ಮುಸ್ಲಿಂ ಮೀಸಲಾತಿ ಯನ್ನು ಪುನರ್ ಸ್ಥಾಪಿಸಿ

ಜೇವರ್ಗಿ :ಎ.1 : 2ಬಿ ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ್ದ ಮೀಸಲಾತಿಯನ್ನು ಪುನರ್ ಸ್ಥಾಪಿಸುವಂತೆ ಒತ್ತಾಯಿಸಿ ಟಿಪ್ಪು ಸುಲ್ತಾನ ಮೈನಾರಿಟಿ ಕಮ್ಯೂನಿಟಿ ವೆಲ್‍ಫರ್ ಅಸೋಸಿಯೋಷನ್ ಮತ್ತು ದಲಿತ ಸೇನೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಎದುರುಗಡೆ ಶಾಂತಿಯುತವಾಗಿ ತಾಲೂಕ ದಂಡಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಮಾ. 24 ರಂದು ಸಂಪುಟ ಸಭೆಯಲ್ಲಿ ಮುಸ್ಲಿಂ ಸಮುದಾಯಕ್ಕಿದ್ದ 2 ಬಿ ಮೀಸಲಾತಿಯನ್ನು ರದ್ದು ಪಡಿಸಿರುತ್ತಾರೆ, ಇದು ಅಸಂವಿಧಾನ, ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿಯಾಗಿದೆ.
ಸಂವಿಧಾನದಲ್ಲಿ ಧವರ್iಧಾರಿತ ಮೀಸಲಾತಿ ಇಲ್ಲದಿರುವುದರಿಂದ 2 ಬಿ ಪ್ರವರ್ಗದ ಅಡಿಯಲ್ಲಿ ಹಿಂದುಳಿದ ವರ್ಗಗಳಂತೆ ಮುಸ್ಲಿಂ ಸಮುದಾಯಕ್ಕೂ ವೈಜ್ಞಾನಿಕ ಅಧ್ಯಯನ ಮೂಲಕ ಗುರುತಿಸಿ ಮೀಸಲಾತಿ ನೀಡಲಾಗಿತ್ತು. ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿಕೊಳ್ಳುವ ಷಡ್ಯಂತ್ರದ ಮುಂದುವರೆದ ಭಾಗವಾಗಿ ಮೀಸಲಾತಿ ರದ್ದುಪಡಿಸಿರುವದು ಖಂಡನೀಯ.
ಮುಸ್ಲಿಂ ಸಮುದಾಯಕ್ಕೆ ನಿಗದಿಯಾಗಿದ್ದ ಮೀಸಲಾತಿಯನ್ನು ಮರು ಸ್ಥಾಪಿಸಬೇಕೆಂದು ಟಿಪ್ಪು ಸುಲ್ತಾನ ಮೈನಾರಿಟಿ ಕಮ್ಯುನಿಟಿ ವೆಲ್‍ಫರ್ ಅಸೋಸಿಯೋಷನ್ ಮತ್ತು ದಲಿತ ಸೇನೆ ರಾಜ್ಯಪಾಲರಿಗೆ ಮನವಿ ನೀಡುವುದರ ಮುಲಕ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೊಹಿಯುದ್ದಿನ್ ಇನಾಂದಾರ, ಶಿವಕುಮಾರ ಗೋಲ, ಶಿವಶರಪ್ಪ ಸುಣ್ಣರು, ರೇಣುಕಾ ಗಾಯಕವಾಡ, ಖಾದುರ್ ಪೀರಸಾಬ್, ಜಗದೀಶ್ ನಡಗಟ್ಟಿ, ಮುನೀರ್ ಫಾಷಾ, ಪ್ರಕಾಶ ಕಾಂಬಳೆ, ಅಬ್ದುಲ್ ಲತೀಫ್ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ದಲಿತ ಸೇನೆ ಕಾರ್ಯಕರ್ತರರು ಉಪಸ್ಥಿತರಿದ್ದರು.