ನವದೆಹಲಿ,ಜೂ.೨೯- ಮುಸ್ಲಿಂ ಸಮುದಾಯದ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಸ್ತ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.
ಟ್ವೀಟ್ ಮೂಲಕ ಶುಭ ಕೋರಿರುವ ಪ್ರಧಾನಿ ಮೋದಿ, ಸರ್ವರಿಗೂ ಬಕ್ರೀದ್ ಹಬ್ಬದಶುಭಾಶಯಗಳು. ಈ ದಿನ ಎಲ್ಲರಿಗೂ ತ್ಯಾಗದ ಸಂಕೇತಬಾಗಿರುವ ಬಕ್ರೀದ್,ಸಂತೋಷ ಮತ್ತು ಸಮೃದ್ಧಿಯನ್ನ ನೀಡಲಿ, ನಮ್ಮ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಾಮರಸ್ಯ ಎತ್ತಿ ಹಿಡಿಯುವಂತಾಗಲಿ ಎಂದು ಹಾರೈಸಿದ್ದಾರೆ.
ಈ ವರ್ಷ ಪವಿತ್ರ ಬಕ್ರೀದ್ ಹಬ್ಬ
ವನ್ನು ಜೂನ್ ತಿಂಗಳ ಕೊನೆಯಲ್ಲಿ ಆಚರಿಸಲಾಗುತ್ತಿದೆ. ಇಸ್ಲಾಂ ಧರ್ಮ
ವನ್ನು ನಂಬುವ ಜನರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬವನ್ನು ತ್ಯಾಗದ ಸಂಕೇತವೆಂದು ಆಚರಿಸುತ್ತಾರೆ ಎಂದಿದ್ಧಾರೆ.
ಈ ದಿನ, ಈದ್ಗಾಗಳಲ್ಲಿ ಮತ್ತು ಮಸೀದಿಗಳಲ್ಲಿ ಜಮಾತ್ ಜೊತೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಬಕ್ರೀದ್ ದಿನದಂದು ಬೆಳಗ್ಗೆ ನಮಾಜ್ ಅರ್ಪಿಸುವುದರೊಂದಿಗೆ ಆಚರಣೆ ಪ್ರಾರಂಭವಾಗುತ್ತದೆ. ಈ ಸಂತೋಷದ ಸಂದರ್ಭಗಳಲ್ಲಿ ಬಡವರಿಗೆ ಸಹಾಯ ಮಾಡಬೇಕೆಂದು ಇಸ್ಲಾಂನಲ್ಲಿ ಹೇಳಲಾಗಿದೆ ಎಂದು ಧರ್ಮಗುರುಗಳು ಹೇಳುತ್ತಾರೆ ಎಂದು ನೆನಪು ಮಾಡಿಕೊಂಡಿದ್ದಾರೆ.
ಬಕ್ರೀದ್ ಹಬ್ಬದ ದಿನದಂದು ಯಾವ ಪ್ರಾಣಿಯನ್ನೂ ತ್ಯಾಗ ಮಾಡಿದರೂ, ಅದರ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡುತ್ತಾರೆ. ಈ ೩ ಭಾಗಗಳಲ್ಲಿ ಒಂದು ಭಾಗವನ್ನ ಬಡವರಿಗೆ, ೨ನೇ ಭಾಗವನ್ನ ಸಂಬಂಧಿಕರಿಗೆ ದಾನ ಮಾಡಬೇಕು. ೩ನೇ ಭಾಗವನ್ನ ಮನೆಯವರು ಬಳಸಬೇಕು ಎನ್ನುವ ಸಂಪ್ರದಾಯವಿದೆ.