
ಅರಕೇರಾ,ಮಾ,೦೬- ಪಟ್ಟಣದಲ್ಲಿನ ಕೂಲಬೇಕರಿ ಮಾಲಕರು ಮುಸ್ಲಿಂಬಾಂದವರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ದೇವದುರ್ಗ ವಿಧಾನಸಭಾ ಕ್ಷೇತತ್ರದ ಶಾಸಕರಾದ ಕೆ,ಶಿವನಗೌಡನಾಯಕರವರ ಜನಪರ ಕಾಳಜಿ ಹಾಗೂ ತಾಲ್ಲೂಕಿನಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ
ಪಟ್ಟಣದಲ್ಲಿನ ಮಹಮೂದ್ ದಾವುದ್ ಮಹ್ಮದ ಇರಷದ್ ಮಹ್ಮದ,ನಾಗೇಶ ನಗರ ಸಿದ್ದಪ್ಪ ಕರ್ನಾಳ ಇವರುಗಳು ಶಾಸಕರ ಸಮ್ಮುಖದಲ್ಲಿ ಭಾರತೀಯಜನತಾ ಪಕ್ಷಕ್ಕೆ ಸೇರ್ಪಡೆಯಾದರರು ಅವರನ್ನು ಶಾಸಕ ಕೆ.ಶಿವನಗೌಡನಾಯಕರವರು ಪಕ್ಷದ ಶಾಲುಹಾಕಿ ಸ್ವಾಗತಿಸಿಕೊಂಡರು.
ಅವರ ಅರಕೇರಾ ನಿವಾಸದಲ್ಲಿ ಪಕ್ಷಕ್ಕೆ ಸೇರ್ಪಡೆಕಾರ್ಯಕ್ರಮದಲ್ಲಿ ಪಕ್ಷಕೆ ಭಾರಮಾಡಿಕೊಂಡು ಮಾತನಾಡಿದ ಅವರು ನಮ್ಮ ಅಧಿಕಾರರ ಅವದಿಯಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಹೊಂದಿದ್ದು ಈ ನಿಟ್ಟಿನಲ್ಲಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ವಿವಿಧ ಪಕ್ಷಗಳನ್ನು ತೊರೆದು ನಮ್ಮ ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಯಗುತ್ತಿದ್ದು ೨೦೨೩ರ ಚುನಾವಣೆಯಲ್ಲಿ ಬಾರತೀಯ ಜನತಾ ಪಕ್ಷದ ನೇತೃತ್ವದ ಸರಕಾರವು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಜುಕ್ಕಾಣಿ ಹಿಡಿಯಲು ತಾವೆಲ್ಲರೂ ಶ್ರಮಿಸಬೇಕೆಂದರು.
ಈ ಸಂದರ್ಬದಲ್ಲಿ ಕೆ.ಅನಂತರಾಜನಾಯಕ ಬಿಜೆಪಿ ಹಿರಿಯ ಮುಖಂಡರು ಮುಖಂಡರಾದ,ರಾಯಚೂರು ರಿಮ್ಸ ಆಡಳಿತ ಮಂಡಳಿಯ ನಾಮನಿರ್ದೇಶಿತ ಸದಸ್ಯ ಡಾ|| ಎಚ್ ಎ,ನಾಡಗೌಡ ಮುಖ್ಯಗುರುಗಳಾದ ಸಿದ್ದಪ್ಪ ಪೈಕಾರ ಗ್ರಾ.ಪಂ. ಉಪಾಧ್ಯಕ್ಷ,ಬಾಷಸಾಬ ವೈಲ್ಡಿಂಗ,ರಾಚಯ್ಯಸ್ವಾಮಿ ಮಠಪತಿ,ನಾಗರಾಜಕರ್ನಾಳ.ಹನುಮಂತ್ರಾಯಕೊತ್ತದೊಡ್ಡಿ ,ರವಿನಾಯಕ,ಅಲಿ ಮುಂತಾದವರು ಉಪಸ್ಥಿತರಿದ್ದರು.