ಮುಸ್ಲಿಂ ಯುವಕನಿಂದ ಹಿಂದೂ ವ್ಯಕ್ತಿಯ ಅಂತ್ಯ ಸಂಸ್ಕಾರ

ಬಸವಕಲ್ಯಾಣ:ಎ.27: ಇಲ್ಲಿನ ಶಹಾನಗರ ನಿವಾಸಿ ಯಾದವರಾವ್ (55) ಎನ್ನುವವರ ಅಂತ್ಯಸಂಸ್ಕಾರವನ್ನು ಭಾನುವಾರ ಅದೇ ಓಣಿಯ ಮುಸ್ಲಿಂ ಯುವಕರು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಯಾದವರಾವ್ ಅವರು ಮನೆಯಲ್ಲಿ ಮಲಗಿದಲ್ಲೇ ಪ್ರಾಣ ಬಿಟ್ಟಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಕೋವಿಡ್ ಭಯದಿಂದ ಅಂತ್ಯ ಸಂಸ್ಕಾರಕ್ಕೆ ಓಣಿ ಜನರು ಬಾರದಿದ್ದಾಗ ಮುಸ್ಲಿಂ ಯುವಕರು ಶವವನ್ನು ವಾಹನದಲ್ಲಿ ಸಾಗಿಸಿ ಖಾನಾಪುರ ರಸ್ತೆಯಲ್ಲಿನ ಹಿಂದೂ ಸಮುದಾಯದ ಸ್ಮಶಾನದಲ್ಲಿ ಶವಸಂಸ್ಕಾರ ನೆರವೇರಿಸಿದರು.