ದೇವದುರ್ಗ,ಮಾ.೨೮- ರಾಜ್ಯ ಮತ್ತು ದೇಶದಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಂರಿಗೆ ಮಾನಸಿಕಹಿಂಸೆ ನೀಡುತ್ತಿದ್ದು,ನಿರಂತರವಾಗಿ ಮೋಸಮಾಡಲಾಗುತ್ತಿದೆ.
ಇದೀಗ ಮೀಸಲಾತಿ ಸೌಲಭ್ಯ ಕಸಿದುಕೊಂಡು ರಾಜ್ಯ ಬಿಜೆಪಿ ಸರಕಾರ ಇಡೀ ಸಮುದಾಯಕ್ಕೆ ಭಾರಿ ಅನ್ಯಾಯಮಾಡಿದೆ ಎಂದು ತಾಲೂಕು ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗ ಅಧ್ಯಕ್ಷ ಇಸಾಕ್ ಮೇಸ್ತ್ರಿ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಾಲಂ ಉದ್ದಾರ,ಮುಖಂಡ ಮಹಬೂಬ ಹೆಗ್ಗಡದಿನ್ನಿ ಜಂಟಿ ಸುದ್ದಿ ಗೋಪ್ಠಿ ನಡಸಿ ಮಂಗವಾರ ಆರೋಪಿಸಿದರು.
ದೇಶಪ್ರೇಮಿಗಳೆಂದು ಬಿಂಬಿಸಿಕೊಳ್ಳುವ ಬಿಜೆಪಿಗರೇ ನಿಜವಾದ ದೇಶದ್ರೋಹಿಗಳು.ಇವರ ಆಡಳಿತಾವಧಿಯಲ್ಲಿ ಹಿಜಾಬ್,ಆಜಾನ್,ಹಲಾಲ್ ಕಟ್,ಜಟ್ಕಾ ಕಟ್,ವ್ಯಾಪಾರದಲ್ಲಿ ಭಿನ್ನತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಸೃಷ್ಠಿಸಿ ಮುಸ್ಲೀಂ ಸಮುದಾಯದ ಮೇಲೆ ನಿರಂತರವಾಗಿ ದ್ರೋಹ ಮಾಡುತ್ತಾ ಹೊರಟಿದೆ.
ರಾಜ್ಯದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಧಿಕಾರವಧಿಯಲ್ಲಿ ಶೇ.೪ರಷ್ಟು ಮೀಸಲಾತಿ ಸೌಲಭ್ಯವನ್ನು ಕಲ್ಪಿಸಿದ್ದರು.ಹೀಗಾಗಿ ಶೈಕ್ಷಣಿಕ,ಸಮಾಜಿಕಮತ್ತು ಆರ್ಥಿಕಕ್ಷೇತ್ರದಲ್ಲಿ ಮುಸ್ಲೀಂ ಸಮುದಾಯಕ್ಕೆತಕ್ಕ ಅವಕಾಶ ಒದಗಿಸಲಾಗಿತ್ತು.
ಧರ್ಮ ರಾಜಕಾರಣದ ಫಲವಾಗಿ ಇದೀಗ ಬಿಜೆಪಿ ಸರಕಾರ ಮೀಸಲಾತಿ ಸೌಲಭ್ಯವನ್ನು ಕಸಿದುಕೊಂಡು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನ ವಿರೋಧಿ ನಿಲುವನ್ನು ಜಾರಿಗೊಳಿಸದೆ.
ಹೀಗಾಗಿ ಇಡೀರಾಜ್ಯಾದ್ಯಂತ ಭಾರಿ ಹೋರಾಟದ ರೂಪು-ರೇಶಗಳು ಸಿದ್ಧಗೊಳ್ಳುತ್ತಿವೆ.ಮೀಸಲಾತಿಯನ್ನು ಕಸಿದುಕೊಂಡಿರುವ ಬಿಜೆಪಿಯ ವಿರುದ್ಧ ಭಾರಿ ಪ್ರತಿಭಟನೆಗಳನ್ನು ಮಾಡಲಾಗುತ್ತಿದೆ.ಬಿಜೆಪಿಯನ್ನು ಧಿಕ್ಕರಿಸಿ ಎಂಬ ಚಳುವಳಿ ಮಾಡಲಾಗುವದು.
ದೇಶದಲ್ಲಿ ಬಿಜೆಪಿ ಕೋಮುವಾದವನ್ನೆ ಅಸ್ತ್ರ ಮಾಡಿಕೊಂಡು ರಾಜಕಾರಣ ಮಾಡುತ್ತಿದೆ.ಅದರೆ ರಾಜ್ಯದಲ್ಲಿ ಇಂಥ ವಾತಾವರಣ ಕಂಡಿದ್ದಿಲ್ಲ.ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ನಾಂದಿ ಹಾಡಿದ್ದು,ರಾಜ್ಯದಲ್ಲಿ ಸಾಮರಸ್ಯ ಮನೋಭಾವ ಕದಡಲು ಕಾರಣವಾಗಲಿದೆ.
ಬಿಜೆಪಿಯಲ್ಲಿ ಧರ್ಮ ರಾಜಕಾರಣ,ಹಣದ ರಾಜಕಾರಣ ಕಾಣಲಾಗಿತ್ತು,ಇದೀಗ ದ್ವೇಶ ರಾಜಕಾರಣ ವಾದವನ್ನು ಮಂಡಿಸುತ್ತಿದೆ.ಇದರಿಂದ ಹಿಂದೂ-ಮುಸ್ಲೀಂರ ಮಧ್ಯೆ ವೈಮನಸ್ಸು ಮೂಡಿಸುವ ಉದ್ದೇಶ ಹೊಂದಲಾಗಿದೆ.
ಕೂಡಲೇ ರಾಜ್ಯ ಸರಕಾರ ಮುಸ್ಲೀಂ ಸಮುದಾಯಕ್ಕೆ ಮರುಮೀಸಲಾತಿ ಘೋಶಿಸಬೇಕು.ಇಲ್ಲದಿದ್ದಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತಹಾಕಬೇಡಿ ಎಂಬ ಕರೆ ನೀಡಲಾಗುವದು ಎಂದು ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಈಸಾಕ್ ಮೇಸ್ತ್ರಿ,ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಾಲಂ ಉದ್ದಾರ,ಮುಖಂಡ ಮಹಬೂಬಸಾಬ್ ಹೆಗ್ಗಡದಿನ್ನಿ ತಿಳಿಸಿದರು.
ಈ ಸಂದರ್ಭದಲ್ಲಿ ಹಾಜಿಸಾಬ್ ಮಸರಕಲ್, ಇಸ್ಮಾಯಿಲ್ ಸಾಬ್, ನಬೀಸಾಬ್ ನಾಗಡದಿನ್ನಿ, ಮಗದುಮ್ ಜಾಲಹಳ್ಳಿ, ಖಾಜಾಹುಸೇನ್ ಟೇಲರ್, ಜಹಿರುದ್ದೀನ್,ಖಾಸಿಂ ಬುವಾಜಿ, ಖಾಜಾ ಪಾಶಾ, ಮಹ್ಮದ್ ಸಾಬ್, ರಾಜಮಹ್ಮದ್ ಮಲದಕಲ್, ಗೋಕುಲಸಾಬ್, ರಾಜಾವಲಿ ಕೊತ್ತದೊಡ್ಡಿ, ಸಲೀಂ ಕಾಕರಗಲ್ ಹಾಗೂ ಇತರರು ಇದ್ದರು.