ಮುಸ್ಲಿಂ ಬಾಂಧವರಿಗೆ ಬಾಡೂಟ ಬಡಿಸಿದ ರಾಜಾ ವೆಂಕಟಪ್ಪ ನಾಯಕ

ಸಿರವಾರ.ಏ೧೧- ಮುಸ್ಲಿಂ ಬಾಂಧವರ ಪವಿತ್ರ ರಂಹಾನ್ ಹಬ್ಬದ ಅಂಗವಾಗಿ ಸಂಜೆ ಆಯೋಜನೆ ಮಾಡಲಾಗಿದ ಇಪ್ತಿಯಾರ ಕೂಟದಲ್ಲಿ ಮಾನ್ವಿ ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಭಾಗವಹಿಸಿ ಮುಸ್ಲಿಂ ಬಾಂದವರಿಗೆ ಬಾಡೂಟವನ್ನು ಉಣಬಡಿಸುವ ಮೂಲಕ ಮತದಾರರನ್ನು ಮನಗೆಲುವ ಯತ್ನ ಮಾಡಿದ್ದಾರೆ. ೨೦೨೩ ರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದೆ. ಆಕಾಂಕ್ಷಿಗಳಯ ಮತದಾರರನ್ನು ಸೆಳೆಯಲು ಭರ್ಜರಿ ಕಸರತ್ತು ನಡೆಸಿದ್ದಾರೆ. ಅದರಲಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಅವರು ಮುಂದಿದ್ದಾರೆ.
ಸಿರವಾರ ಪಟ್ಟಣದಲ್ಲಿ ಇಫ್ತಾರ್ ನೆಪದಲ್ಲಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಭರ್ಜರಿ ಬಾಡೂಟ ಕಾರ್ಯಕ್ರಮ ಏರ್ಪಡಿಸಿದ್ದರು .ಅಲ್ಲಿಗೆ ಸ್ವತಃ ಶಾಸಕರೇ ಆಗಮಿಸಿ, ಊಟವನ್ನು ಬಡಿಸುವ ಮೂಲಕ ಶುಭಕೋರಿ ನಂತರ ಮಾತನಾಡಿದ ಅವರು ಕಳೆದ ೬ ವರ್ಷಗಳಿಂದ ರಂಜಾನ್ ಹಬ್ಬದಲ್ಲಿ ಇಪ್ತಿಯಾರ ಕೂಟವನ್ನು ಆಯೋಜನೆ ಮಾಡುತ್ತಿದೆ ಈ ವರ್ಷ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮಾಡಲು ಆಗಿಲ ಆದರೂ ನಿಮ್ಮಗಳ ಒತ್ತಾಯಕ್ಕಾಗಿ ಇದರಲಿ ಭಾಗವಹಿಸಿರುವೆ. ಅದಿಕಾರ ಇರಲಿ ಇಲದೆ ಇರಲಿ ನಿಮ್ಮ ಜೊತೆ ಸದಾ ಇರುವೆ. ನಿಮ್ಮ ಆಶಿರ್ವಾದ ನಮಗೆ ಇರಬೇಕು ಎಂದರು.
ಈ ಸಂದರ್ಭದಲ್ಲಿ ರಾಜಾ ರಾಮಚಂದ್ರನಾಯಕ, ಈಶಪ್ಪಹೂಗಾರ, ಕಾಶಿನಾಥ ಸರೋದೆ, ಚಂದ್ರಶೇಖರ ಸ್ವಾಮಿ, ನಾಗರಾಜಭೊಗಾವತಿ, ರವಿಕುಮಾರ, ಸೂಗುರಯ್ಯ ಸ್ವಾಮಿ, ವಲಿಗುತ್ತೆದಾರ, ದಾನಪ್ಪ, ನಾಗರಾಜ, ಬಂದೇನವಾಜ, ಅರಳಪ್ಪ, ಎಂ.ಡಿ.ಹುಸೇನ್, ಷರಿಪ್, ಸತ್ತರಸಾಬ್, ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.