ಮಾನ್ವಿ,ಮಾ.೩೧- ಶಾಸಕ, ವಿಧಾನಸಭಾ ಸದಸ್ಯ,ವಿಧಾನಸಭಾ ಪರಿಷತ್ತು ಸದಸ್ಯ, ಕಾಡಾಧ್ಯಕ್ಷ, ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ಸೇರಿದಂತೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರದಾನ ಕಾರ್ಯದರ್ಶಿಯಾಗಿರುವ ಎನ್.ಎಸ್ ಬೋಸರಾಜ ಅವರು ಇನ್ನಷ್ಟೇ ಅಧಿಕಾರದ ಆಸೆ ಪಡುತ್ತೀರಾ ದಯವಿಟ್ಟು ರಾಯಚೂರು ನಗರ ಕ್ಷೇತ್ರಕ್ಕೆ ಮುಸ್ಲಿಂ ಜನಾಂಗಕ್ಕೆ ಕಾಂಗ್ರೆಸ್ ಟಿಕೆಟ್ ನೀಡಿ ನಮ್ಮ ಸಮುದಾಯಕ್ಕೆ ಸಿಗಬೇಕಾದ ನೈತಿಕ ಹಕ್ಕನ್ನು ನಮಗೆ ನೀಡಬೇಕು ಎಂದು ಜನಾಂಗದ ಯುವ ಮುಖಂಡ ಜಾವೀದ್ ಖಾನ್ ಹೇಳಿದರು.
ಪಟ್ಟಣದ ಪತ್ರಿಕಭವನದಲ್ಲಿ ಸುದ್ದಿಗೋಷ್ಠಿ ಕರೆದು ಮಾತಾನಾಡಿದ ಅವರು ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕ್ಷೇತ್ರವಾಗಿದ್ದರೂ ಕೂಡ ನಾವು ಅಲ್ಲಿನ ಲಿಂಗಾಯತ ಸಮುದಾಯಕ್ಕೆ ಬೆಂಬಲಿಸುತ್ತಾ ಬಂದಿದ್ದೇವೆ, ರಾಯಚೂರು ನಗರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತದಾರರು ಇರುವುದನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷದ ವರಿಷ್ಠರು ಟಿಕೆಟ್ ನೀಡಬೇಕಾಗಿದೆ ಎಂದರು ನಂತರ ಅಫ್ರೋಜ್ ಗುರು ಮಾತಾನಾಡಿದರು.