ಮುಸ್ಲಿಂರಿಗೆ ೨% ಮಿಸಲಾತಿಯನ್ನು ಹಿಂಪಡೆಯುವಂತೆ ಒತ್ತಾಯ

ಸಿರವಾರ.ಮಾ೨೭- ಮುಸ್ಲಿಂರಿಗೆ ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತರಲು ಉದೇಶಿಸಿರುವ ೨ % ಮಿಸಲಾತಿಯು ಅವೈಜ್ಞಾನದಿಂದ ಕೂಡಿದ್ದೂ, ಅದನ್ನು ಹಿಂಪಡೆದು ಮೊದಲಿನಂತೆ ೪% ಮಿಸಲಾತಿಯನ್ನು ಯತ್ತಾಸ್ಥಿತಿ ಕಾಯ್ದುಕೊಳುವಂತೆ ಅಂಜುಮಾನ್ ಕಮಿಟಿಯು ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ತಹಸೀಲ್ದಾರ ಕಛೇರಿಯಲ್ಲಿ ಜಮಾವಣೆಗೊಂಡ ಅಂಜುಮಾನ ಕಮಿಟಿ ಸದಸ್ಯರು, ಹಾಗೂ ಮುಸ್ಲಿಂರು ತಹಸೀಲ್ದಾರರಿಗೆ ನೀಡಿದ ಮನವಿ ಪತ್ರದಲ್ಲಿ ದೇಶ ಸ್ವತಂತ್ರ ಬಂದು ೭೬ ವರ್ಷಗಳಾದರೂ ನಮ್ಮ ಮಿಸಲಾತಿ ೪% ಇತ್ತು. ಆದರೆ ಈಗಿನ ರಾಜ್ಯ ಸರ್ಕಾರ ನಮನೂ ಒಡೇದು ಆಳಯವ ನೀತಿಯನ್ನು ಅನುಸರಿಸುತ್ತಿದೆ.
ನಮಗೆ ಇದ್ದ ೪% ಮಿಸಲಾತಿಯನ್ನು ೨ % ಇಳಿಸಲಾಗಿದೆ. ಇದು ನಮ್ಮ ಸಮಾಜದ ಮೇಲೆ ಬಿಜೆಪಿ ಸರ್ಕಾರ ಮಾಡುತ್ತಿರುವ ಶೋಷಣೆಯಾಗಿದೆ. ಈ ಹಿಂದೆ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ನೀಡುತ್ತಿದ ವಿದ್ಯಾರ್ಥಿ ವೇತನವನ್ನು ಸಹ ತಡೆಹಿಡಿಯಲಾಗಿದೆ. ಇದೇ ರೀತಿ ಒಂದೊಂದು ಮೀಸಲಾತಿಯನ್ನು ತೆಗೆಯುವ ಮೂಲಕ ನಾವು ಭಾರತೀಯರೆ ಅಲ್ಲವೆಂಬುದನ್ನು ಮಾಡುತ್ತಿರುವುದು ದುಃಖದ ಸಂಗತಿಯಾಗಿದೆ.
ಕೂಡಲೇ ೨% ಮೀಸಲಾತಿ ಆದೇಶವನ್ನು ಹಿಂಪಡೆದು ಈ ಹಿಂದೆ ಇದ್ದಂತಹ ೪% ಮೀಸಲಾತಿಯನ್ನು ಯತಾಸ್ಥಿತಿ ಕಾಯ್ದುಕೊಳದಿದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದಿದ್ದಾರೆ. ಅಂಜುಮಾನ್ ಕಮಿಟಿ ಅಧ್ಯಕ್ಷ ಎಂ.ಡಿ.ವಲಿಸಾಬ್ ಗುತ್ತೆದಾರ, ಎಂ.ಡಿ.ಅಜುಮುದ್ದಿನ್, ಎಂ.ಡಿ.ವಾಹೀದ್, ಸತ್ತರಸಾಬ್, ಅಜುಮುದ್ದಿನ್ ಸಾಬ್, ಸತ್ತರ ಸಾಬ್, ಅಜ್ಮುದಿನ್ ಸಾಬ್, ಅಜ್ಮೀರ್ ಸಾಬ್, ಇಬ್ರಾಹಿಂ ಸಾಬ್, ಪಾಷ, ಮೌಲಾ, ಅಸ್ಲಾಂ, ಗುಲ್ಜರ್, ರಫಿ, ಇಸ್ಮಾಯಿಲ್, ರಫಿ ಗುತ್ತೆದಾರ, ಮಹ್ಮದ್, ಗೌಸ್ ಸೇರಿದಂತೆ ಇನ್ನಿತರರು ಇದ್ದರು.