ಮುಸ್ಲಿಂ ಸಮುದಾಯದ ಬಡಮಕ್ಕಳ ಶಿಕ್ಷಣಕ್ಕೆ ಟ್ರಸ್ಟ್ ನೆರವಾಗಲಿ

ಜಗಳೂರು.ಜು.೧೪:ಮುಸ್ಲಿಂ ಸಮುದಾಯದ ಬಡ ಕೂಲಿರ್ಮಿಕರ ಶಿಕ್ಷಣಕ್ಕೆ ಟ್ರಸ್ಟ್ ನೆರವಾಗಬೇಕು ನಾನು ವೈಯಕ್ತಿಕವಾಗಿ ಸದಾ ಬೆಂಬಲವಾಗಿರುವೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಅಶ್ವತ್ಥ ಬಡಾವಣೆಯಲ್ಲಿ  ಇಷಾನ್ ಕರ್ನಾಟಕ ಸಂಘದಿಂದ ಹಮ್ಮಿಕೊಂಡಿದ್ದ ಮಾಝಿನ್ ಹೆರಿಟೇಜ್ ದಾರುಲ್ ಉಲೂಂ ಇಹ್ಸಾನಿಯ್ಯಾ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನೂತನವಾಗಿ ಆರಂಭವಾಗಿರುವ ಸಂಸ್ಥೆ ಬರದನಾಡಿನ‌ ಮಕ್ಕಳ  ಧಾರ್ಮಿಕ ಶಿಕ್ಷಣ ಭವಿಷ್ಯ ರೂಪಿಸಬೇಕು.ಸಮಾಜದಲ್ಲಿ ಆಧ್ಯಾತ್ಮೀಕತೆಯ ಜೊತೆಗೆ ಭಾವೈಕ್ಯತೆ ಸಂಕೇತವಾಗಿ ಧಾರ್ಮಿಕ ಸಂಸ್ಥೆಗಳು ಪ್ರತೀಕವಾಗಬೇಕು ಎಂದು ಹೇಳಿದರು.
ವಿಧಾನ ಸಭಾ ಕ್ಷೇತ್ರದಲ್ಲಿ ಧರ್ಮಾತೀತ,ಜಾತ್ಯಾತೀತ ವಾಗಿ ಮಕ್ಕಳ ಶಿಕ್ಷಣಕ್ಕೆ ಪ್ರೊತ್ಸಾಹಿಸುತ್ತೇನೆ.ಅದಲ್ಲದೆ ಕ್ರೀಡಾ ಪ್ರತಿಭೆಗಳಿಗೆ ರಾಜ್ಯಮಟ್ಟದ ಕ್ರೀಡೆಗಳ ವೇದಿಕೆ ಕಲ್ಪಿಸುವೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭರವಸೆ ನೀಡಿದರು.ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಎನ್ ಕೆ.ಎಂ.ಶಾಫಿ ಸ ಅದಿ ಮಾತನಾಡಿ,ಬರದನಾಡಿನಲ್ಲಿ ಸುನ್ನಿ ಮಕ್ಕಳ ಮದರಸ ಶಿಕ್ಷಣದ ಕನಸ್ಸು ನನಸಾಗಿಸಲು ನೂತನ ಕಟ್ಟಡ ನಿರ್ಮಾಣವಾಗಿರುವುದು ಸಂತಸ ತಂದಿದೆ ದಶಕಗಳ ಹಿಂದೆ  ಎಸ್ ಎಸ್ ಎಫ್ ಕಾರ್ಯಕರ್ತರಿಗೆ ಸಾಕಷ್ಟು ಸ್ಥಳಿಯವಾಗಿ ಸಂಘಟನೆ‌ ಉದ್ದೇಶದ ಮಾಹಿತಿ ಕೊರತೆಯಿಂದ ವಿರೋಧ ವ್ಯಕ್ತವಾಗಿ ಪ್ರಕರಣ ಗಳು ದಾಖಲಾಗಿದ್ದವು.ನಾವು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ ಪರಿಣಾಮ ಸಂಘಟನೆ ಬಲವರ್ಧನೆ ಗೊಂಡು ಸಂಸ್ಥೆ ಆರಂಭವಾಗಿದೆ ಎಂದರು.
ಕಟ್ಟಡದ ಉದ್ಘಾಟನೆ ನೆರವೇರಿಸಿದ ಡಾ.ಮಹಮ್ಮದ್ ಫಾಝಿಲ್,ಕೆಸಿಎಫ್ ಸಂಘಟನೆಯ ನಿರೀಕ್ಷೆಯಂತೆ ರಾಜ್ಯದ ಕೆಲವೆಡೆ ಲಕ್ಷಾಂತರ ಮೌಲ್ಯದ ಜಮೀನುಗಳನ್ನು ಯಾರೊಬ್ಬರೂ ಉಚಿತವಾಗಿ ನೀಡಲು ಸಾಧ್ಯವಿಲ್ಲ.ಮುಸ್ಲಿಂರು ಧಾರ್ಮಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದು. ದೀನ್ ಕೆ ಬಾರೆಮೆ ಶ್ರಮದಲ್ಲಿ ಒಂದು ಪಾಲು ಸಮುದಾಯದ ಮಕ್ಕಳ ಧಾರ್ಮಿಕ ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಕರೆ ನೀಡಿದರು.ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೆವೇಂದ್ರಪ್ಪ ಮಾತನಾಡಿ,ಶಿಕ್ಷಣ ಮತ್ತು ಧರ್ಮ ಮನುಷ್ಯನಿಗೆ ಸಂಸ್ಕಾರಗಳನ್ನು ಪಡೆಯಲು ಪೂರಕವಾಗಿವೆ.ಸಮಾಜದ ಮಧ್ಯೆ ಧರ್ಮ ಸೌಹಾರ್ದತೆ ಮೂಡಿಸಬೇಕಿದೆ.ದೇವ ಒಬ್ಬ ನಾಮ ಹಲವು ಎಂಬುದನ್ನು ಮನಗಾಣಬೇಕು ಎಂದರು.