ಮುಸ್ಲಿಂ ಸಮುದಾಯದವರಿಂದ ಪ್ರತಿಭಟನೆ; ಮನವಿ ಸಲ್ಲಿಕೆ

ಹರಿಹರ.ಏ.೨: ಮುಸ್ಲಿಂ ಸಮುದಾಯದ ಶೇ.4ರ ಮೀಸಲಾತಿ ರದ್ದು ಪಡಿಸಿರುವ ರಾಜ್ಯ ಸರ್ಕಾರದ ನಿರ್ಣಯ ಖಂಡಿಸಿ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ವಿಭಾಗದಿಂದ  ಇಲ್ಲಿನ ಗ್ರೇಡ್-2 ತಹಶೀಲ್ದಾರ್ ಶಶಿಧರಯ್ಯ ಇವರ ಮೂಲಕ ರಾಜ್ಯಪಾಲರು ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಇವರಿಗೆ ಮನವಿ ನೀಡಲಾಯಿತು.ನಂತರ ಪಕ್ಷದ ಮುಖಂಡರು ಮಾತನಾಡಿ, ಸರಕಾರದಿಂದ ರಚನೆಯಾದ ವಿವಿಧ ತಜ್ಞರ ಸಮಿತಿಗಳು ದೇಶದಲ್ಲಿ ಮುಸ್ಲಿಂ ಜನಾಂಗದವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗಿAತ ಹಿಂದುಳಿದಿದ್ದಾರೆAದು ವರದಿ ನೀಡಿವೆ.ಕರ್ನಾಟಕ ಪ್ರಾದೇಶಿಕ ಜನಗಣತಿ-2011ರ ಪ್ರಕಾರ ರಾಜ್ಯದಲ್ಲಿ ರಾಜ್ಯದಲ್ಲಿ ಮುಸ್ಲಿಂ ಸಮುದಾದಯವರು ಶೇ.12.92 (78.93 ಲಕ್ಷ) ರಷ್ಟಿದ್ದಾರೆ. ಮುಸ್ಲಿಮರಿಗೆ 1995ರಿಂದ ಹಿಂದುಳಿದ ವರ್ಗಗಳ ಮೀಸಲಾತಿಯಂತೆ 2ಬಿ ಪ್ರವರ್ಗದಲ್ಲಿ ಶೆ.4 ರಷ್ಟು ಮೀಸಲಾತಿ ನೀಡಲಾಗುತ್ತಿದೆ.ಶೆ.4 ರಷ್ಟು ಮೀಸಲಾತಿ ನೀಡಲಾಗಿದ್ದರೂ ರಾಜ್ಯದಲ್ಲಿ ಸರಕಾರಿ ನೌಕರಿಯಲ್ಲಿ ಮುಸ್ಲಿಮರು ಶೇ.2.5ರಷ್ಟಿದ್ದಾರೆ. ಅಲ್ಪಸಂಖ್ಯಾತರ ಪೈಕಿ ಹಾಗೂ ಬಹುಸಂಖ್ಯಾತರ ಪೈಕಿ ಹೋಲಿಸಿದರೂ ಮುಸ್ಲಿಂ ಸಮುದಾಯದವರು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. 2016ರಲ್ಲಿ ನಡೆದ ಸಮೀಕ್ಷೆಯ ಒಂದು ಮೂಲದ ಪ್ರಕಾರ ಮುಸ್ಲಿಂ ಸಮುದಾಯದವರಲ್ಲಿ ಶೇ.68.5 ರಷ್ಟು ಮಾತ್ರ ಸಾಕ್ಷರತೆ ಇದೆ.ರಾಜ್ಯದ ಬಿಜೆಪಿ ಸರಕಾರದ ಮೀಸಲಾತಿ ರದ್ಧತಿಯ ಕ್ರಮದಿಂದಾಗಿ ಈ ಸಮುದಾಯದ ವಿದ್ಯಾರ್ಥಿಗಳು, ಯುವಕರು ಶೈಕ್ಷಣಿಕ, ಉದ್ಯೋಗ ಕ್ಷೇತ್ರದಲ್ಲಿ ತುಂಬಲಾರದ ನಷ್ಟಕ್ಕೀಡಾಗುತ್ತಾರೆ. ಪ್ರತಿ ವರ್ಷ 2ಬಿ ಪ್ರವರ್ಗದಲ್ಲಿ ಮೀಸಲಾತಿ ಪಡೆದುಕೊಂಡು ಸುಮಾರು 300-350 ವಿದ್ಯಾರ್ಥಿಗಳು ವೈದ್ಯಕೀಯ, 10-12 ಪಶು ವೈದ್ಯಕೀಯ, 200-300 ದಂತ ವೈದ್ಯಕೀಯ, 3500-4500 ವಿದ್ಯಾರ್ಥಿಗಳು ಇಂಜಿನಿಯರಿAಗ್ ಮತ್ತು ಪದವಿ ಹಾಗೂ ಇತರೆ ಉನ್ನತ ಕೋರ್ಸ್ಗಳಲ್ಲಿ ಪ್ರವೇಶ ಪಡೆಯುತ್ತಿದ್ದರು.ನ್ಯಾ.ರಾಜಿಂದರ್ ಸಾಚಾರ್ ಸಮಿತಿ, ನ್ಯಾ.ರಂಗನಾಥ ಮಿಶ್ರ ಆಯೋಗ, ಕೆ.ರಹಮಾನ್ ಖಾನ್ ನೇತೃತ್ವದ ಉನ್ನತಾಧಿಕಾರ ಸಮಿತಿ ಸೇರಿದಂತೆ ವಿವಿಧ ಸಮಿತಿ, ಆಯೋಗಗಳು ಈ ಹಿಂದೆ ಸಲ್ಲಿಸಿರುವ ವರದಿಗಳು ಮುಸ್ಲಿಂ ಸಮುದಾಯದ ಸ್ಥಿತಿ, ಗತಿಗಳ ನೈಜತೆಯನ್ನು ಅನಾವರಣ ಮಾಡಿವೆ. ಹಾಗೆ ನೋಡಿದರೆ ಈ ಸಮಿತಿ, ಆಯೋಗಗಳ ವರದಿಯಂತೆ ಸರಕಾರಗಳು ಈ ಸಮುದಾಯಕ್ಕೆ ಮೀಸಲಾತಿಯನ್ನೂ ಎಂದೂ ನೀಡಿಲ್ಲ. ಕೊಡುತ್ತಿದ್ದ ಅಲ್ಪ ಪ್ರಮಾಣದ ಮೀಸಲಾತಿಯನ್ನೂ ರದ್ದು ಮಾಡಿರುವುದು ಕ್ರಮ ಅಮಾನವೀಯವಾಗಿದೆ.ದೇಶದಲ್ಲಿ ಅತೀ ಕೆಳಮಟ್ಟದಲ್ಲಿ ಜೀವನ ನಡೆಸುತ್ತಿರುವ ಸಮುದಾಯಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುವುದೆ ಮುಸ್ಲಿಂ ಸಮುದಾಯವಾಗಿದೆ. ಅಲ್ಲದೇ ಶೈಕ್ಷಣಿಕವಾಗಿ ಅತಿ ಕಡಿಮೆ ಸಾಕ್ಷರತೆ ಹೊಂದಿರುವುದು ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆಯ ಅತಿ ಹೆಚ್ಚು ಇದೇ ಸಮುದಾಯದಲ್ಲಿ ಇರುವುದು ಎಂದು ವಿವಿಧ ಆಯೋಗ, ಸಮಿತಿಗಳ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.ರಾಜ್ಯದಲ್ಲಿ ಈ ಸಮುದಾಯದವರಿಗೆ ನೀಡುತ್ತಿರುವ 2ಬಿ ಪ್ರವರ್ಗದ ಮೀಸಲಾತಿಯನ್ನು ರದ್ದುಗೊಳಿಸಿಬೇಕೆಂದು ಯಾವುದೇ ವರದಿಗಳು ಇರಲಿಲ್ಲ. ಇತರೆ ಸಮುದಾಯದವರಿಗೆ ಮುಸ್ಲಿಂ ಸಮುದಾಯದ ಜನರಿಂದ, ವಿದ್ಯಾರ್ಥಿಗಳಿಂದ ಶಿಕ್ಷಣ ಹಾಗೂ ಸರಕಾರಿ ಸೇವೆಯಲ್ಲಿ ಅನ್ಯಾಯವಾಗುತ್ತಿದೆ ಎಂದು ಯಾವುದೇ ಘಟನೆ, ವರದಿ ಹಾಗೂ ಸರಕಾರಿ ಅಂಕಿ, ಅಂಶಗಳು ಕಂಡು ಬಾರದಿದ್ದರೂ ಮೀಸಲಾತಿ ರದ್ದು ಪಡಿಸಿರುವ ಕ್ರಮ ಆಶ್ಚರ್ಯ ಮೂಡಿಸುತ್ತಿದೆ.ಸರಕಾರ ಕೈಗೊಂಡಿರುವ 2ಬಿ ಮೀಸಲಾತಿ ರದ್ದಿನ ಆದೇಶವನ್ನು ತುರ್ತಾಗಿ ಹಿಂಪಡೆಯಬೇಕೆAದು ಅವರು ಆಗ್ರಹಿಸಿದರು.ಜೆಡಿಎಸ್ ನಗರ ಘಟಕ ಅಧ್ಯಕ್ಷ ಹಬೀಬ್ ಉಲ್ಲಾ ಗನ್ನೇವಾಲೆ, ನಗರಸಭಾ ಸದಸ್ಯರಾದ ಆರ್.ಸಿ.ಜಾವೀದ್, ಬಿ.ಅಲ್ತಾಫ್, ಮುಖಂಡರಾದ ಹಾಜಿ ಅಲಿ ಖಾನ್, ಎಂಎAಡಿ ಫಾರೂಖ್, ವಕೀಲ ರಿಯಾಜ್ ಅಹ್ಮದ್, ಅಸ್ರಾ ಖಾನ್ ಸಾಬ್, ಮೊಹ್ಮದ್ ಇಲಿಯಾಸ್, ಉಬೇದ್ ಉಲ್ಲಾ ಹಖಾನಿ, ಅಬ್ದುಲ್ ಬಾಶಿದ್, ಮುಖ್ತಿಯಾರ್ ಖಾನ್ ಪಟೇಲ್, ಆರ್.ಕೆ.ಗೌಸ್ ಪೀರ್, ಸಾಬ್ಜಿ, ಮುಷ್ತಾಖ್, ಮೊಹ್ಮದ್ ಸುಲೇಮಾನ್, ಸಾಬ್ಜಾನ್, ಶಾಹಬಾಜ್ ಹಾಗೂ ಇತರರಿದ್ದರು.