
ಸಂಜೆವಾಣಿ ವಾರ್ತೆ
ಸಂಡೂರು:ಮಾ: 31: ಮುಸ್ಲಿಂ ಸಮುದಾಯಕ್ಕೆ ನೀಡಿದ 2ಬಿ ವರ್ಗದ ಮೀಸಲಾತಿಯನ್ನು ರದ್ದು ಗೊಳಿಸಿರುವುದು ಅ ಸಂವಿಧಾನಿಕವಾಗಿದೆ, ಅದ್ದರಿಂದ ತಕ್ಷಣ ಅದನ್ನು ಮರು ಜಾರಿಗೊಳಿಸುವ ಮೂಲಕ ಬಡ ಮುಸ್ಲಿಂ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಅರ್ಥಿಕ ಪ್ರಗತಿಗೆ ಬೆಂಬಲಿಸಬೇಕು ಎಂದು ಅಂಜುಮನ್ ಎ ಖಿದ್ಮತುಲ್ ಮುಸ್ಲಿಮೀನ್ ಕಮಿಟಿಯ ತಾಲೂಕು ಅಧ್ಯಕ್ಷ ಸಿ. ಹಸೇನ್ ಒತ್ತಾಯಿಸಿದರು.
ಅವರು ಸಂಡೂರು ತಾಲೂಕಿನ ಎಲ್ಲಾ ಮುಸ್ಲಿಂ ಬಾಂಧವರು ಹಾಗೂ ಅಂಜುಮನ್ ಎ ಖಿದ್ಮತುಲ್ ಮುಸ್ಲಿಮೀನ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಶಾಂತಿಯುತವಾಗಿ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಸಭೆಯನ್ನು ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ಕರ್ನಾಟಕ ರಾಜ್ಯ ಸರ್ಕಾರವು ಮುಸ್ಲಿಂ ಸಮಾಜಕ್ಕೆ 2ಬಿ ವರ್ಗದ 4% ಮೀಸಲಾತಿ ನೀಡಿತ್ತು, ಅದರೆ ಈಗ ಅದನ್ನು ಏಕಾ ಏಕಿ ರದ್ದು ಪಡಿಸಿರುವುದು ಸಮಾಜಕ್ಕೆ ಮಾಡಿದ ಅಸಂವಿಧಾನಿಕ ನಿರ್ಧಾರವಾಗಿದೆ, 1961ರಲ್ಲಿ ನಾಗನಗೌಡ ಸಮಿತಿ, 1980ರಲ್ಲಿ ಬೀಬಿ ಮಂಡಲ ಆಯೋಗ ಹಾಗೂ 1990ರ ಚಿನ್ನಪ್ಪ ರೆಡ್ಡಿ ಆಯೋಗ ಮತ್ತು ವೆಂಕಟಸ್ವಾಮಿ ಆಯೋಗ ಇವರುಗಳು ನೀಡಿದ ವರದಿಗಳ ಮೇರೆಗೆ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದ ಕಾರಣ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದ ವರ್ಗವೆಂದು ವೈಜ್ಞಾನಿಕ ಅಧ್ಯಯನದ ಮೂಲಕ ಗುರುತಿಸಿ ಮುಸ್ಲಿಂ ಸಮುದಾಯವನ್ನು ಹಿಂದುಳಿದ ವರ್ಗ 2ಬಿಗೆ ಸೇರ್ಪಡೆ ಮಾಡಿ ಈ ಸಮುದಾಯಕ್ಕೆ ಶೇ 4% ಮೀಸಲಾತಿಯನ್ನು ನಿಗದಿ ಪಡಿಸಲಾಗಿತ್ತು, ಅದರೆ ದಿನಾಂಕ: 24.03.2023 ರಂದು ಮಾನ್ಯ ಮುಖ್ಯಮಂತ್ರಿಗಳು ಏಕಾಏಕಿ ಮುಸ್ಲಿಂ ಸಮುದಾಯಕ್ಕೆ ನೀಡಿದ ಮೀಸಲಾತಿಯನ್ನು ಹಇಂಪಡೆದು ಅದೇಶ ನೀಡಿದ್ದು ಇದರಿಂದ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ತುಂಬಲಾರದ ನಷ್ಟ ಉಂಟಾಗಿದ್ದು ತಕ್ಷಣ ಈ ಹಿಂದಿನ ಮೀಸಲಾತಿಯನ್ನು ರದ್ದತಿ ಆದೇಶವನ್ನು ಹಿಂಪಡೆದು ಮತ್ತೋಮ್ಮೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಂ. ನಬಿಸಾಬ್ ಮಾತನಾಡಿ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಈ ರೀತಿಯ ಮೀಸಲಾತಿ ಹಿಂಪಡೆದು ಈಗಾಗಲೇ ಸಂಕಷ್ಟದಲ್ಲಿರುವ ಸಮಾಜವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ, ಅಲ್ಲದೆ ಇರುವ ಕೇವಲ ಶೇ: 4% ಮೀಸಲಾತಿಯನ್ನೂ ಕಿತ್ತುಕೊಂಡಿರುವುದು ಘೋರ ಅನ್ಯಾಯವಾಗಿದೆ. ಅಲ್ಲದೆ ಈಗಾಗಲೇ ಬಹಳಷ್ಟು ಯುವಕರು, ವಿದ್ಯಾರ್ಥಿನಿಯರು ಶಿಕ್ಷಣ, ಉದ್ಯೋಗದಿಂದ ವಂಚಿತರಾಗುತ್ತಾರೆ ಅದ್ದರಿಂದ ಘನ ಸರ್ಕಾರ ತಕ್ಷಣ ಅದೇಶ ಹಿಂಪಡೆಯಬೇಕು ಹಿಂದಿನ ಮೀಸಲಾತಿಯನ್ನು ಯತಾವತ್ತಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ಎ ಖಿದ್ಮತುಲ್ ಮುಸ್ಲಿಮೀನ್ ಕಮಿಟಿಯ ಅಧ್ಯಕ್ಷ ಸಿ.ಹಸೇನ್, ಮುಖಂಡರಾದ ರೋಷನ್ ಜಮೀರ್, ಜಿಲಾನ್ ಸಾಬ್, ಕೆ. ಇಲಿಯಾಸ್.ಟಿ. ಕಾಸಿಂ ಪೀರಾ, ಜಮೀರ್ ಸಾಬ್, ಸತ್ತರ್ ಸಾಬ್, ಸೈಯದ್ ಸಾಬ್, ಕಾರ್ಯದರ್ಶಿ ಎಂ. ನಬಿಸಾಬ್, ಹಾಗೂ ತಾಲೂಕಿನ ಎಲ್ಲಾ ಪ್ರಗತಿಪರ ಸಂಘಟನಯ ಅಧ್ಯಕ್ಷರುಗಳು, ಪದಾಧಿಕಾರಿಗಳು ಬೆಂಬಲಿಸಿ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಶಿವಕುಮಾರ.ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡ ಕ್ರಾಂತಿದಳದ ಮನವಿ: ಅದೇ ರೀತಿ ಶೇ 4% ಮೀಸಲಾತಿ ರದ್ದು ಪಡಿಸಿರುವುದನ್ನು ಖಂಡಿಸಿ ಸಂಡೂರು ತಾಲೂಕು ದಂಡಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮುಖಾಂತರ ಕನ್ನಡ ಕ್ರಾಂತಿದಳದ ಅಧ್ಯಕ್ಷ ಬಿ.ಭರ್ಮಪ್ಪ ಉಪಾಧ್ಯಕ್ಷ ಕೆ.ಕೆ. ದಾದಾಖಲಂದರ್, ಕಾರ್ಯಾಧ್ಯಕ್ಷ ಹೆಚ್. ಕುಮಾರಸ್ವಾಮಿ ಕಾರ್ಯದರ್ಶಿ ಇಸ್ಮಾಯಿಲ್ ಜಬೀವುಲ್ಲಾ ಖಜಾಂಚಿ. ಕೆ. ಕೊಟ್ರೇಶ್ ರವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ರಾಜ್ಯಪಾಲರು, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರೆ. ಕರಾವೇ ಶಿವರಾಮೇಗೌಡ ಬಣ ಹಾಗೂ ಗಣಿ ಕಾರ್ಮಿಕರ ಸಂಘ ಹಾಗೂ ಎಲ್ಲಾ ಜನಪರ ಸಂಘಟನೆಗಳು ಬೆಂಬಲ ಕೊಟ್ಟಿದ್ದವು, ಅದರೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಛೇರಿಯ ವರೆಗೆ ಮೌನ ಮೆರವಣಿಗೆ ಸಾಗಿ ತಾಲೂಕು ದಂಡಾಧಿಕಾರಿ ಕಛೇರಿಯಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು.