ಮುಸ್ಲಿಂ ಸಮುದಾಯದ ಶ್ರೆಯೋಭಿ ವೃದ್ದಿಗೆ  ಬದ್ದ

ಸಂಜೆವಾಣಿ ವಾರ್ತೆ

ಜಗಳೂರು.ಜೂ.೩೦:- ಕ್ಷೇತ್ರದ ಮುಸ್ಲಿಂ ಸಮುದಾ ಯದ ಶ್ರೆಯೋಭಿವೃದ್ದಿಗೆ ಬದ್ದನಾಗಿರುವೆ ಎಂದು ಶಾಸಕ ಬಿ.ದೇ ವೇಂದ್ರಪ್ಪ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಈದ್ಗಾ ಬಳಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದ ಅಂಗವಾಗಿ ನಡೆಸಿದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ್ದು.ನಾನು ಶಾಸಕನಾಗಿ ಆಯ್ಕೆಯಾಗಿರುವೆ.ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಅಧಿವೇಶನದ ನಂತರ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮ್ಮೀರ್ ಅಹ ಮ್ಮದ್ ಬಳಿ ಚರ್ಚಿಸಿ ವಿಶೇಷ ಅನುದಾನ ತಂದು ಹಂತ ಹಂತ ವಾಗಿ ಮಸೀದಿಗಳ ಕಟ್ಟಡ ಅಭಿವೃದ್ದಿ ಸೇರಿದಂತೆ ಕಾಲೋನಿ ಗಳಲ್ಲಿ ಸಿಸಿ ರಸ್ತೆ ಭವನಗಳ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.ಶೀಘ್ರದಲ್ಲಿ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಮಾ ಲೋಚನೆ ಸಭೆ ನಡೆಸಿ ಕುಂದು ಕೊರತೆಗಳನ್ನು ಆಲಿಸುವೆ.ಅಲ್ಲದೆ ಅಲ್ಪ ಸಂಖ್ಯಾತರ ನಾಯಕರಾಗಿರುವ ಸಚಿವ ಜಮ್ಮೀರ್ ಅಹ ಮ್ಮದ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆಯ ಸಂಕೇತ ವಾಗಿ ಹಬ್ಬಗಳನ್ನು ಸೌರ್ಹದಯುತವಾಗಿ ಆಚರಿಸೋಣ.ತ್ಯಾಗ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಇಂದು ಸಾಮ ರಸ್ಯತೆಯಿಂದ ಮುಸ್ಲಿಂ ಬಾಂಧವರು ಆಚರಿಸುತ್ತಿರುವುದು ಶ್ಲಾಘ ನೀಯ ಪ್ರಸಕ್ತಸಾಲಿನಲ್ಲಿ ಉತ್ತಮ ಮಳೆ ಬೆಳೆಯಾಗಿ ಸಮೃದ್ದಿ ಜೀವನ ಸಾಗಿಸಬೇಕು ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ,ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪೆಟ್ರೋಲ್ ಬಂಕ್ ಮಾಲೀಕರಾದ ಅಕ್ಬರ್ ಸಾಬ್.ಪ.ಪಂ‌ ಸದಸ್ಯರಾದ ಶಕೀಲ್ ಅಹಮ್ಮದ್,ಲುಕ್ಮಾನ್ ಖಾನ್,ಮುಖಂಡರಾದ ಇಕ್ಬಾಲ್ ಖಾನ್, ಇಮಾಂ ಅಲಿ,ಅನ್ವರ್ ಅಲಿ,ಮೌಲನಾ,ಖಲಂದರ್, ಪೇಂಟರ್ ಖಲೀಲ್ ಸಾಬ್.ಅಹ ಮ್ಮದ್, ಮಹಮ್ಮದ್ ಗೌಸ್ ,ಪರ್ವೀಜ್, ಸೇರಿದಂತೆ ನೂರಾರು ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.