ಮುಸ್ಲಿಂ ಮೀಸಲಾತಿ ಪುನರ್ ಸ್ಥಾಪಿಸಲು : ದಲಿತ ಸೇನೆ ಒತ್ತಾಯ

ಕಾಳಗಿ.ಏ.2. ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಪುನರ ಸ್ಥಾಪಿಸುವಂತೆ ತಾಲೂಕು ದಲಿತ ಸೇನೆ ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4 ರಷ್ಟು ಮೀಸಲಾತಿಯನ್ನು ರದ್ದು ಮಾಡಿ ಇನ್ನೊಂದು ಸಮುದಾಯಕ್ಕೆ ಹಂಚಿರುವುದು ಖಂಡನಿಯ. ಇದು ಸರ್ಕಾರದ ಅಸಂವಿಧಾನ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಹಿಂಪಡೆದು ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ಪುನರ ಸ್ಥಾಪಿಸಬೇಕು.ಸಂವಿಧಾನ ಆಶಯಗಳಂತೆ ಸರ್ಕಾರ ತನ್ನ ಆಡಳಿತ ನಡೆಸಬೇಕೆ ಹೊರತು ತನ್ನ ಗುಪ್ತ ಅಜೆಂಡಾವನ್ನು ಜಾರಿಗೊಳಿಸಲು ಅಲ್ಲ. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ನಿಗದಿ ಆಗಿದ್ದ 2ಬಿ ಮೀಸಲಾತಿಯನ್ನು ಮರು ಸ್ಥಾಪಿಸಬೇಕೆಂದು ತಾಲೂಕ ದಲಿತ ಸೇನೆ ವತಿಯಿಂದ ಮನವಿ ಮಾಡಿದರು.
ದಲಿತ ಸೇನೆ ತಾಲೂಕು ಅಧ್ಯಕ್ಷ ಖತಲಪ್ಪ ಅಂಕನ, ರಮೇಶ ಕುಡ್ದಳ್ಳಿ, ಜೈಭೀಮ ಅರೆಜಂಬಗಾ, ಚಂದ್ರಶೇಖರ ರೂಮ್ಮನಗುಡ್, ರವೂಫ್ ಪಟೇಲ ಜಂಬಗಿ, ರವಿಕುಮಾರ ಜಂಬಗಿ, ಖಾಲೀದ್ ಖುರೇಷಿ, ಅಖಿಲ ಖುರೇಷಿ, ಖಾಯ್ಯುಮ ಖುರೇಷಿ,ಮಹೇಬೂಬ ಖುರೇಷಿ ಸೇರಿದಂತೆ ಅನೇಕರಿದ್ದರು.
ಹಿಂದುಳಿದ ವರ್ಗಗಳಂತೆ ಮುಸ್ಲಿಂ ಸಮುದಾಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಬಗ್ಗೆ ಅಧ್ಯಯನದ ನಂತರವೇ ಮೀಸಲಾತಿ ಕಲ್ಪಿಸಲಾಗಿತ್ತು. ಈ ಹಿಂದೆ ರಚಿಸಲಾಗಿದ್ದ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಹಾಗೂ ಚಿನ್ನಪ್ಪ ರೆಡ್ಡಿ ಆಯೋಗ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿವೆ. ಹೀಗಿದ್ದರು ಸಮುದಾಯದವರ ಅಭಿವೃದ್ಧಿಗೆ ತೊಡೆಯೊಡ್ಡಿ. ಅವರನ್ನು ಮುಖ್ಯ ವಾಹಿನಿಗೆ ಬಾರದಂತೆ ಮಾಡಲು ಈ ಷಡ್ಯಂತರ ನಡೆಸಲಾಗಿದೆ. ಮುಸ್ಲಿಮರ ಹಿತದೃಷ್ಟಿ ಕಾಯುವುದು ಸರ್ಕಾರದ ಕಾರ್ಯ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ.
ನಾಗರಾಜ ಬೇವಿನಕರ
ದಲಿತ ಸೇನೆ ತಾಲೂಕು ಕಾರ್ಯಧ್ಯಕ್ಷ ಕಾಳಗಿ