರ್ಧಾರ ಕೂಡಲೇ ಹಿಂಪಡೆಯಬೇಕು :ಇಲ್ಲದಿದ್ದರೆ ಕಾನೂನು ಹೋರಾಟ

ಆಲಮೇಲ:ಮಾ.26:ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿಯೇ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿಯಲ್ಲಿ ಮುಸ್ಲಿಮ್ ಸಮುದಾಯಕ್ಕೆ ಇದ್ದ ಶೇ.4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಮುಸ್ಲಿಮ್ ರನ್ನು ಕಡೆಗಣಿಸುವುದರ ಜೊತೆಗೆ ಜಾತಿಯ ರಾಜಕಾರಣ ಮಾಡುವುದರ ಜೊತೆಗೆ ರಾಜ್ಯ ಸರ್ಕಾರ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ. ಸದ್ಯ ಇದ್ದಂತಹ ಶೇ.4ರಷ್ಟು ಮೀಸಲಾತಿಯನ್ನು ಇಡಬ್ಲ್ಯೂಎಸ್ ಮೀಸಲಾತಿಯಲ್ಲಿ ಮುಸ್ಲಿಮರನ್ನು ಸೇರ್ಪಡೆ ಮಾಡುವ ನಿರ್ಧಾರ ಸರಿ ಇಲ್ಲಾ. ಎಂದು ಆಲಮೇಲ ಅಂಜುಮನ್ ಎ ಇಸ್ಲಾಮ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ರಾಜಹ್ಮದ ಬೆಣ್ಣೇಶಿರೂರ ಹೇಳಿದರು.

ಪಟ್ಟಣದ ಅಂಜುಮನ್ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಭಾರತ ಸ್ವತಂತ್ರವಾದಾಗಿನಿಂದ ಇಲ್ಲಿಯವರೆಗೆ ಸಂವಿಧಾನದಲ್ಲಿ ಮುಸ್ಲಿಮ್ ರಿಗೆ ಕಲ್ಪಿಸಿದ ಶೇ.4ರಷ್ಟೇ ಮೀಸಲಾತಿಯೇ ನಮ್ಮಗೆ ಸಾಕು.ಇದಂಕ್ಕಿಂತ ಹೆಚ್ಚಿನ ಮೀಸಲಾತಿ ನಮ್ಮಗೆ ಅವಶಕತೆ ಇಲ್ಲಾ. ಒಂದು ವೇಳೆ ಮುಸ್ಲಿಮ್ 2 ಬಿ ಮೀಸಲಾತಿ ರದ್ದುಪಡಿಸಿದ ರಾಜ್ಯ ಸರ್ಕಾರದ ನಿರ್ಧಾರ ಕೂಡಲೇ ಹಿಂಪಡೆಯಬೇಕು.ಹಾಗೂ ಶೇ.4ರಷ್ಟೇ ಮೀಸಲಾತಿ ಮುಂದುವರೆಸಬೇಕು ಇಲ್ಲದಿದ್ದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನಿಡಿದರು.

ಈ ಸಂದರ್ಭದಲ್ಲಿ ಪ್ರಗತಿ ಪರ ರೈತ ಬಾಬು ಕೋತಂಬರಿ,ಪಪಂ ಮಾಜಿ ಸದಸ್ಯ ಮುನ್ನಾ ಚೌಧರಿ, ಕಾಶೀಮ ಸಾಲೋಟಗಿ,ಬಶೀರ ತಾಂಬೋಳ್ಳಿ,ಮಹಿಬೂಬ ಸಿಕಲಗಾರ.ಅಮೀನ ಬೇಪಾರಿ ಹಾಗೂ ಇತ್ತರರು ಇದ್ದರು.