ಮುಸ್ತಾಕ್ ಕಟ್ಟಿಗೆ ಯಾರ್ಡ್ ಗೆ ಬೆಂಕಿ ಅಪಾರ ನಷ್ಟ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.10 : ಮೆಹಬೂಬ್ ನಗರದ ಹರಿಶ್ಚಂದ್ರ ಘಾಟ್ ಬಳಿಯ ಕಟ್ಟಿಗೆ ಸ್ಟಾಕ್ ಯಾರ್ಡ್ ನಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡು   ಅಪಾರ ಪ್ರಮಾಣದ ಹಾನಿಯಾಗಿದೆ.
ಮುಸ್ತಾಕ್ ಎಂಬುವವರಿಗೆ ಸೇರಿದ ಈ ಕಟ್ಟಿಗೆ ಯಾರ್ಡ್ ನಲ್ಲಿ  ಕಟ್ಟಡಗಳಿಗೆ ಕಿಟಕಿ, ಬಾಗಿಲು ಹಾಗೂ ಗೃಹಪಯೋಗಿ ವಸ್ತುಗಳನ್ನು ತಯಾರಿಸಲು ಬೇಕಾದ ಕಟ್ಟಿಗೆ ಕೊರೆಸಿ  ಸಂಗ್ರಹ ಮಾಡಲಾಗಿತ್ತು.
ಮುಸ್ತಾಕ್ ಅವರು ಹೇಳುವಂತೆ   20 ಲಕ್ಷ ರೂ.ಗಳ  ಮವಬಲ್ಯದ ಕಟ್ಟಿಗೆ ಸಂಗ್ರಹ ಇಲ್ಲಿ ಮಾಡಲಾಗಿತ್ತು. ಅಗ್ನಿ ಅವಘಡಕ್ಕೆ ಕಾರಣ ಏನೆಂದು ಗೊತ್ತಾಗಿಲ್ಲ. ಯಾರೋ ದುಷ್ಕರ್ಮಿಗಳು ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಅಂಟಿಸಿರಬಹುದು ಎಂದು ಅನುಮಾನಿಸಲಾಗಿದೆ.