ಮುಸ್ಲಿಂ ಸಮುದಾಯದ ಶಾಸಕರಿಗೆ ಉನ್ನತ ಸ್ಥಾನ ನೀಡಿ

ಬಸವನಬಾಗೇವಾಡಿ:ಮೇ.19: ಮುಸ್ಲಿಂ ಸಮುದಾಯದ ಶಾಸಕರಿಗೆ ಉಪ ಮುಖ್ಯಮಂತ್ರಿ ಸ್ಥಾನದಂತಹ ಉನ್ನತ ಸ್ಥಾನ ನೀಡಬೇಕು ಎಂದು ಜಾಮೀಯಾ ಮಸೀದ ಚೇರಮನ್ ಶಬ್ಬಿರ ಅಹ್ಮದ ನದಾಫ ಹೇಳಿದರು.

ಪಟ್ಟಣದ ನಾಗೂರ ರಸ್ತೆಯಲ್ಲಿರುವ ಶಾದಿಮಹಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸುಮಾರು 70 ರ್ವಗಳಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನ ಬೆಂಬಿಸುತ್ತ ಬಂದಿದದೆ, ಕಾಂಗ್ರಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಸಾಧಿಸುವಲ್ಲಿ ಮುಸ್ಲಿಂ ಸಮುದಾಯದ ಕೊಡುಗೆ ಅಪಾರವಾಗಿದೆ, ಇಲ್ಲಿಯ ವರೆಗೆ ಸಮುದಾಯದ ಶಾಸಕರಿಗೆ ಯಾವುದೇ ಉನ್ನತ ಹುದ್ದೆ ನೀಡಿರುವುದಿಲ್ಲ, 2023ರ ವಿಧಾನ ಸಭೆ ಚುನವಾಣೆಯಲ್ಲಿ ನಮ್ಮ ಸಮುದಾಯದ ಒಂಬತ್ತು ಜನ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆ ಆಗಿದ್ದಾರೆ ಮುಂಭಾರುವ ಲೋಕಸಭಾ ಚುನಾವನೆಯ ಹಿತ ದೃಷ್ಟಿಯಿಂದ ಯಾರಾದರೂ ಒಬ್ಬ ಮುಸ್ಲಿಂ ಸಮುದಾಯದ ಶಾಸಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡ ರಮಜಾನ್ ಹೆಬ್ಬಾಳ ಮಾತನಾಡಿ ಬಸವನಬಾಗೇವಾಡಿ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಅವರು ರ್ಭರಿ ಬಹುಮತದೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿರುವ ಹಿನಲೆಯಲ್ಲಿ ಶಿವಾನಂದ ಪಾಟೀಲ ಅವರಿಗೂ ಸಚಿವ ಸ್ಥಾನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಕಮ¯ಸಾ ಕೊರಬು, ಚಾಂದಪಾಷಾ ಕೊರಬು, ಎಚ್,ಆರ್ ಬಾಗವಾನ, ಬಂದೇನಮಾಜ ನಮದವಾಡಗಿ ಬುಡ್ಡೆಸಾಬ ಹುಬ್ಬಳ್ಳಿ, ಮಹ್ಮದಸಾ ಹೊಕ್ರಾಣಿ, ಅಬ್ದುಲ್ ರಜಾಕ ಭಾಗವಾನ, ಹುಚ್ಚೆಸಾಬ ಚಳ್ಲಿಗಿಡದ, ದಸ್ತಗೀರ ವಜ್ಜಲ, ಮೋಸಿನ ಬೊಮ್ಮನ್ನಳ್ಳಿ, ಇಬ್ರಾಯಿಂಸಾಬ ಬೊಮ್ಮನ್ನಳ್ಳಿ, ಸೇರಿದಂತೆ ಮುಂತಾದವರು ಇದ್ದರು.