ಮುಸ್ಲಿಂ ಸಮುದಾಯದ ವ್ಯಕ್ತಿಯ ಅಂತ್ಯಸಂಸ್ಕಾರ

ಹೊನ್ನಾಳಿ.ಜೂ.೩ : ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತೋಮ್ಮೆ ಅಂಬ್ಯುಲೆನ್ಸ್ ಚಾಲಕರಾಗಿದ್ದಾರೆ. ಕೊರೊನಾ ಸೋಂಕಿನಿಂದ ಮೃತ ಪಟ್ಟ ಮುಸ್ಲಿಂ ಸಮುದಾಯದ 34 ವರ್ಷದ ಯುವಕನ ಮೃತ ದೇಹವೊತ್ತ ಅಂಬ್ಯುಲೆನ್ಸ ಅನ್ನು ಹೊನ್ನಾಳಿ ತಾಲೂಕು ಆಸ್ಪತ್ರೆಯಿಂದ ನ್ಯಾಮತಿಯ ಖಬರಸ್ಥಾನದವರೆಗೆ ಚಾಲನೆ ಮಾಡಿಕೊಂಡು ಹೋಗಿ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರಿಸಿ, ಸಾಂತ್ವಾನ ಹೇಳಿದರು.ಈ ಸಂದರ್ಭ ಮಾತನಾಡಿದ ಶಾಸಕರು ಕೊರೊನಾ ಎಂಬ ಹೆಮ್ಮಾರಿಯನ್ನು ಯಾರೂ ಕೂಡ ಬಯಸಿದ್ದಲ್ಲಾ, ಆದರೇ ಮಹಾಮಾರಿಗೆ ಇದೀಗ ಮನೆಯ ಆಧಾರಸ್ಥಂಬದಂತಿದ್ದ ಯುವಕ ಬಲಿಯಾಗಿದ್ದು ನೋವುಂಟು ಮಾಡಿದ್ದು ಕುಟುಂಬಸ್ಥರಿಗೆ ದುಖಃ ಬರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು. ನನಗೆ ಅಲ್ಲಾ,ಈಶ್ವರ ಎಲ್ಲಾ ಒಂದೇ ನಾನು ಅವಳಿ ತಾಲೂಕಿನ ಕಾವಲುಗಾರ, ಅವಳಿ ತಾಲೂಕಿನ ಜನರನ್ನು ಕಾಯುವುದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.ಮುಸ್ಲಿಂ ಬಾಂದವರಿಂದ ಅಭಿನಂದನೆ : ಕೊರೊನಾ ಸೋಂಕಿಗೆ ಬಲಿಯಾದ ಮುಸ್ಲಿಂ ಯುವಕನ ಮೃತ ದೇಹವನ್ನು ತಮ್ಮ ತಂದೆತಾಯಿ ಸ್ಮರಣಾರ್ಥ ನೀಡಿದ ಅಂಬ್ಯುಲೆನ್ಸ್ ನಲ್ಲಿ ಸ್ವತಃ ಶಾಸಕರೆ ಚಾಲನೆ ಮಾಡಿಕೊಂಡು ಹೋಗಿ, ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರಿಸಿದ್ದಕ್ಕೆ ಮುಸ್ಲಿಂ ಬಾಂದವರು ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಂದ್ರ ನಾಯ್ಕ, ತಾಂಡಾಭಿವೃದ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ ಸೇರಿದಂತೆ ಮತ್ತೀತರರಿದ್ದರು.