
ದಾವಣಗೆರೆ. ಮೇ.೧; ಜೆಡಿಎಸ್. ಪಕ್ಷ ಸಣ್ಣ ಪ್ರಾದೇಶಿಕ ಪಕ್ಷ. ಜಾತ್ಯಾತೀತ ನಿಲುವುಗಳನ್ನು ಹೊಂದಿರುವಂತಹ ಈ ಪಕ್ಷ ಮುಸಲ್ಮಾನರ ಶ್ರೇಯೋಭಿವೃದ್ಧಿಗೆ ತನ್ನ ಜಾತ್ಯಾತೀತ ಧೋರಣೆ ಮೂಲಕ ಎಲ್ಲರ ಮನ ಮುಟ್ಟುವಂತೆ ಕಾರ್ಯನಿರ್ವಹಿಸಿದೆ ಆದ್ದರಿಂದ ಸಮಾಜ ಬಾಂಧವರು ಈ ಬಾರಿ ಜೆಡಿಎಸ್ ಗೆ ಬೆಂಬಲ ನೀಡಬೇಕೆಂದು ಮುಸ್ಲಿಂ ಧಾರ್ಮಿಕ ಗುರುಗಳಾದ ಮೌಲಾನಾ ಮುಸ್ತಾಕ್ ಅಹಮ್ಮದ್ ರಜ್ಜಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿರುವ ಜೆ.ಅಮಾನುಲ್ಲಾ ಖಾನ್ಪ್ರಾರಂಭದಿಂದಲೂ ಒಂದೇ ಪಕ್ಷದಲ್ಲಿ ನೆಲೆಯೂರಿ ಪಕ್ಷಾಂತರ ಮಾಡದೇ ಇರುವಂತಹ ವ್ಯಕ್ತಿ. ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷವಾಗಿ ಮುಸ್ಲಿಂರ ಪ್ರಾಬಲ್ಯವಿರುವ ಸಮೀಕ್ಷೆಯ ಪ್ರಕಾರ ಸುಮಾರು 80 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವಂತಹ ಕ್ಷೇತ್ರದಲ್ಲಿ 2ನೇ ಬಾರಿಗೆ ಸ್ಪರ್ಧೆಗೆ ಅವಕಾಶ ನೀಡಿದ್ದಾರೆ.ನಮ್ಮಲ್ಲಿರುವಂತಹ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಮರೆತು ನಮ್ಮ ಸಮುದಾಯಕ್ಕೆ ಸೇರಿರುವ ಜೆ. ಅಮಾನುಲ್ಲಾ ಖಾನ್ ರನ್ನು ಬೆಂಬಲಿಸಿ ಮತ ಹಾಕುವುದರ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾವುಗಳೆಲ್ಲರೂ ಕೈ ಜೋಡಿಸಬೇಕಾಗಿದೆ ಎಂದರು.ಜೆ. ಅಮಾನುಲ್ಲಾ ಖಾನ್ ಕ್ಷೇತ್ರದಲ್ಲಿ ನಿರಂತರವಾಗಿ ಜನರ ಕೈಗೆ ಸಿಗುವಂತಹ ನಾಯಕರಾಗಿದ್ದಾರೆ.ದಕ್ಷಿಣ ಕ್ಷೇತ್ರದ ಪ್ರಬುದ್ಧ ಮತದಾರರು ಒಮ್ಮೆ ಚಿಂತಿಸಿ ಸೂಕ್ತ ಅಭ್ಯರ್ಥಿಗೆ ಮತದಾನ ಮಾಡಬೇಕಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಧಾರ್ಮಿಕ ಗುರುಗಳಾದ ಮೌಲಾನ ಅಬ್ದುಲ್ ಮುನಾಫ್,ಮೌಲಾನ ಸೈಯದ್ ಮಹಿಯುದ್ದೀನ್,ಮೌಲಾನ ಬಷೀರ್ ಅಹ್ಮದ್, ಮುಖಂಡರಾದ ಟಿ.ಅಸ್ಗರ್,ಸೈಯದ್ ಇಮ್ತಿಯಾಜ್,ಜಹೀರುದ್ದೀನ್ ಖಾನ್,ಶಾಹೀದ್ ಖಾನ್,ಇಬ್ರಾಹಿಂ ಉಪಸ್ಥಿತರಿದ್ದರು.