ಮುಸುರಿ ನೀರು ಕುಡಿದ ಎತ್ತುಗಳ ಸಾವು

ಇಲಕಲ್ಲ : ಫೆ.28:ತಾಲೂಕಿನ ತುಂಬ ಗ್ರಾಮದ ರೈತನಾದ ನಿಂಗನಗೌಡ ಅಗಸಿ ಮುಂದಿನ ಎಂಬ ರೈತನ
ಎರಡು ಎತ್ತುಗಳು ಸಾವನ್ನಪ್ಪಿದ ಕಾರಣ ಘಟನೆ ನಿನ್ನೆ ನಡೆದಿದೆ.

ಎತ್ತುಗಳು ಸಾವನ್ನಪ್ಪಿದ ಕುರಿತು ಮಾತನಾಡಿದ ರೈತ ನಿಂಗನಗೌಡ
ರಾತ್ರಿ ಎತ್ತುಗಳಿಗೆ ಮುಸುರಿ ನೀರನ್ನು ಕುಡಿಯಲು ಇಡಲಾಗಿತ್ತು, ಅದನ್ನು ಕುಡಿದ ನಂತರ ಎತ್ತುಗಳು ಒದ್ದಾಡಲು ಪ್ರಾರಂಭಿಸಿದವು, ರಾತ್ರಿಯ ವೈದ್ಯರನ್ನ ಕರೆಸಿ ತೋರಿಸಿದಾಗಲೂ ನನ್ನ ಎತ್ತುಗಳು ಉಳಿಯಲಿಲ್ಲ, ಹೀಗಾಗಿ ಈ ಮುಸುರಿ ನೀರಲ್ಲೇ ವಿಷ ಹಾಕಿದ್ದಾರೆ ಎಂದು ಹೇಳಿದನು.

ಮರಣ ಹೊಂದಿದ ಎತ್ತುಗಳನ್ನು ಗ್ರಾಮದ ಎಲ್ಲಾ ಜನರು ಟ್ರ್ಯಾಕ್ಟರ್ ಮೂಲಕ ಗ್ರಾಮದ ತುಂಬೆಲ್ಲ ಹಾರ ಹಾಕಿ ಮೆರವಣಿಗೆ ನಡೆಸಿ, ಪೂಜೆ ಸಲ್ಲಿಸಿ ಅಂತ ಸಂಸ್ಕಾರ ನಡೆಸಿದರು. ಅಕಾಲಿಕ ಮರ ಅಪ್ಪಿದ ಜೋಡೆತ್ತುಗಳ ಪರಿಸ್ಥಿತಿ ಹಾಗೂ ರೈತನ ಸ್ಥಿತಿಯನ್ನು ಕಂಡ ಗ್ರಾಮದ ಜನರು ಅಳುವ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸಿತ್ತು.