ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.24: ಮುಸ್ಲಿಂ ಸಮುದಾಯವು ಬಡತನದ ಕಾರಣದಿಂದಾಗಿ ಶಾಲೆಯಿಂದ ಹೊರಗುಳಿದಿರುವ ಕಾರಣ ಮಾಹಿತಿ ಕೊರತೆಯಿಂದಾಗಿ ಸರ್ಕಾರದ ಸೌಲಭ್ಯಗಳ ಬಗ್ಗೆ ಅರವಿನ ಕೊರತೆಯಿಂದಾಗಿ ಇಂದಿಗೂ ಸಹ ಅವರಿಗೆ ಸರ್ಕಾರದ ಸೌಲತ್ತುಗಳು ಮರೀಚಿಕೆ ಆಗಿವೆ ಎಂದು ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್ ಅಭಿಪ್ರಾಯಪಟ್ಟರು.ನಗರದ ರೋಟರಿ ಬಾಲ ಭವನದಲ್ಲಿ ನೆರಳುಬೀಡಿ ಕಾರ್ಮಿಕರ ಯೂನಿಯನ್ ದಾವಣಗೆರೆ, ದಲಿತ ಮುಸ್ಲಿಂ ಒಕ್ಕೂಟ ದಾವಣಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವತಿಯಿಂದ ಆಯೋಜಿಸಲಾಗಿದ್ದ ಮುಸ್ಲಿಂ ಸಮುದಾಯಕ್ಕೆ ಇರುವ ಸರ್ಕಾರಿ ಸೌಲಭ್ಯಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾರತದಲ್ಲಿ ಮುಸ್ಲಿಂ ಸಮುದಾಯ ಅತಿದೊಡ್ಡ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯ. ಅವರು ತಮ್ಮ ಧಾರ್ಮಿಕ ಸಂಪ್ರದಾಯದಿAದಾಗಿ ಶಿಕ್ಷಣದಿಂದ ದೂರ ಉಳಿದಿರುವುದೇ ಪ್ರಮುಖ ಅಂಶವಾಗಿದೆ ಎಂಬ ಗ್ರಹಿಕೆ ತಪ್ಪಾಗಿದೆ ಎಂದು ಅನೇಕ ವರದಿಗಳು ಹೇಳಿವೆ. ಅನೇಕ ಭಾರತೀಯರಂತೆ ಮುಸ್ಲಿಮರಲ್ಲಿ ಶಿಕ್ಷಣದಿಂದ ಹಿಂದುಳಿಯಲು ಅವರ ಕಡುಬಡತನಕ್ಕೆ ಕಾರಣವಾಗಿದೆ ಎಂದರು.ಸರ್ಕಾರದ ಇಲಾಖೆಗಳಿಂದ ಸಿಗಲಾಗುವ ಸೌಲಭ್ಯಗಳ ಬಗ್ಗೆ ಇಲಾಖೆಗಳು ಜಾಗೃತಿ ಮೂಡಿಸಬೇಕು. ಅದರಲ್ಲೂ ಸಮಾಜದ ಮುಖ್ಯ ವಾಹಿನಿಗೆ ಬರಲಾರದ ಅಲ್ಪಸಂಖ್ಯಾತರನ್ನು ಗುರುತಿಸಿ ಸರ್ಕಾರದ ಇಲಾಖೆಗಳು ಅವರಿಗೆ ಸೂಕ್ತ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕಾಗಿದೆ ಎಂದು ಹೇಳಿದರು.ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ದಾವಣಗೆರೆ ಜಿಲ್ಲಾ ವ್ಯವಸ್ಥಾಪಕ ಸೈಯದ್ ಜುನೆದ್ ಪಾಷಾ ಮಾತನಾಡಿ, ಅಲ್ಪಸಂಖ್ಯಾತರ ಎಂದರೆ ಕೇವಲ ಮುಸ್ಲಿಂ ಸಮುದಾಯ ಮಾತ್ರ ಅಲ್ಲ. ಹಲವಾರು ಜಾತಿಗಳಿವೆ ಇವರಿಗೆ ಶಿಕ್ಷಣದ ಕೊರತೆ ಇದಕ್ಕೆಲ್ಲ ಕಾರಣ ಕಾರಣ ಇಂತಹ ಕೀಳರಮೆಯನ್ನು ತೊಡೆದು ಹಾಕಿ ನೀವು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರೆ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ನೆರಳು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಜಬೀನಾ ಖಾನಂ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಮಠದ, ದಲಿತ ಮುಸ್ಲಿಂ ಮಹಿಳಾ ಒಕ್ಕೂಟದ ಅಧ್ಯಕ್ಷ ನಾಹೇರಬಾನು, ನೆರಳುಬೀಡಿ ಕಾರ್ಮಿಕರ ಸಂಘದ ಯೂನಿಯನ್ ನ ಇಸಿ ಸದಸ್ಯೆ ರುಕ್ಷನಾಬಾನು. ಪ್ರಧಾನ ಕಾರ್ಯದರ್ಶಿ ಎಂ.ಕರಿಬಸಪ್ಪ ಇತರರು ಇದ್ದರು.