ಮುಸ್ಲಿಂ ಬಾಂಧವರ ಪವಿತ್ರ ಹಬ್ಬ ಬಕ್ರೀದ್ ಆಚರಣೆ

ಸಿರವಾರ.ಆ.01- ಮುಸ್ಲಿಂರ ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್ ಹಬ್ಬವನ್ನು ಮಸೀದಿಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವ ಮೂಲಕ ಅಚರಣೆ ಮಾಡಲಾಯಿತು.
ಕೋವಿಡ್-೧೯ ವೈರಸ್ ಹಿನ್ನಲೆಯಲ್ಲಿ ರಂಜಾನ್ ಹಬ್ಬಕ್ಕೆ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸರ್ಕಾರ ನಿಷೇದ ಮಾಡಿದರು. ಬಕ್ರೀದ್ ಹಬ್ಬಕ್ಕೆ ಮಸೀದಿಗಳಲ್ಲಿ ಕನಿಷ್ಠ ಜನರೊಂದಿಗೆ, ಚಿಕ್ಕಮಕ್ಕಳು, ವಯೋವೃದ್ದರಿಗೆ ಇಲ್ಲದೇ ಪ್ರಾರ್ಥನೆಗೆ ಅವಕಾಶ ನೀಡಿದ ಹಿನ್ನಲ್ಲೆಯಲ್ಲಿ ಪಟ್ಟಣದಲ್ಲಿರುವ ೬ ಮಸೀದಿಗಳಲ್ಲಿ, ತಾಲೂಕಿನ ಗ್ರಾಮಗಳಲ್ಲಿರುವ ಮಸೀದ್‌ಗಳಲ್ಲಿ ಪ್ರಾರ್ಥನೆ ಮಾಡಿವ ಮೂಲಕ ಹಬ್ಬವನ್ನು ಆಚರಣೆ ಮಾಡಲಾಯಿತು.
ಮಸೀದಿ ಆಗಮಿಸಿದವರ ದೇಹದಲ್ಲಿರುವ ಉಷ್ಣಾಂವನ್ನು ತಪಾಸಣೆ ಮಾಡಿ, ಕೈಗಳಿಗೆ ಸ್ಯಾನಿಟೈಜರ್‌ನಿಂದ ತೊಳೆದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್‌ಧರಿಸುವುದು ಸೇರಿದಂತೆ ಸರ್ಕಾರದ ಎಲ್ಲಾ ನಿಯಮಾವಳಿಗಳನ್ನು ಚಾಚೂತಪ್ಪದೇ ಪಾಲಿಸುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಿಸಿದ್ದಾರೆ. ಇದೇ ಮೊದಲ ಬಾರಿಗೆ ಪರಸ್ಪರ ಅಪ್ಪಿಕೊಳ್ಳದೇ ತಮ್ಮ ಪ್ರೀತಿ ಮತ್ತು ಶುಭಾಶಯವನ್ನು ವಿನಿಮಯ ಮಾಡಿಕೊಂಡರು. ಮನೆಗಳಲ್ಲಿ ಮಾಡುವ ಆಚರಣೆಯಲ್ಲಿ ಮಾತ್ರಬದಲಾವಣೆ ಇರಲಿಲ್ಲ.