ಮುಸ್ಲಿಂ ಯುವಕರ ಬಗ್ಗೆ ವ್ಯವಸ್ಥಿತ ಷಡ್ಯಂತ್ರ, ಸುಳ್ಳು ಪ್ರಕರಣಗಳ ದಾಖಲು

ಬೆಳ್ತಂಗಡಿ, ಸೆ.೧೭- ಕಳೆದ ಕೆಲವು ದಿನಗಳ ಹಿಂದೆ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಹಾಗೂ ಉಜಿರೆ ಗ್ರಾಮದ ನಿನ್ನಿಕಲ್ಲು ಎಂಬಲ್ಲಿ ಮುಸ್ಲಿಂ ಸಮಾಜದ ಯುವಕರ ಬಗ್ಗೆ ವ್ಯವಸ್ಥಿತವಾದ ಷಡ್ಯಂತ್ರದ ಮೂಲಕ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಅದಲ್ಲದೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ ಈ ಬಗ್ಗೆ ಸತ್ಯಶೋಧನಾ ತಂಡವನ್ನು ತಾಲೂಕು ಆಡಳಿತ ಹಾಗೂ ನ್ಯಾಯಾಧೀಶರ ನೇತೃತ್ವದ ವಿಶೇಷ ತಂಡ ರಚಿಸಬೇಕು ಎಂದು ಎಸ್. ಡಿ. ಪಿ.ಐ.ತಾಲೂಕು ಅಧ್ಯಕ್ಷ ಹೈದರ್ ನೀರ್ಸಾಲ್ ಆಗ್ರಹಿಸಿದರು.ಅವರು ಬೆಳ್ತಂಗಡಿ ತಾಲೂಕು ಮುಸ್ಲಿಂ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಬೆಳಾಲು ಹಾಗೂ ನಿನ್ನಿಕಲ್ಲು ಇಲ್ಲಿ ನಡೆದ ಎರಡೂ ಘಟನೆಗಳಲ್ಲಿಯೂ ದಲಿತ ಸಮಾಜದ ಯುವತಿಯರನ್ನು ಬಳಕೆ ಮಾಡಿಕೊಳ್ಳಲಾಗಿದೆ.ಅದಲ್ಲದೆ ಬೆಳಾಲಿನ ಸುರುಳಿಯಲ್ಲಿ ನಡೆದ ಪ್ರಕರಣದ ಬಳಿಕ ತನಿಖಾಧಿಕಾರಿ ಬಂಟ್ವಾಳ ಡಿವೈಎಸ್ ಪಿ ಅವರ ಬಳಿ ಸ್ಥಳೀಯ ನಾಗರಿಕರು ಘಟನೆ ಬಗ್ಗೆ ಸಂದೇಹ ವ್ಯಕ್ತಪಡಿಸಿ ಬೀಡಿ ಬ್ರಾಂಚ್ ಮಾಲಕರ ಪರ ಹೇಳಿಕೆ ನೀಡಿದ್ದಾರೆ.ಅದ್ದರಿಂದ ಇದು ಪೂರ್ವಯೋಜಿತ ಕೃತ್ಯವಾಗಿದೆ ಎಂದ ಅವರು ಎರಡೂ ಪ್ರಕರಣಗಳ ಬಗ್ಗೆ ಸತ್ಯಶೋಧನೆ ನಡೆಸಿ ಇದರ ಹಿಂದೆ ಇರುವ ನೈಜ ಕಾರಣವನ್ನು ಬಹಿರಂಗಪಡಿಸಬೇಕು.ಮುಂದಿನ ದಿನಗಳಲ್ಲಿ ಬರುತ್ತಿರುವ ಸ್ಥಳೀಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಈ ರೀತಿ ನಡೆಯುತ್ತಿದೆ.ಮುಸ್ಲಿಂ ಸಮಾಜದ ಮೇಲೆ ಸುಳ್ಳು ಅಪಾದನೆ,ಸುಳ್ಳು ಕೇಸ್ ಗಳಲ್ಲಿ ಸಿಲುಕಿಸಿ ದೌರ್ಜನ್ಯ ನಡೆಸುವುದು ನಡೆಯುತ್ತಿದೆ ಅದಲ್ಲದೆ ಸಂಘ ಪರಿವಾರದ ಕೆಲವು ನಾಯಕರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಕೋಮುಗಲಭೆ ಸೃಷ್ಟಿಸಲು ಸಂಚು ನಡೆಸುತ್ತಿರುವಂತೆ ಕಾಣುತ್ತಿದೆ ಈ ಬಗ್ಗೆ ಪೊಲೀಸ್ ಗುಪ್ತಚಾರ ಇಲಾಖೆ ಸೂಕ್ತ ತನಿಖೆ ಕೈಗೊಳ್ಳಬೇಕು. ಅದ್ದರಿಂದ ಈ ವಿಚಾರಗಳನ್ನು ಪೊಲೀಸ್ ಇಲಾಖೆ ಗಂಬೀರವಾಗಿ ಪರಿಗಣಿಸಬೇಕು ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾದೀತು ಎಂದರು.ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್ ಎಮ್ ಕೋಯ ಉಜಿರೆ, ಎಸ್ ಎಮ್ ಎ ರಾಜ್ಯ ಕಾರ್ಯದರ್ಶಿ ಸಾದಿಕ್ ಮಲೆಬೆಟ್ಟು, ರಾಜ್ಯ ಉಪಾಧ್ಯಕ್ಷ ಎ.ಕೆ ಅಹಮದ್, ಮುಸ್ಲಿಂ ಜಮಾಅತ್ ತಾಲೂಕು ಕಾರ್ಯದರ್ಶಿ ಮುಹಮ್ಮದ್ ರಫಿ, ತಾ. ಮುಸ್ಲಿಂ ಒಕ್ಕೂಟದ ಅಧ್ಯಕ್ಷ ನಝೀರ್ ಬಿ. ಎ, ಸಾಮಾಜಿಕ ಕಾರ್ಯಕರ್ತರಾದ ಅಕ್ಬರ್ ಸಂಜಯನಗರ, ಅಬ್ದುಲ್ ಹಕೀಂ ನೆರಿಯ, ಅಬ್ದುಲ್ ರಹಮಾನ್ ಕಕ್ಕಿಂಜೆ, ಎಸ್.ಕೆ.ಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಉಪಾಧ್ಯಕ್ಷ ರಝಾಕ್ ಕನ್ನಡಿಕಟ್ಟೆ,ತಾ.ಮುಸ್ಲಿಂ ಐಕ್ಯತಾ ವೇದಿಕೆ ಅಧ್ಯಕ್ಷ ಸಲೀಂ ಗುರುವಾಯನಕೆರೆ
ಉಪಸ್ಥಿತರಿದ್ದರು.